Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬರಗೇರಮ್ಮ-ತಿಪ್ಪಿನಘಟ್ಟಮ್ಮ ಭೇಟಿ ಮಹೋತ್ಸವ ನಂತರ ಸಾವು ತಂದ ಸೌಭಾಗ್ಯ ನಾಟಕ ಪ್ರದರ್ಶನ : ಸಿ.ಟಿ.ಕೃಷ್ಣಮೂರ್ತಿ ಮಾಹಿತಿ

Facebook
Twitter
Telegram
WhatsApp

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮೇ. 06  : ಐತಿಹಾಸಿಕ ಚಿತ್ರದುರ್ಗ ನಗರದ ದೊಡ್ಡಪೇಟೆಯ ರಾಜಬೀದಿಯಲ್ಲಿ ಇನ್ನೂರು ವರ್ಷಗಳಿಂದಲೂ ಗ್ರಾಮ ದೇವತೆಗಳಾದ ಬರಗೇರಮ್ಮ-ತಿಪ್ಪಿನಘಟ್ಟಮ್ಮ ಭೇಟಿ ಮಹೋತ್ಸವ ನಡೆದುಕೊಂಡು ಬರುತ್ತಿರುವುದು ಇತಿಹಾಸ. ಅದರಂತೆ ಮಂಗಳವಾರ ನಡೆಯುವ ಭೇಟಿ ನಂತರ ನವತರುಣ ಕಲಾ ಸಂಘದವರು ಮನರಂಜನೆಗಾಗಿ ಸಾವು ತಂದ ಸೌಭಾಗ್ಯ ನಾಟಕವಾಡುತ್ತಿದ್ದಾರೆ. ಜನತೆ ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಮನವಿ ಮಾಡಿದ್ದಾರೆ.

ಕರುವಿನಕಟ್ಟೆ ವೃತ್ತದಲ್ಲಿರುವ ದೇವಸ್ಥಾನದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮಕ್ಕಳ ವಿಚಾರದಲ್ಲಿ ಬರಗೇರಮ್ಮ-ತಿಪ್ಪಿನಘಟ್ಟಮ್ಮ ಮನಸ್ತಾಪಗೊಂಡಾಗ ಅದಿ ದೇವತೆ ಏಕನಾಥೇಶ್ವರಿ ಮಧ್ಯಸ್ಥಿಕೆಯಲ್ಲಿ ಇಬ್ಬರ ಕೋಪವನ್ನು ತಣ್ಣಗೆ ಮಾಡಿ ಸಮೃದ್ದ ಮಳೆ-ಬೆಳೆ ಕರುಣಿಸಿ ಚಿತ್ರದುರ್ಗ ಜನತೆಗೆ ಒಳಿತಾಗಬೇಕಾಗಿರುವುದರಿಂದ ವರ್ಷಕ್ಕೊಮ್ಮೆ ಇಬ್ಬರು ಭೇಟಿಯಾಗಬೇಕೆಂದು ಹೇಳಿದ ಪರಿಣಾಮವೇ ಪ್ರತಿ ವರ್ಷ ಯುಗಾದಿ ಹಬ್ಬವಾದ ಹದಿನೈದು ದಿನಗಳ ಬಳಿಕ ಭೇಟಿ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.

ಭೇಟಿಯಾದ ನಂತರ ಸಾಮಾಜಿಕ, ಪೌರಾಣಿಕ ನಾಟಕಗಳನ್ನು ಆಡಿಸಲಾಗುತ್ತದೆ. ಇಲ್ಲಿಂದ ಮದುವೆಯಾಗಿ ಗಂಡನ ಮನೆಗೆ ಹೋದವರು ಏಕನಾಥೇಶ್ವರಿ ಸಿಡಿಗೆ ಬಂದು ನಂತರ ಅಕ್ಕ-ತಂಗಿಯ ಭೇಟಿ ನೋಡಿಕೊಂಡು ತಮ್ಮ ತಮ್ಮ ಊರುಗಳಿಗೆ ಹೋಗುವುದು ವಾಡಿಕೆ ಎಂದು ಸಿ.ಟಿ.ಕೃಷ್ಣಮೂರ್ತಿ ತಿಳಿಸಿದರು.

ಶ್ರೀನಿವಾಸ್ ಜೆ.ಎಂ.ಟಿ. ಲಿಂಗರಾಜ(ಗೌಡ) ಡಿ.ಸಿ.ಸುರೇಶ್, ಹರೀಶ್ ಈ ಸಂದರ್ಭದಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಮಳೆಯಾಗಿದೆ ? ಇಲ್ಲಿದೆ ಮಾಹಿತಿ…!

  ಚಿತ್ರದುರ್ಗ. ಮೇ.19 : ಜಿಲ್ಲೆಯಾದ್ಯಂತ ಕೃತಿಕಾ ಮಳೆ ಸುರಿಯುತ್ತಿದ್ದು, ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಶನಿವಾರ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ -1ರಲ್ಲಿ 24.0, ಮಿ.ಮೀ ಚಿತ್ರದುರ್ಗ -2ರಲ್ಲಿ 33.7, ಭರಮಸಾಗರ

ಫೈನಲಿ ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿಯಾಯ್ತು RCB

ಬೆಂಗಳೂರು: ನಿನ್ನೆ ಸಂಜೆಯಿಂದ ಬೆಂಗಳೂರಿನಲ್ಲಿ ಬಾರೀ ಮಳೆ. ಆರ್ಸಿಬಿ ಪಂದ್ಯದ ವೇಳೆ ಮಳೆಯಾಟ ಜೋರಾಗಿತ್ತು. ಒಮ್ಮೊಮ್ಮೆ ಮಳೆ ಬಂದು ಬಂದು ನಿಲ್ಲುತ್ತಿತ್ತು. ಇದರಿಂದ ಆರ್ಸಿಬಿ ಅಭಿಮಾನಿಗಳಿಗೆ ಬೇಸರವೂ ಆಗಿತ್ತು. ಆದ್ರೆ ಆರ್ಸಿಬಿ ಕೊಟ್ಟ ಟಾರ್ಗೆಟ್‌

ಅನ್ನ ಮಾಡುವಾಗ ಅಕ್ಕಿಯನ್ನು ಎಷ್ಟು ಬಾರಿ ತೊಳೆಯಬೇಕು ಗೊತ್ತಾ ?

ಸುದ್ದಿಒನ್ : ನಾವು ದಿನಕ್ಕೆ ಎರಡರಿಂದ ಮೂರು ಬಾರಿ ತಿನ್ನುವ ಪ್ರಮುಖ ಆಹಾರವೆಂದರೆ ಅಕ್ಕಿ. ದೇಶದ ಹೆಚ್ಚಿನ ಭಾಗಗಳಲ್ಲಿ, ಜನರು ಅನ್ನವನ್ನು ತಿನ್ನುತ್ತಾರೆ. ಕೆಲವು ರಾಜ್ಯಗಳಲ್ಲಿ ಅಕ್ಕಿ ಪ್ರಧಾನ ಆಹಾರವಾಗಿದೆ. ಬ್ರೌನ್ ರೈಸ್ ಮತ್ತು

error: Content is protected !!