Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಿವೋರ್ಸ್ ಗೆ ಅಂತ ಬಂದವರು ಮತ್ತೆ ಒಂದಾದ್ರು : ದಾವಣಗೆರೆಯ ದಂಪತಿಯನ್ನ ದೂರ ಮಾಡಲು ನೋಡಿದ್ಯಾರು..?

---Advertisement---

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಅನ್ನೋದು ಮಾಮೂಲಿ ಆಗಿ ಹೋಗಿದೆ. ಕೆಲವೊಂದು ಡಿವೋರ್ಸ್ ಕೇಸ್ ಗಳು ಹೊಂದಾಣಿಕೆಯಾಗದೆ ದೂರ ದೂರ ಆದರೆ ಇನ್ನು ಕೆಲವೊಂದು ಜೋಡಿಗಳು ಯಾರದ್ದೋ ಮಧ್ಯಪ್ರವೇಶ, ಮೂರನೆಯವರ ಹೇಳಿಕೆಗಳಿಂದ ದೂರವಾಗುತ್ತಾರೆ. ದಾವಣಗೆರೆಯಲ್ಲೂ ಅಂಥದ್ದೇ ಘಟನೆ ನಡೆದಿದ್ದು, ಸದ್ಯ ಡಿವೋರ್ಸ್ ಪಡೆಯಲು ಬಂದ ಜೋಡಿ ಮತ್ತೆ ಹಾರ ಬದಲಾಯಿಸಿಕೊಂಡು ಒಂದಾಗಿದ್ದಾರೆ. ಇದು ಒಂದಷ್ಟು ಜನರಿಗೆ ಸ್ಪೂರ್ತಿಯೇ ಸರಿ.

ಒಂದಲ್ಲ‌ ಎರಡಲ್ಲ ದೂರವಾಗಿ ಬಿಡೋಣಾ‌ಅಂತ ಬಂದಿದಲ್ಲ ಐದಾರು ಜೋಡಿಯನ್ನ ಲೋಕ ಅದಾಲತ್ ನಲ್ಲಿ ಮತ್ತೆ ಒಟ್ಟುಗೂಡಿಸಿದ್ದಾರೆ. ಡಿವೋರ್ಸ್ ಆಸೆಯಿಂದ ಹಿಂದೆ ಸರಿಯುವಂತೆ ಮನವೊಲಿಸಿ, ಮತ್ತೆ ಒಟ್ಟಿಗೆ ಬದುಕುವಂತೆ ವಕೀಲರು ಮಾಡಿದ್ದಾರೆ. ವಕೀಲರ ಮಾತುಗಳನ್ನ ಅರ್ಥ ಮಾಡಿಕೊಂಡು, ಒಂದಾದ ಜೋಡಿಗಳು ಹೇಳಿದ್ದೇ, ಸಂಸಾರದಲ್ಲಿ ಮೂರನೆಯವರ ಮಾತಿಗೆ ಕಿವಿಕೊಡಬೇಡಿ ಎಂದು. ಇದು ಸತ್ಯ ಕೂಡ. ಅದೆಷ್ಟೋ ಜನರ ಬದುಕು ಬೇಡದವರ ಮಾತುಗಳನ್ನು ಕೇಳಿಸಿಕೊಂಡಿದ್ದ ಕಾರಣದಿಂದಾನೇ ಬಂದಿದೆ.

ಒಂದು ವರ್ಷದಿಂದ ದೂರ ಇದ್ವಿ, ಇನ್ಮೇಲೆ ಹಾಗೇ ಆಗಲ್ಲ. ಒಟ್ಟುಗೆ ಬಾಳ್ತೀವಿ. ಇಬ್ಬರ ನಡುವೆ ಬೇರೆಯವರಿಗೆ ಲಾಭ ಎಂಬಂತೆ ಆಗೋದು ಬೇಡ. ಬೇರೆಯವರನ್ನ ಹತ್ರಕ್ಕೆ ಸೇರಿಸಿಕೊಳ್ಳಬೇಡಿ. ಒಂದು ವರ್ಷ ದೂರ ಇದ್ದು ಎಷ್ಟು ಸಫರ್ ಆಗಿದ್ದೀನಿ ಅಂತ ನಂಗೆ ಗೊತ್ತು. ಆದರೆ ಇನ್ಮೇಲೆ ಚೆನ್ನಾಗಿರ್ತೀವಿ. ಡಿವೋರ್ಸ್ ತಗೋಳ್ಬೇಕು ಅಂತ ಇರಲಿಲ್ಲ. ಆದರೆ ನನ್ನ ಗಂಡ ಒಳ್ಳೆಯವರಾಗಬೇಕಿತ್ತು ಎಂದು ಡಿವೋರ್ಸ್ ತೆಗೆದುಕೊಳ್ಳಬೇಕು ಎಂದು ಬಂದ ಮಹಿಳೆ ಹೇಳಿದ್ದಾರೆ. ಒಟ್ಟಾರೆ ಲೋಕ್ ಅದಾಲತ್ ಮೂಲಕ ಕೆಲವರ ಸಂಸಾರ ಸರಿ ದಾರಿಗೆ ಬಂದಿರೋದು ಖುಷಿಯ ವಿಚಾರವೇ ಅಲ್ವಾ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment