ಸ್ವಂತ ಹಣದಿಂದ ರಸ್ತೆ ರಿಪೇರಿ ಮಾಡಿಸಿದ ವಿನೋದ್ ರಾಜ್

ಸ್ಯಾಂಡಲ್ ವುಡ್ ನಟ ವಿನೋದ್ ರಾಜ್ ಕನ್ನಡ ಇಂಡಸ್ಟ್ರಿಯಿಂದ ದೂರವಾಗಿ ಬಹಳ ವರ್ಷಗಳೇ ಕಳೆದವು. ಒಂದೆರಡು ಸಿನಿಮಾ ಮಾಡಿ, ನಟನೆಯಿಂದ ದೂರವಾದರೂ. ಡ್ಯಾನ್ಸ್ ಮಾಡುವುದರಲ್ಲಿ ವಿನೋದ್ ರಾಜ್ ಎತ್ತಿದ ಕೈ. ಆದರೆ ಅವರನ್ನು ಸ್ಯಾಂಡಲ್ ವುಡ್ ಕೈಬೀಸಿ ಕರೆದಿದ್ದು ಬಹಳ ಕಡಿಮೆಯೇ ಬಿಡಿ.

ವಿನೋದ್ ರಾಜ್ ತಮ್ಮ ತಾಯಿಯೊಂದಿಗೆ ಗಾಂಧಿನಗರದಿಂದ ದೂರವಾಗಿ ಬೆಂಗಳೂರಿನ ಹೊರವಲಯದಲ್ಲಿ ವಾಸ ಮಾಡುತ್ತಿದ್ದರು. ತಾಯಿಯೇ ಸರ್ವಸ್ವ ಎಂದು ಬದುಕಿದವರು. ಆದರೆ ಇತ್ತಿಚೆಗೆ ಲೀಲಾವತಿ ಅವರು ಎಲ್ಲರನ್ನು ಬಿಟ್ಟು ಬಾರದೂರಿಗೆ ಹೊರಟೆ ಬಿಟ್ಟರು. ಆದರೆ ತಾಯಿಯ ಆಸೆಯಂತೆ ವಿನೋದ್ ರಾಜ್ ಜನರ ನಡುವೆ ಬದುಕುತ್ತಿದ್ದು, ಜನರ ಕಷ್ಟಗಳಿಗೆ ಮಿಡಿಯುತ್ತಿದ್ದಾರೆ.

ವಿನೋದ್ ರಾಜ್ ಮತ್ತು ಲೀಲಾವತಮ್ಮ ಸೋಲದೇವನಹಳ್ಳಿ ಜನತೆಗೆ ಮಾಡಿಕೊಟ್ಟಿರುವ ಸೌಲಭ್ಯಗಳು ಅಷ್ಟಿಷ್ಟಲ್ಲ. ಸರ್ಕಾರದ ಸಹಾಯಕ್ಕಾಗಿ ಕಾಯದೆ ಪ್ರಾಥಮಿಕ ಆರೊಇಗ್ಯ ಕೇಂದ್ರ ಕಟ್ಟಿಸಿದ್ದಾರೆ, ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಿಸಿದ್ದಾರೆ. ಇತ್ತಿಚೆಗೆ ರೈತರ ಹಸುಗಳಿಗೆ ಹುಲ್ಲನ್ನು ನೀಡಿದ್ದರು. ಈಗ ರಸ್ತೆ ಕೆಲಸದ ಕಡೆಗೆ ಗಮನ ನೀಡಿದ್ದಾರೆ.

ಇಷ್ಡೊತ್ತಿಗೆ ಮಳೆಯಾಗಬೇಕಿತ್ತು. ಆದರೆ ಅಲ್ಲೊಮ್ಮೆ ಇಲ್ಲೊಮ್ಮೆ ಮಳೆಯಾಗುತ್ತಿದೆ. ಬಂದರೆ ಜೋರು ಮಳೆ ಬರಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಸಂಬಂಧ ಸೋಲದೇವನಹಳ್ಳಿಯ ಹಾಳಾದ ರಸ್ತೆಗಳನ್ನು ಸರಿ ಮಾಡಿಸುತ್ತಿದ್ದಾರೆ. ಮಳೆ ಬಂದರೆ ರಸ್ತೆಗಳಲ್ಲಿ ಓಡಾಡುವ ಜನ ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂಬ ಮಾನವೀಯತೆಯ ದೃಷ್ಟಿಯಿಂದ ಕಿತ್ತು ಹೋಗಿರುವ ರಸ್ತೆಗೆಲ್ಲಾ ಪ್ಯಾಚಪ್ ಮಾಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *