ಸುದ್ದಿಒನ್, ತಿರುಪತಿ, ಸೆಪ್ಟೆಂಬರ್. 29 : ಕರ್ನಾಟಕದ ವಿವಿಧ ಮಠಗಳ ಪ್ರಮುಖ ಮಠಾಧೀಶರು ಆಂಧ್ರಪ್ರದೇಶದ ಪ್ರಸಿದ್ಧ ಪುಣ್ಯಕ್ಷೇತ್ರವಾದ ತಿರುಪತಿ ತಿರುಮಲ ದೇವಾಲಯಕ್ಕೆ ಮಂಗಳವಾರ ಭೇಟಿ ನೀಡಿ, ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.
ರಾಜ್ಯದ ಪ್ರಮುಖ ಪೂಜ್ಯ ಸ್ವಾಮೀಜಿಗಳು ತಿರುಪತಿ ಶ್ರೀವೆಂಕಟೇಶ್ವರ ಸ್ವಾಮೀಯ ದರ್ಶನ ಪಡೆದು, ನಾಡಿನ ಸಮಸ್ತ ಜನರ ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿತು.ರಾಜ್ಯದ ಪ್ರಮುಖ ಸ್ವಾಮೀಜಿಗಳು ಒಟ್ಟಾಗಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿರುವುದು ವಿಶೇಷವಾಗಿ ಗಮನಸೆಳೆಯಿತು.
ದರ್ಶನ ಪಡೆದ ಪೂಜ್ಯ ಮಠಾಧೀಶರು:
ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ – ಭೋವಿ ಗುರುಪೀಠ
ಶ್ರೀ ಶಾಂತವೀರ ಸ್ವಾಮೀಜಿ – ಕುಂಚಿಟಿಗ ಗುರುಪೀಠ
ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ – ಭಗೀರಥ ಗುರುಪೀಠ
ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ – ಮಾದಾರ ಗುರುಪೀಠ
ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ – ವಾಲ್ಮೀಕಿ ಗುರುಪೀಠ
ಶ್ರೀ ಈಶ್ವರಾನಂದಪುರಿ ಸ್ವಾಮೀಜಿ – ಕನಕ ಗುರುಪೀಠ

ಶ್ರೀ ರೇಣುಕಾನಂದ ಸ್ವಾಮೀಜಿ – ಈಡಿಗರ ಗುರುಪೀಠ
ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ – ಕುಂಬಾರ ಗುರುಪೀಠ
ಶ್ರೀ ಹಡಪದ ಅಪ್ಪಣ್ಣ ಸ್ವಾಮೀಜಿ – ಹಡಪದ ಗುರುಪೀಠ
ಶ್ರೀ ದಯಾನಂದಪುರಿ ಸ್ವಾಮೀಜಿ – ದೇವಾಂಗ ಗುರುಪೀಠ
ಶ್ರೀ ಯಾದವಾನಂದ ಸ್ವಾಮೀಜಿ – ಯಾದವಾನಂದ ಗುರುಪೀಠ
ಶ್ರೀ ಶಿವಬಸವ ಸ್ವಾಮೀಜಿ – ಅಥಣಿ ಗಚ್ಚಿನ ಮಠ
ಶ್ರೀ ಶಾಂತಲಿಂಗ ಸ್ವಾಮೀಜಿ – ಹೊಸಮಠ, ಹಾವೇರಿ
ಶ್ರೀ ಚನ್ನಬಸವ ಸ್ವಾಮೀಜಿ – ವಿರಕ್ತ ಮಠ, ಶಿಕಾರಿಪುರ
ಶ್ರೀ ಮಹಾಲಿಂಗ ಸ್ವಾಮೀಜಿ – ಕಾಶಿ ಅನ್ನಪೂರ್ಣೇಶ್ವರಿ ಮಠ
ಶ್ರೀ ಬಸವಪ್ರಸಾದ ಸ್ವಾಮೀಜಿ – ಇರಕಲ್ ಮಠ
ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ – ರುದ್ರದೇವರ ಮಠ













