Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪವಿತ್ರಾ ಸಾವಿನ ಬಳಿಕ ಚಂದ್ರಕಾಂತ್ ಆತ್ಮಹತ್ಯೆ: ಹೆಂಡತಿ ಬಿಟ್ಟು ರಿಲೇಷನ್ ಶಿಪ್ ನಲ್ಲಿದ್ದರಾ ಚಂದ್ರು..?

---Advertisement---

ತೆಲುಗಿನಲ್ಲಿ ಖ್ಯಾತಿ ಪಡೆದಿದ್ದ ನಟಿ ಪವಿತ್ರಾ ಜಯರಾಂ ಆಕ್ಸಿಡೆಂಟ್ ನಲ್ಲಿ ತೀರಿಕೊಂಡ ಬಳಿಕ, ಅವರ ಗೆಳೆಯ ಚಂದ್ರಕಾಂತ್ ಕೂಡ ಸೂಸೈಡ್ ಮಾಡಿಕೊಂಡಿದ್ದಾರೆ. ಚಂದ್ರಕಾಂತ್ ಸಾವಿನ ಬಗ್ಗೆ ಅವರ ಪತ್ನಿ ಮಾತನಾಡಿದ್ದು, ಪವಿತ್ರಾ ಮೇಲೆ ಆರೋಪ ಮಾಡಿದ್ದಾರೆ. ಪವಿತ್ರಾ ಹಾಗೂ ನನ್ನ ಪತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು ಎಂದು ಆರೋಪ ಮಾಡಿದ್ದಾರೆ.

ಚಂದ್ರಕಾಂತ್ ಶಿಲ್ಪಾ ಎನ್ನುವವರನ್ನು ಮದುವೆಯಾಗಿದ್ದರು. ಇಬ್ಬರು ಮಕ್ಕಳು ಕೂಡ ಇದ್ದಾರೆ. ಸಾವಿನ ಬಳಿಕ ಮಾತನಾಡಿದ ಶಿಲ್ಪಾ, ತನ್ನ ಪತಿಯ ಬಾಳಲ್ಲಿ ಪವಿತ್ರಾ ಆಗಮನ ಆದಮೇಲೆ ನನ್ನ ಸಂಸಾರ ಹಾಳಾಯ್ತು. ಚಂದ್ರಕಾಂತ್ ಹಾಗೂ ನಾನು ಪ್ರೀತಿ ಮಾಡುತ್ತಿದ್ದೆವು. ನಮ್ಮಿಬ್ಬರ ಪ್ರೀತಿಗೆ ಮನೆಯವರು ಒಪ್ಪಿರಲಿಲ್ಲ. ಅವರೆಲ್ಲರ ವಿರೋಧದ ನಡುವೆಯೂ ಮದುವೆಯಾದೆವು. ಮದುವೆಯಾದ ಮೇಲೆ ಏನೇ ಸಮಸ್ಯೆ ಬಂದರು ಮನೆಯವರಿಗೆ ಹೇಳುತ್ತಿರಲಿಲ್ಲ. ನನ್ನ ಗಂಡ ಮನೆಗೆ ಬಾರದೆ ಇದ್ದರು ಮಕ್ಕಳನ್ನು ನಾನೇ ಸಾಕಿದ್ದೇನೆ. ಪವಿತ್ರಾ ಹಾಗೂ ನನ್ನ ಪತಿ ರಿಲೇಷನ್ ಶಿಪ್ ನಲ್ಲಿ ಇರುವ ವಿಚಾರ ನನಗೆ ಗೊತ್ತಿತ್ತು. ಲಾಕ್ ಡೌನ್ ಸಮಯದಲ್ಲಿ ಇಬ್ಬರು ಒಟ್ಟಿಗೆ ಇದ್ದರು.

ಆ ಬಳಿಕವೇ ಚಂದ್ರಕಾಂತ್ ವಿಚಿತ್ರವಾಗಿ ಆಡುವುದಕ್ಕೆ ಶುರು ಮಾಡಿದರು. ನನಗೆ ಹಿಂಸೆ ನೀಡುತ್ತಿದ್ದರು. ಕುಡಿದು ಬಂದು ಗಲಾಟೆ ಮಾಡುತ್ತಿದ್ದರು. ನಮ್ಮ ಸಂಸಾರ ಚೆನ್ನಾಗಿಯೇ ಇತ್ತು ಆದರೆ ನಮ್ಮ ಬಾಳಲ್ಲಿ ಪವಿತ್ರಾ ಬಂದ ಮೇಲೆ ಸಮಸ್ಯೆ ಶುರುವಾಯಿತು. ಮನೆಗೆ ಬರುವುದು ಕಡಿಮೆ ಆಯಿತು. ಪವಿತ್ರಾ ಸಾಯುವ ನಾಲ್ಕು ದಿನ ಮೊದಲು ಅವರು ಊಟಿಗೆ ಹೋಗಿದ್ದರು ಎಂದು ನೋವು ತೋಡಿಕೊಂಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...