ಸಾನಿಯಾ ಮಿರ್ಜಾ ಬದುಕಲ್ಲಿ ಬೆಂಕಿ ಬಿರುಗಾಳಿ ಎದ್ದಿದೆ. ಇದ್ದಕ್ಕಿದ್ದ ಹಾಗೇ ಸಾನಿಯಾ ಮಿರ್ಜಾ ಪತಿ, ಪಾಕಿಸ್ತಾನದ ಮಾಜಿ ಕ್ರಿಕೆಟರ್ ಶೋಯಬ್ ಮಲ್ಲಿಕ್, ಮತ್ತೊಂದು ಮದುವೆಯಾಗಿದ್ದಾರೆ. ಇದು ಸಾನಿಯಾ ಮಿರ್ಜಾ ಅಭಿಮಾನಿಗಳಿಗೆ ಶಾಕಿಂಗ್ ಎನಿಸಿದೆ. ಇದೀಗ ಈ ವಿಚಾರವಾಗಿ ಸಾನಿಯಾ ಮಿರ್ಜಾ ತಂದೆ ಇಮ್ರಾನ್ ಮಿರ್ಜಾ, ಪ್ರತಿಕ್ರಿಯೆ ನೀಡಿದ್ದಾರೆ.
‘ನನ್ನ ಮಗಳು ಶೋಯಬ್ ಗೆ ಖುಲಾ ನೀಡಿದ್ದಾಳೆ. (ಖುಲಾ ಎಂದರೆ ಹೆಣ್ಣು ಮಕ್ಕಳು ತನ್ನ ಪತಿಯಿಂದ ಬಿಡುಗಡೆ ಕೇಳುವ ಸ್ವಾತಂತ್ರ್ಯ). ಇದು ಸಮ್ಮತಿಯ ವಿಚ್ಛೇದನವಾಗಿದೆ. ಈ ಮೂಲಕ ಮದುವೆಯ ಬಂಧದಿಂದ ತನ್ನನ್ನು ಬಿಡುಗಡೆ ಮಾಡುವಂತೆ ಪತಿಗೆ ಮಹಿಳೆ ತಿಳಿಸುವ ಕ್ರಮ ಎಂದಿದ್ದಾರೆ. ಸಾನಿಯಾ ಈ ಮೊದಲೇ ಪತಿಯಿಂದ ದೂರವಾಗಿದ್ದರು ಎಂಬುದನ್ನು ಅವರ ತಂದೆ ಸ್ಪಷ್ಟ ಪಡಿಸಿದ್ದಾರೆ.
ಪಾಕ್ ಮಾಜಿ ಕ್ರಿಕೆಟಿಕ ಶೋಯಬ್ ಮಲಿಕ್, ಸಾನಿಯಾ ಮಿರ್ಜಾ ಅವರನ್ನು ಎರಡನೇ ಮದುವೆಯಾಗಿದ್ದರು. ಸುಮಾರು 12 ವರ್ಷಗಳ ದಾಂಪತ್ಯ ಜೀವನ. ಈ ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಆದರೆ ಶೋಯಬ್ ಜೊತೆಗೆ ಸಾನಿಯಾ ವಿಚ್ಛೇದನ ಪಡೆದಿದ್ದಾರೆ. ವಿಚ್ಛೇದನದ ಬಳಿಕ ಶೋಯಬ್, ಪಾಕ್ ನಟಿಯನ್ನು ಮದುವೆಯಾಗಿದ್ದಾರೆ. ಸನಾ ಜಾವೇದ್ ಜೊತೆಗೆ ಮತ್ತೊಂದು ಹೊಸ ಜೀವನ ಪ್ರಾರಂಭಿಸಿದ್ದಾರೆ.
ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ನಡುವೆ ಬಿರುಕು ಮೂಡುವುದಕ್ಕೆ ಇದೇ ಸನಾ ಕಾರಣ ಎಂದು ಹೇಳಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಶೋಯೆಬ್ ಹಾಗೂ ಸನಾ ಡೇಟಿಂಗ್ ಮಾಡುತ್ತಿದ್ದರಂತೆ. ಈ ವಿಚಾರ ತಿಳಿದ ಬಳಿಕ ಸಾನಿಯಾ ಹಾಗೂ ಶೋಯಬ್ ನಡುವೆ ಜಗಳ ನಡೆಯುತ್ತಲೆ ಇತ್ತಂತೆ. ಅದಕ್ಕೆ ಅಂತ್ಯವೆಂಬಂತೆ ಇಬ್ಬರು ಡಿವೋರ್ಸ್ ಪಡೆದುಕೊಂಡಿದ್ದಾರೆ. ಈಗ ಶೋಯಬ್ ಮೂರನೇ ಮದುವೆಯಾಗಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















