ಬೆಂಗಳೂರು: ಬಿಹಾರ ಚುನಾವಣೆಯ ಫಲಿತಾಂಶ ಕರ್ನಾಟಕ ಬಿಜೆಪಿಗೆ ಆನೆ ಬಲ ಬಂದಂತೆ ಆಗಿದೆ. ಇದರಲ್ಲಿ ಒಂದು ಭ್ರ ಷ್ಟ ಸಂದೇಶವೂ ಇದೆ. ನಾವೆಲ್ಲಾ ಒಂದಾಗಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿ ಓಡಿಸಬೇಕಿದೆ. ಹಾಗೇ ಕೇಂದ್ರ ಸರ್ಕಾರದ ನರೇಂದ್ರ ಮೋದಿಜಿ ಅವರ ಕಾರ್ಯಕ್ರಮವನ್ನು ಮನೆ ಮನೆಗೆ ತೆರಳಿ ತಲುಪಿಸುವುದಕ್ಕೆ ಕಾರ್ಯಪ್ರವೃತ್ತರಾಗಬೇಕಿದೆ.
ಇದೆಲ್ಲದಕ್ಕಿಂತ ಮಿಗಿಲಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಮಾಡ್ತಿರುವ ಷಡ್ಯಂತ್ರವನ್ನು ಬಯಲಿಗೆಳೆಯಬೇಕಿದೆ. ಈ ಹಿಂದೆ 40% ಸರ್ಕಾರ ಅಂತ ಹೇಳಿ ಬಿಜೆಪಿ ಸರ್ಕಾರವನ್ನು ಕೆಳಗಿಳಿಸುವಲ್ಲಿ ಯಶಸ್ವಿ ಆಯ್ತು. ಅದನ್ನ ನಾನು ಒಪ್ಪಿಕೊಳ್ತೇನೆ. ಬಿಜೆಪಿ ವಿರುದ್ಧ ಆರೋಪಿಸಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅವರೇ ಒಪ್ಪಿಸಿದ್ದಂತ ತನಿಖಾ ತಂಡ ಅದರಲ್ಲಿ ಯಾವುದೇ ಉರುಳಿಲ್ಲ ಅನ್ನೋದು ಗೊತ್ತಾಯ್ತು. ಈಗ ನೋಡಿದ್ರೆ ಗ್ಯಾರಂಟಿಗಳಿಂದ ಬೇಸತ್ತಿರುವ ಸಿದ್ದರಾಮಯ್ಯ ಸರ್ಕಾರ ಮಾತಿಗೆ ಮುಂಚೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡ್ತಾ ಇದ್ದಾರೆ. ಆ ಬಗ್ಗೆ ಬಲವಾಗಿ ವಿರೋಧ ಮಾಡಬೇಕಾಗುತ್ತದೆ, ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಕಳೆದ ಎರಡು ವರ್ಷದಿಂದ ಏನನ್ನ ಅಭಿವೃದ್ಧಿ ಮಾಡಿದ್ದಾರೆ ಹೇಳಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಇದೆ ವೇಳೆ ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಮಾತನಾಡಿದ ವಿಜಯೇಂದ್ರ ಅವರು, ನಿನ್ನೆಯಿಂದ ಸಾಕಷ್ಟು ಚರ್ಚೆಗಳು ನಡೆದಿದ್ದಾವೆ. ನನಗೂ ಸ್ಪಷ್ಟತೆ ಇದೆ. ನಾನೇ ಅಧ್ಯಕ್ಷನಾಗಿ ಮುಂದುವರೆಯುತ್ತೇನೆ ಎಂಬ ಮಾತನ್ನು ವಿಜಯೇಂದ್ರ ಅವರು ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೆ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆಯ ಚರ್ಚೆ ಜೋರಾಗಿ ನಡೆಯುತ್ತಿದೆ. ಆದರೆ ಬಿಹಾರ ಎಲೆಕ್ಷನ್ ನಿಂದ ಎಲ್ಲವೂ ಉಲ್ಟಾ ಆಗಲಿದೆ.















