ಬೆಂಗಳೂರು: ಭೀಮಾ ಸಿನಿಮಾ ಸಮಯದಲ್ಲಿ ದುನಿಯಾ ವಿಜಯ್ ಒಂದಷ್ಟು ಜೈಲು ಹಕ್ಕಿಗಳಿಗೆ ಮುಕ್ತಿ ಕೊಡಿಸಿದ್ದರು. ತಮ್ಮದೇ ಶ್ಯೂರಿಟಿ ನೀಡಿ ಬಿಡುಗಡೆ ಮಾಡಿಸಿದ್ದರು. ಇದೀಗ ಬಿಡುಗಡೆಯಾಗಿದ್ದವ ಮತ್ತೆ ಅದೇ ತಪ್ಪು ಮಾಡಿದ್ದಾನೆ. ಸಣ್ಣ ಕಾರಣಕ್ಕೆ ಜೋಡಿ ಕೊಲೆ ಮಾಡಿ ಜೈಲು ಪಾಲಾಗಿದ್ದಾನೆ. ಸುರೇಶ್ ಎಂಬಾತ ಮತ್ತೆ ಜೈಲು ಸೇರಿದ್ದಾನೆ.
ದುನಿಯಾ ವಿಜಯ್ ದಸೆಯಿಂದ ಜೈಲಿನಿಂದ ಹಿರ ಬಂದು, ಮಾರ್ಕೆಟ್ ನಲ್ಲಿ ಕೊತ್ತಂಬರಿ ಸೊಪ್ಪು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಬಳಿಕ ಬಸ್ ಸರ್ವೀಸ್ ಶೆಡ್ ನಲ್ಲೂ ಕೆಲಸ ಮಾಡಿಕೊಂಡು ಇದ್ದ. ಈ ವೇಳೆ ಗುಜರಿ ಮಾರುವ ವಿಚಾರಕ್ಕೆ ಗಲಾಟೆಯಾಗಿದೆ. ಈ ಗಲಾಟೆಯಲ್ಲಿ ನಾಗೇಶ್ ಮತ್ತು ಮಂಜುನಾಥ್ ಎಂಬುವವರ ಕೊಲೆ ಮಾಡಿದ್ದಾನೆ. ನವೆಂಬರ್ 8 ರಂದು ಈ ಜೋಡಿ ಕೊಲೆಯಾಗಿತ್ತು. ಕೊಲೆ ಮಾಡಿ, ಸುರೇಶ ಎಸ್ಕೇಪ್ ಆಗಿದ್ದ. ಕೊಲೆಯಾದ ನಾಗೇಶ್ ಹಾಗೂ ಮಂಜುನಾಥ, ಸದಾ ಸುರೇಶನನ್ನು ಹೀಯಾಳಿಸುತ್ತಿದ್ದರಂತೆ. ನೀನು ಕುಳ್ಳ, ನಿನ್ನ ಮೇಲೆ ಹಪವು ಪೊಲೀಸ್ ಕೇಸುಗಳಿವೆ ಎಂದು. ಕುಳ್ಳ ಎಂದು ರೇಗಿಸುತ್ತಿದ್ದ ವಿಚಾರಕ್ಕೆ ಕೋಪಗೊಂಡ ಸುರೇಶ್ ಇಬ್ಬರಿಗೂ ರಾಡ್ ನಿಂದ ಹೊಡೆದಿದ್ದಾನೆ. ಇಬ್ಬರು ಸತ್ತ ಮೇಲೆ ಎಸ್ಕೇಪ್ ಆಗಿದ್ದ, ಸುರೇಶನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಈತ ಈ ಹಿಂದೆ ಕೂಡ ಜೋಡಿ ಕೊಲೆ ಹಾಗೂ ಅತ್ಯಾಚಾರ ಕೇಸಲ್ಲಿ ಜೈಲು ಸೇರಿದ್ದ. ಬಳಿಕ ದುನಿಯಾ ವಿಜಯ್ ಅವರು ಶ್ಯೂರಿಟಿ ಕೊಟ್ಟು ಬಿಡಿಸಿದ್ದರು. ಮೂರು ಲಕ್ಷ ಹಣ ಇಟ್ಟು ಬಿಡಿಸಿದ್ದರು. ಹತ್ತು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಈ ವ್ಯಕ್ತಿಗೆ ಶ್ಯೂರಿಟಿ ನೀಡಲು ಯಾರೂ ಇರಲಿಲ್ಲ. ಇದೀಗ ಮತ್ತೆ ಜೈಲು ಪಾಲಾಗಿದ್ದಾನೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











