ಅಕ್ಷಯ ತೃತೀಯಕ್ಕೆ ಚಿನ್ನದ ಬೆಲೆ ಬಲು ದುಬಾರಿ.. ಏರುತ್ತಲೆ ಇದೆ ದರ..!

ಅಕ್ಷಯ ತೃತೀಯಕ್ಕೆ ಚಿನ್ನದ ಬೆಲೆ ಬಲು ದುಬಾರಿ.. ಏರುತ್ತಲೆ ಇದೆ ದರ..!

ಬಂಗಾರ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಬಂಗಾರವನ್ನು ತೆಗೆದುಕೊಳ್ಳಬೇಕೆಂದು ಎಲ್ಲರಿಗೂ ಆಸೆ‌. ಆದರೆ ಇತ್ತಿಚಿನ ದಿನಗಳಲ್ಲಿ ಬಂಗಾರವನ್ನು ಮಧ್ಯಮವರ್ಗದವರು ಮುಟ್ಟುವುದಕ್ಕಾದರೂ ಸಾಧ್ಯವ..? ದಿನೇ ದಿನೇ ಬಂಗಾರದ ಬೆಲೆ ಗಗನಕ್ಕೇರುತ್ತಿದೆ. ಒಂದು ಗ್ರಾಂ ತೆಗೆದುಕೊಳ್ಳಬೇಕೆಂದರು ಆರೇಳು ಸಾವಿರ ರೂಪಾಯಿ ಬೇಕಾಗಿದೆ.

ಅಕ್ಷಯ ತೃತೀಯ ದಿನ ಬೆಳ್ಳಿ, ಬಂಗಾರವನ್ನು ಮನೆಗೆ ತಂದರೆ ಶುಭ ಶಕುನ, ಅಕ್ಷಯ ಪಾತ್ರೆಯಷ್ಟೇ ಬಂಗಾರ ತುಂಬುತ್ತೆ ಎಂಬ ನಂಬಿಕೆ ಇದೆ. ಹೀಗಾಗಿ ಬಂಗಾರ ಖರೀದಿಸಲು ಸಾಕಷ್ಟು ಜನ ಮುಂದಾಗುತ್ತಾರೆ. ಈ ಸಮಯದಲ್ಲಿ ಬಂಗಾರದ ಮಳಿಗೆಗಳು ಕೂಡ ಆಫರ್ ಗಳನ್ನು ನೀಡುತ್ತಾರೆ. ಆದರೆ ಬಂಗಾರದ ಬೆಲೆಯಲ್ಲಿ ಮಾತ್ರ ಇಳಿಕೆಯಾಗುತ್ತಿಲ್ಲವಲ್ಲ‌‌. ಇಂದು ಬಂಗಾರದ ಬೆಲೆ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ.

ಇಂದು ಬೆಂಗಳೂರಿನಲ್ಲಿ ಬಂಗಾರದ ಬೆಲೆ 22 ಕ್ಯಾರೆಟ್ ಚಿನ್ನ ಒಂದು ಗ್ರಾಂಗೆ 6,585 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂಗೆ 7,183 ರೂಪಾಯಿ ಆಗಿದೆ. ಒಂದು ಗ್ರಾಂ ಬೆಳ್ಳಿಯ ಬೆಲೆ 82.60 ರೂಪಾಯಿ ಆಗಿದೆ. ಹೀಗಾಗಿ ಚಿನ್ನ ಖರೀದಿ ಮಾಡಬೇಕೆಂದುಕೊಳ್ಳುವ ಮಹಿಳೆಯರಿಗೆ ಇದೊಂಥರ ಆಘಾತಕಾರಿಯೇ ಆಗಿದೆ.

ಚಿನ್ನದ ಬೆಲೆಯಲ್ಲಿ ಇನ್ಮುಂದೆ ಇಳಿಕೆ ಕಾಣುವುದು ಕಷ್ಟ ಸಾಧ್ಯವಾಗಿದೆ. ದಿನೇ ದಿನೇ ಏರಿಕೆಯಾಗುತ್ತಲೇ ಇರುವ ಚಿನ್ನದ ದರ, ಮುಂದಕ್ಕೆ ಹತ್ತು ಗ್ರಾಂಗೆ ಒಂದು ಲಕ್ಷ ಮುಟ್ಟುವ ಸಾಧ್ಯತೆಯೂ ಇದೆ. ಹೀಗಾಗಿ ಚಿನ್ನ ಖರೀದಿ ಮಾಡಬೇಕೆಂದುಕೊಂಡವರು ಬೆಲೆ ಕಡಿಮೆಯಾಗುವುದನ್ನು ಕಾಯುವುದಕ್ಕಿಂತ ಈಗಲೇ ಖರೀದಿ ಮಾಡಿದರೆ ಉತ್ತಮ. ಮುಂದೇ ಇಳಿಕೆಯಾಗುವುದು ಅನುಮಾನವೆಂದೇ ಚಿನ್ನದ ಮಾರುಕಟ್ಟೆಯ ತಜ್ಞರು ಹೇಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *