Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳಿಗಾಲದಲ್ಲಿ ಮೂಳೆಗೆ ವರದಾನವಾಗಲಿದೆ ಈ ಮೆಂತ್ಯೆ

---Advertisement---

ಚಳಿಗಾಲ ಇನ್ನು ಇದೆ. ಒಂದು ಕಡೆ ಚರ್ಮದ ಕಾಳಜಿ ಮಾಡಬೇಕು. ಮತ್ತೊಂದು ಕಡೆ ಶೀತ ನೆಗಡಿಯಾಗದಂತೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಜೊತೆಗೆ ದೇಹದ ಮೂಳೆಗಳು ಬಲಿಷ್ಠವಾಗಿರುವಂತೆಯೂ ನೋಡಿಕೊಳ್ಳಬೇಕು. ಅದಕ್ಕಾಗಿ ಉತ್ತಮ ಆಹಾರವೂ ನಮ್ಮ ದಿನನಿತ್ಯದ ಕ್ರಮದಲ್ಲಿ ಇರಬೇಕಾಗುತ್ತದೆ. ಈ ಚಳಿಗಾಲದಲ್ಲಿ ಮೂಳೆಗಳ ರಕ್ಷಣೆಗೆ ಮೆಂತ್ಯವನ್ನು ಬಳಸಬಹುದು. ಹೇಗೆ ಬಳಸಬೇಕು..? ಹೇಗೆ ಉಪಯುಕ್ತವಾಗಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

* ಚಳಿಗಾಲದಲ್ಲಿ ಮೆಂತ್ಯ ಸೇವನೆ ಮಾಡುವುದು ಬಹಳ ಪ್ರಯೋಜನಕಾರಿಯಾಗಿದೆ. ಆರೋಗ್ಯದ ಮೇಲೆ ಹಲವು ರೀತಿಯ ಪ್ರಯೋಜನವೂ ಸಿಗಲಿದೆ. ಅದರಲ್ಲೂ ಕೀಲು ನೋವಿಗೆ ರಾಮಬಾಣವಿದ್ದಂತೆಯೇ ಸರಿ.

* ಮೆಂತ್ಯ ಬೀಜಗಳಲ್ಲಿ ಹಲವು ಪೋಷಕಾಂಶಗಳು ಇದಾವೆ. ಕಬ್ಬಿಣಾಂಶ, ಕ್ಯಾಲ್ಸಿಯಂ, ರಂಜಕ, ವಿಟಮಿನ್ ಎ, ವಿಟಮಿನ್ ಡಿ ಅಂಶಗಳಹ ಅಧಿಕವಾಗಿವೆ. ಆದ ಕಾರಣ ಮೂಳೆಗಳನ್ನು ಬಲಪಡಿಸಲು ಈ ಅಂಶಗಳು ಸಾಕಷ್ಟು ಪ್ರಯೋಜನಕಾರಿಯಾಗಿವೆ.

* ಮೆಂತ್ಯವನ್ನು ರೆಗ್ಯುಲರ್ ಆಗಿ ಬಳಕೆ ಮಾಡುವುದರಿಂದ ಮೂಳೆ ಮುರಿತದಿಂದ ತಪ್ಪಿಸಿಕೊಳ್ಳಬಹುದು. ಇದರಲ್ಲಿ ಹಿಸ್ಪಿಡಿನ್ ಅಂಶವೂ ಇರುವ ಕಾರಣ ಮೂಳೆಗಳನ್ನು ಬಲಪಡಿಸಲು ಸಹಾಯಕವಾಗಿದೆ.

* ರಂಜಕವು ಅಧಿಕ ಪ್ರಮಾಣದಲ್ಲಿ ಇರುವುದರಿಂದ ಮೆಂತ್ಯ ಬೀಜಗಳು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೂಳೆಗಳು ದುರ್ಬಲಗೊಳ್ಳದಂತೆ ತಡೆಯುತ್ತವೆ.

* ಮೆಂತ್ಯ ಬೀಜದಲ್ಲಿರುವ ಕೆಲವು ಅಂಶಗಳು ಮೂಳೆ ಸವೆತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೆಂತ್ಯ ಬೀಜಗಳು ಫೈಬರ್‌ನಲ್ಲಿ ಸಮೃದ್ಧವಾಗಿದ್ದು ತೂಕವನ್ನು ಕಡಿಮೆ ಮಾಡುತ್ತದೆ. ಇದರಿಂದ ತೂಕ ಏರಿಕೆಯಿಂದ ಬರುವ ಕೀಲು ನೋವು ಗುಣವಾಗುತ್ತದೆ.

* ಮೆಂತ್ಯವನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿ. ಬೆಳಿಗ್ಗೆ ಈ ನೀರನ್ನು ಫಿಲ್ಟರ್ ಮಾಡಿ ಕುಡಿಯಿರಿ. ಇದು ಕೀಲುಗಳ ಊತವನ್ನು ಕಡಿಮೆ ಮಾಡುತ್ತದೆ. ಮೆಂತ್ಯ ಬೀಜಗಳನ್ನು ಅತಿಯಾಗಿಯೂ ತಿನ್ನಬಾರದು. ಪ್ರತಿದಿನ 10 – 15 ಕಾಳುಗಳಷ್ಟು ಮೆಂತ್ಯ ಬೀಜ ಮಾತ್ರ ಸೇವಿಸಿ. ಇದು ಆರೋಗ್ಯ ಪ್ರಯೋಜನಕಾರಿಯಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...