ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 15 : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.”
ಸ್ವ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣವನ್ನು ಶ್ರೀಮತಿ ಸುನೀತ ವಿಜಯ್ ಕುಮಾರ್ ಅವರು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಎಸ್.ಎಂ ಪೃಥ್ವೀಶ, ಅವರು ಮಾತನಾಡುತ್ತಾ ದೇಶದ ಮುಖ್ಯ ಆಧಾರ ಸ್ತಂಭಗಳಾದ ಸೈನಿಕರು, ಶಿಕ್ಷಕರು ಹಾಗೂ ಕೃಷಿಕರÀ ಸೇವೆಯನ್ನು ಹೊಗಳಿದರು, ಪ್ರತಿಯೊಬ್ಬ ಭಾರತಿಯ ಪ್ರಜೆಯು ತಾವು ಎಷ್ಟೇ ಉನ್ನತ ಮಟ್ಟದ ಸಾಧನೆ ಮಾಡಿದರೂ ತಾವು ಹುಟ್ಟಿದ ತಾಯಿ ನಾಡಿನ ಹೆಸರನ್ನು ಉಳಿಸಿ ಬೆಳೆಸಬೇಕು ಎಂದರು. ಈ ಸಂದರ್ಭದಲ್ಲಿ ದೇಶಕ್ಕೆ ಸೇವೆ ಸಲ್ಲಿಸಿದ ಸೈನಿಕರ ಸೇವೆಯನ್ನು ಸ್ಮರಿಸುತ್ತಾ ಮಾಜಿ ಸೈನಿಕರಾದ ಶ್ರೀ.ಕೆ.ನಾರಾಯಣ್ ಇವರಿಗೆ ಸಂಸ್ಥೆಯ ಪರವಾಗಿ ಅವರನ್ನು ಸನ್ಮಾನಿಸಿದರು.
ನಂತರ ಸಂಸ್ಥೆಯ ಐಸಿಎಸ್‍ಇ ಪ್ರಾಚಾರ್ಯರಾದ ಬೀನ ಎ ಜಾನ್ ಅವರು ಮಾತನಾಡುತ್ತಾ ಪ್ರತಿಯೊಬ್ಬ ನಾಗರೀಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ತಾವು ಸ್ವಚ್ಚವಾಗಿಟ್ಟುಕೊಂಡರೆ ನಮ್ಮ ದೇಶವನ್ನು ಸ್ವಚ್ಚವಾಗಿಟ್ಟುಕೊಂಡಂತೆ ಎಂಬ ಸಂದೇಶವನ್ನು ತಿಳಿಸಿದರು.
ನಂತರ ಸನ್ಮಾನ ಸ್ವೀಕರಿಸಿದ ಮಾಜಿ ಸೈನಿಕರಾದ ಶ್ರೀ.ಕೆ.ನಾರಾಯಣ್‍ರವರು ಮಾತನಾಡುತ್ತಾ ತಾವು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಕಾರ್ಗಿಲ್ ಯುದ್ದ ನಡೆದ ಸಂದರ್ಭವನ್ನು ಹಾಗೂ ತಾವು ಅನುಭವಿಸಿದ ಕಷ್ಟದ ದಿನಗಳನ್ನು ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಸೈನಿಕರನ್ನು ಸ್ವತಂತ್ರ್ಯೋತ್ಸವ ದಿನದಂದು ನಾವೆಲ್ಲರೂ ಸ್ವಂತಂತ್ರ ತಂದುಕೊಟ್ಟ ಮಹಾತ್ಮರೆಲ್ಲರನ್ನು ಸ್ಮರಿಸುತ್ತಾ ಇಂದು ನಮ್ಮೆಲ್ಲರನ್ನು ರಕ್ಷಿಸುತ್ತಿರುವ ವೀರ ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಜೊತೆಗೆ ನಿವೆಲ್ಲರೂ ಚಿಕ್ಕವಯಸ್ಸಿನಿಂದಲೇ ದೇಶಾಭಿಮಾನವನ್ನು ಮೈಗೂಡಿಸಿಕೊಂಡು ದೇಶಕ್ಕೆ ನಿಮ್ಮದೇ ಆದ ಕೊಡುಗೆಗಳನ್ನು ನೀಡಿ ಎಂದು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಎನ್.