Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದ ಕವಿಯತ್ರಿ ಆರ್. ಶೈಲಜಾ ಬಾಬು ಅವರಿಗೆ ಸಾಹಿತ್ಯ ವಿಭೂಷಣ ಪ್ರಶಸ್ತಿ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಆ. 20 : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕು ನಾಗರಮುನ್ನೋಳಿಯಲ್ಲಿನ ಮಾನವ ಜೀವನದ ಬೆಳಕು ಕವಿತ್ತ ಕರ್ಮಮಣಿ ಫೌಂಡೇಶನ್ (ರಿ), ವತಿಯಿಂದ ಚಿತ್ರದುರ್ಗದ ಕವಿಯತ್ರಿಯಾದ ಶ್ರೀಮತಿ ಆರ್. ಶೈಲಜಾ ಬಾಬು ರವರಿಗೆ ‘ಸಾಹಿತ್ಯ ವಿಭೂಷಣ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಫೌಂಡೇಶನ್‍ನ ಅಧ್ಯಕ್ಷರಾದ ಲಾಲಸಾಬ ಹೆಚ್ ಪೆಂಡಾರಿ ತಿಳಿಸಿದ್ದಾರೆ.

ಮಾನವ ಜೀವನದ ಬೆಳಕು ನಮ್ಮ ‘ಕವಿತ್ತ ಕರ್ಮಮಣಿ ಪೌಂಡೇಶನ್’ನ ಸಂಚಾಲಕ ಮಂಡಳಿಯು ತಮ್ಮ ಸಾಹಿತ್ಯ, ಭಾಷೆ, ನೆಲ-ಜಲ, ಸಂಸ್ಕೃತಿ, ಸಂಗೀತ, ಕಲೆ ಮೊದಲಾದ ಕ್ಷೇತ್ರಗಳಲ್ಲಿಯ ಗಣನೀಯ ಸೇವೆ-ಸಾಧನೆ, ಜ್ಞಾನ ಮತ್ತು ಪ್ರೀತಿಯನ್ನು ಗುರುತಿಸಿ ಕವಿಯತ್ರಿಯಾದ ಶ್ರೀಮತಿ ಆರ್. ಶೈಲಜಾ ಬಾಬು ರವರನ್ನು ‘ಸಾಹಿತ್ಯ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯನ್ನು ದಿನಾಂಕ ಆ. 23 ಆಗಸ್ಟ್ 2026 ರಂದು ನಡೆಯಲಿರುವ ‘ರಾಷ್ಟ್ರಮಟ್ಟದ ಕವಿಗೋಷ್ಠಿ ಹಾಗೂ ಸಾಧಕರಿಗೆ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ನೀಡಲಾಗುವುದು ಎಂದು ಕೆ ಕೆ ಫೌಂಡೇಶನ್ (ರಿ)ನ ಅಧ್ಯಕ್ಷರಾದ ಲಾಲಸಾಬ ಹೆಚ್ ಪೆಂಡಾರಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now