ಅದ್ದೂರಿಯಾಗಿ ಪುರ ಪ್ರವೇಶಿಸಿದ ಹಿಂದೂ ಮಹಾ ಗಣಪತಿ : ಕಣ್ತುಂಬಿಕೊಂಡ ಚಿತ್ರದುರ್ಗದ ಮಹಾಜನತೆ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ಸೆ.17 :ತೀವ್ರ ಕುತೂಹಲದಿಂದ ಕಾಯುತ್ತಿದ್ದ ಹಿಂದೂ ಮಹಾ ಗಣಪತಿಯ ಪುರ ಪ್ರವೇಶವನ್ನು ಚಿತ್ರದುರ್ಗದ ಮಹಾಜನತೆ ಕೊನೆಗೂ ಕಣ್ತುಂಬಿಕೊಂಡರು.

ವಿಶ್ವ ಹಿಂದೂ ಪರಿಷದ್-ಬಜರಂಗದಳ ನೇತೃತ್ವದಲ್ಲಿ ಹಿಂದೂ ಮಹಾ ಗಣಪತಿ ಮಹೋತ್ಸವವು ಎಂದಿನಂತೆ ಈ ಬಾರಿಯೂ ಅದ್ದೂರಿಯಾಗಿ ಪುರ ಪ್ರವೇಶಿಸಿತು.

ಶ್ರೀ ಮಾದಾರ ಚನ್ನಯ್ಯ ಗುರುಪೀಠಕ್ಕೆ ಮಧ್ಯಾನ್ಹ 3  ಗಂಟೆ ವೇಳೆಗೆ ಆಗಮಿಸುತ್ತಿದ್ದಂತೆ ಮಠದ ಆವರಣದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು, ಭಕ್ತಾದಿಗಳು 13 ಅಡಿ ಎತ್ತರದ ಬೃಹತ್ ಗಾತ್ರದ ಗಣಪತಿ ಮೂರ್ತಿಯನ್ನು
ಅಲ್ಲಿ ಅದ್ದೂರಿಯಾಗಿ  ಸ್ವಾಗತಿಸಲಾಯಿತು.
ಕಂಡೊಡನೇ ಹಿಂದೂ ಮಹಾಗಣಪತಿ ಕೀ ಜೈ, ಭಾರತ್ ಮಾತಾಕೀ ಜೈ, ವಂದೇ ಮಾತರಂ ಎಂಬ ಜಯಘೋಷ ಕೂಗುತ್ತಾ ಸಂಭ್ರಮಿಸಿದರು. ನಂತರ ಧಾರ್ಮಿಕ ಪೂಜಾವಿಧಿಗಳನ್ನು ನೆರವೇರಿಸಿದ ಬಳಿಕ
ಮಾದಾರ ಚನ್ನಯ್ಯ ಗುರುಪೀಠದಿಂದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತಾಧಿಗಳು, ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಮೂಲಕ ಚಳ್ಳಕೆರೆ ಗೇಟ್ ನಿಂದ ಬಿ.ಡಿ.ರಸ್ತೆಯ ಜೈನಧಾಮಕ್ಕೆ 4:30 ರ ವೇಳೆಗೆ ಆಗಮಿಸಿತು. ಈ ವೇಳೆ ಅಲ್ಲಿ ನೆರೆದಿದ್ದ ಭಕ್ತ ಸಮೂಹದ ಸಂಭ್ರಮ ಮುಗಿಲು ಮುಟ್ಟಿತ್ತು. ಮೊಬೈಲ್ ಗಳಲ್ಲಿ ಫೋಟೋ ಮತ್ತು ವಿಡಿಯೋ ತೆಗೆದುಕೊಂಡು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಹಿಂದೂ ಮಹಾಗಣಪತಿಯ ಸಮಿತಿಯ ಅಧ್ಯಕ್ಷರಾದ ಜಿ.ಎಂ. ಸುರೇಶ್,  ಸಮಿತಿಯ ಮಾರ್ಗದರ್ಶಕರಾದ ಬದ್ರಿನಾಥ್, ಬಜರಂಗದಳ ಪ್ರಾಂತ ಸಹ ಸಂಯೋಜಕರು ಪ್ರಭಜನ್ , ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಪಿ.ರುದ್ರೇಶ್ , ಜಿಲ್ಲಾ ಸಹ ಕಾರ್ಯದರ್ಶಿ ಕೇಶವ್  , ಬಜರಂಗದಳ ಜಿಲ್ಲಾ ಸಂಯೋಜಕರು,  ಜಿಲ್ಲಾ ಮುಖಂಡರಾದ ಅಶೋಕ್ ,  ವಿಶ್ವ ಹಿಂದೂ ಪರಿಷದ್  ನಗರ ಅಧ್ಯಕ್ಷರು ಶ್ರೀನಿವಾಸ್,  ನಗರ ಸಹ ಕಾರ್ಯದರ್ಶಿ ರಂಗಸ್ವಾಮಿ  , ಗ್ರಾಮಾಂತರ ಕಾರ್ಯದರ್ಶಿ ಶ್ರೀನಿವಾಸ್ ಡೈರಿ ,  ನಗರ ಸಂಯೋಜಕರು ರಂಗಸ್ವಾಮಿ,  ನಗರಸಭೆ ಸದಸ್ಯರು ನವೀನ್ ಚಾಲುಕ್ಯ, ಶಶಿಧರ್, ಸಮಿತಿಯ ಸದಸ್ಯರಾದ ಪ್ರಶಾಂತ್ ಅಪ್ಪಾಜಿ ಪರಿಸರ, ವಿಫಲ್ ಜೈನ್, ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಿರಿಯೂರಿನಲ್ಲಿ ಜನತಾದರ್ಶನ ಕಾರ್ಯಕ್ರಮಕ್ಕೆ ಸಚಿವ ಡಿ. ಸುಧಾಕರ್ ಚಾಲನೆ : ಸಾರ್ವಜನಿಕರಿಂದ ಅಹವಾಲು ಸ್ವೀಕಾರ

  ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್.25 :  ನಗರದ ತಾಹಾ ಪ್ಯಾಲೇಸ್‌ನಲ್ಲಿ ಸೋಮವಾರ‌ ಜಿಲ್ಲಾ ಉಸ್ತುವಾರಿ ಸಚಿವರಾದ  ಡಿ. ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮ ನೆಡಯಿತು. ಕಾರ್ಯಕ್ರಮದಲ್ಲಿ ಸಚಿವ ಡಿ. ಸುಧಾಕರ್

ಜನತಾ ದರ್ಶನದಲ್ಲಿ ವೇದಿಕೆಯಲ್ಲೇ ಕಿತ್ತಾಡಿಕೊಂಡ ಬಿಜೆಪಿ ಸಂಸದ ಹಾಗೂ ಕಾಂಗ್ರೆಸ್ ಶಾಸಕ..!

  ಕೋಲಾರ: ಇಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮಹತ್ವದ ಬೆಳವಣಿಗೆಯ ದಿನ. ರಾಜ್ಯಾದ್ಯಂತ ಒಂದೇ ದಿನ ಜನತಾ ದರ್ಶನ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಈ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಹಾಗೂ ಕಾಂಗ್ರೆಸ್ ಶಾಸಕ ತುಂಬಿದ

ನಾಳೆ ಬೆಂಗಳೂರು ಬಂದ್ ಏನಿರುತ್ತೆ..? ಏನಿರಲ್ಲ..?

  ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ, ನಾಳೆ ಬೆಂಗಳೂರು ಬಂದ್ ಮಾಡಲು ರೈತ ಸಂಘಟನೆ, ಬಿಜೆಪಿ ನಾಯಕರು, ಕನ್ನಡಪರ ಸಂಘಟನೆ, ಜೆಡಿಎಸ್ ನಾಯಕರು ಸೇರಿದಂತೆ ಹಲವು ಸಂಘಟನೆಗಳು ನಿರ್ಧರಿಸಿವೆ. ಈಗಾಗಲೇ ಮಂಡ್ಯ

error: Content is protected !!