ಜಿ.ತಿಪ್ಪೇಸ್ವಾಮಿ ಅವರು ಮಾತನಾಡುತ್ತಾ ಸ್ವತಂತ್ರ್ಯ ಎನ್ನುವುದು ನಮ್ಮಗೆ ಸುಲಭವಾಗಿ ದೊರಕಿಲ್ಲ, ಅದಕ್ಕಾಗಿ ಸಾವಿರಾರು ಜನರ ತಮ್ಮ ಪ್ರಾಣ, ತ್ಯಾಗ, ಬಲಿದಾನದ ಫಲವಾಗಿದೆ. ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು ನಾಳಿನ ಭಾರತಕ್ಕೆ ಮಕ್ಕಳು ನಿಮ್ಮ ಬುದ್ಧಿವಂಕೆ, ಶಿಸ್ತು, ನಡವಳಿಕೆ ಗುಣಗಳು ಕೂಡ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಶಿಕ್ಷಣ ಎನ್ನುವುದು ಕೇವಲ ಅಂಕಗಳಿಗೆ ಸೀಮಿತವಾಗದೆ ಜವಬ್ದಾರಿ ಪ್ರಮಾಣಿಕತೆ ಹಾಗು ಶಿಸ್ತಿನೊಂದಿಗೆ ಮಾನವೀಯ ಗುಣಗಳನ್ನು ಬೆಳೆಸೊಕೊಳ್ಳಬೇಕು ಎಂದರು.

ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಇಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಜನರಲ್ಲಿ ದೇಶದ ಐಕ್ಯತೆ ಹಾಗೂ ಸಹಕಾರ ಮನೋಭಾವವನ್ನು, ದೇಶಾಭಿಮಾನವನ್ನು ಮೂಡಿಸುವ ಸಲುವಾಗಿ ಒನಕೆ ಓಬವ್ವ ಪ್ರತಿಮೆಯ ಮುಂಭಾಗದಲ್ಲಿ ಬೀದಿ ನಾಟಕವನ್ನು ಪ್ರದರ್ಶಿಸಿದರು.
ನಂತರ ಶಾಲೆಯ 1 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಪಟ್ಟ ಅನೇಕ ವರ್ಣರಂಜಿತ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ನೆರೆದಿದ್ದ ಎಲ್ಲಾ ವಿದ್ಯಾರ್ಥಿಗಳು ಅವರ ಪೋಷಕರು ಹಾಗೂ ಶಿಕ್ಷಕ ವೃಂದದವರು ಮಕ್ಕಳ ಮನೋರಂಜನಾ ಕಾರ್ಯಕ್ರಮಗಳನ್ನು ನೋಡಿ ಆನಂದಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವಿಜಯ ಕುಮಾರ್, ನಿರ್ದೇಶಕರಾದ ಶ್ರೀಮತಿ ಸ್ನೇಹ ಎನ್ ಎಸ್ ಮಹೇಶ್.ಪಿ.ಯು ಕಾಲೇಜಿನ ಪ್ರಾಚಾರ್ಯರಾದ ಶ್ರೀ.ಗುರುಪ್ರಸಾದ್.ಟಿ.ಆರ್, ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ ಹಾಗೂ ಮಹೇಶ್.ಪಿ.ಯು ಕಾಲೇಜಿನ ಬೋಧÀಕ / ಬೋಧಕೇತರ ವರ್ಗ ಹಾಗೂ ಶಾಲಾ ಪೋಷಕರು ಕಾರ್ಯಕ್ರÀಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿಯರಾದ ಸಹನ ಸ್ವಾಗತಿಸಿದರು, ಮಂಜೂಷ ಮ್ಯಾಥ್ಯು ನಿರೂಪಿಸಿ, ವಂದಿಸಿದರು.












