Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರೇಕ್ಷಕರ ಮುಂದೆ ಬರಲು ಸಜ್ಜಾದ A DATE: ‘ಬ್ಯಾಡ್ ಗೈ ಆಂಥಮ್’ ಹಾಡು ಬಿಡುಗಡೆ

---Advertisement---

 

ಕನ್ನಡ ಚಿತ್ರರಂಗದಲ್ಲಿ ಹೊಸಬರ ವಿಶಿಷ್ಟ ಪ್ರಯತ್ನಗಳು ಸದ್ದು ಮಾಡುತ್ತಿರುವ ಹೊತ್ತಿನಲ್ಲೇ, ಪ್ರೇಕ್ಷಕರ ಎದುರು ಬರಲು ಸಜ್ಜಾಗಿರುವ ಮತ್ತೊಂದು ಭರವಸೆಯ ಚಿತ್ರ ‘A DATE’. ಬೆಂಗಳೂರಿನ ಹಿನ್ನೆಲೆಯಲ್ಲಿ ಕೇವಲ ಒಂದೇ ದಿನದಲ್ಲಿ ನಡೆಯುವ ಕಥಾಹಂದರ ಹೊಂದಿರುವ ಈ ಸಿನಿಮಾದ ‘ಬ್ಯಾಡ್ ಗೈ ಆಂಥಮ್’ ಎಂಬ ರಾಪ್ ಶೈಲಿಯ ಹಾಡು ಇದೀಗ ಬಿಡುಗಡೆಯಾಗಿದ್ದು, ಯುವ ಸಮೂಹದಲ್ಲಿ ಭಾರಿ ಕುತೂಹಲ ಮೂಡಿಸಿದೆ.

​ಐಟಿ ರಂಗದಿಂದ ಬಂದು ಕಿರುಚಿತ್ರಗಳ ಮೂಲಕ ತಮ್ಮದೇ ಆದ ಪ್ರೇಕ್ಷಕ ಬಳಗವನ್ನು ಕಟ್ಟಿಕೊಂಡಿರುವ ವಿಮಲ್ ರಾಜ್ ಎನ್, ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿದ್ದಾರೆ. ಸುಜನಿತ್ ಶೆಟ್ಟಿ ಮತ್ತು ವಿಮಲ್ ರಾಜ್ ಸಾಹಿತ್ಯಕ್ಕೆ ಮೋಕ್ಷ ಬೀಟ್ಸ್ ಧ್ವನಿಯಾಗಿದ್ದು, ಟ್ರೆಂಡಿ ಬೀಟ್ಸ್‌ಗಳಿಂದ ಕೂಡಿದ ಈ ಹಾಡು ಸದ್ಯ ಮೆಚ್ಚುಗೆ ಗಳಿಸುತ್ತಿದೆ.

​ಉತ್ತರ ಭಾರತದ ಯುವತಿ ಹಾಗೂ ದಕ್ಷಿಣ ಭಾರತದ ಯುವಕನ ನಡುವೆ ಬೆಂಗಳೂರಿನಲ್ಲಿ ನಡೆಯುವ ಅನಿರೀಕ್ಷಿತ ಭೇಟಿ ಮತ್ತು ಆ ಬಳಿಕ ಅವರ ನಡುವೆ ಉಂಟಾಗುವ ಭಾವನಾತ್ಮಕ ತಿರುವುಗಳೇ ಈ ಚಿತ್ರದ ಪ್ರಮುಖ ಜೀವಾಳ. ಕೇವಲ ಎರಡು ಪ್ರಮುಖ ಪಾತ್ರಗಳನ್ನಿಟ್ಟುಕೊಂಡು ಇಂದಿನ ಮಹಾನಗರ ಜೀವನ, ಭಾಷೆ, ಸಂಸ್ಕೃತಿ ಮತ್ತು ಸಂಬಂಧಗಳ ಸಂಕೀರ್ಣತೆಯನ್ನು ರೋಮ್ಯಾಂಟಿಕ್ ಡ್ರಾಮಾ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ. ನಾಯಕನಾಗಿ ಸುಜನಿತ್ ಶೆಟ್ಟಿ ಹಾಗೂ ನಾಯಕಿಯಾಗಿ ಅಶ್ವಿನಿ ಶೆಣೈ ತೆರೆಹಂಚಿಕೊಂಡಿದ್ದಾರೆ.

​ವೀಕೆಂಡ್ ಶಾರ್ಟ್ಸ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ಬೆಂಗಳೂರಿನ ಸುಮಾರು ಐವತ್ತೈದಕ್ಕೂ ಅಧಿಕ ನೈಜ ತಾಣಗಳಲ್ಲಿ ಅದ್ಧೂರಿಯಾಗಿ ಚಿತ್ರೀಕರಿಸಲಾಗಿದೆ. ವಡ್ಡೆ ದೇವೇಂದ್ರ ರೆಡ್ಡಿ ಅವರ ಛಾಯಾಗ್ರಹಣ ಹಾಗೂ ವಿಮಲ್ ರಾಜ್ ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಪಿವಿಆರ್ ಐನಾಕ್ಸ್ ಸಂಸ್ಥೆ ವಿತರಣೆಯ ಜವಾಬ್ದಾರಿ ಹೊತ್ತಿದೆ. ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now