ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 20 : ಚಳ್ಳಕೆರೆ ರಸ್ತೆ ವೆಂಕಟೇಶ್ವರ ಬಡಾವಣೆಯ ನಿವಾಸಿಗಳು ವಸತಿ ಕಲ್ಪಿಸುವಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಅನೇಕ ವರ್ಷಗಳಿಂದಲೂ ಇಲ್ಲಿ ವಾಸಿಸುತ್ತಿರುವ ನಮಗೆ ಸ್ವಂತ ನಿವೇಶನವಾಗಲಿ, ಮನೆಗಳಾಗಲಿ ಇಲ್ಲ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ಕೂಲಿ ಮಾಡಿಕೊಂಡು ಬದುಕುತ್ತಿರುವ ನಮಗೆ ದಿನನಿತ್ಯದ ಪದಾರ್ಥಗಳನ್ನು ಕೊಂಡುಕೊಂಡು ವಾಸಿಸುವುದು ಕಷ್ಟವಾಗಿದೆ. ಒಂದು ತಾಲ್ಲೂಕಿಗೆ ಐವತ್ತು ಸಾವಿರ ನಿವೇಶನಗಳನ್ನು ನೀಡಲು ಸರ್ಕಾರದ ಆದೇಶವಿದೆ. ಅದರಂತೆ ನಮಗೆ ನಿವೇಶನಗಳನ್ನು ಕೊಟ್ಟು ಮನೆಗಳನ್ನು ಕಟ್ಟಿಸಿಕೊಳ್ಳಲು ನೆರವಾಗುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘದ ಅಧ್ಯಕ್ಷ ಜಿ.ಎಂ.ಪ್ರಕಾಶ್, ಗಂಗಮ್ಮ, ಟಿ.ದ್ರಾಕ್ಷಾಯಿಣಿ, ಮೇರಿ, ಲಕ್ಷ್ಮಿ, ಮಂಜುಳ, ರತ್ನಮ್ಮ, ಮಮತ, ಸರೋಜಮ್ಮ, ಭೈರಮ್ಮ
ಗಂಗಾ, ಸುಧಾ, ಚೌಡಮ್ಮ, ಕಮಲಮ್ಮ, ಪದ್ಮಾವತಿ, ನಾಗರತ್ನ, ಕಾವ್ಯ, ಹನುಮಕ್ಕ ಇವರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.











