Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ಮತ್ತು 2ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

---Advertisement---

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು (KSEAB) 2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರ ತಾತ್ಕಾಲಿಕ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ಪ್ರಕಟಿಸಲಾಗಿರುವ ಈ ತಾತ್ಕಾಲಿಕ ವೇಳಾಪಟ್ಟಿಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಲು 2026ರ ಅಕ್ಟೋಬರ್ 8 ರಿಂದ ಅಕ್ಟೋಬರ್ 22 ರವರೆಗೆ (15 ದಿನಗಳ ಕಾಲಾವಕಾಶ) ಅವಕಾಶ ನೀಡಲಾಗಿದೆ. ಆಕ್ಷೇಪಣೆಗಳನ್ನು ಎಸ್‌ಎಸ್‌ಎಲ್‌ಸಿಗೆ ಸಂಬಂಧಿಸಿದಂತೆ dpikseab@gmail.com ಹಾಗೂ ಪಿಯುಸಿಗೆ ಸಂಬಂಧಿಸಿದಂತೆ directorpuekseab@gmail.com ಇ-ಮೇಲ್ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬಹುದಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ (2027)

(ಪರೀಕ್ಷಾ ಸಮಯ: ಬಹುತೇಕ ವಿಷಯಗಳಿಗೆ ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ)

27-02-2027 (ಶನಿವಾರ): ಕನ್ನಡ, ಅರೇಬಿಕ್

01-03-2027 (ಸೋಮವಾರ): ಇಂಗ್ಲಿಷ್

02-03-2027 (ಮಂಗಳವಾರ): ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್

03-03-2027 (ಬುಧವಾರ): ಭೂಗೋಳ ಶಾಸ್ತ್ರ, ಮನಃಶಾಸ್ತ್ರ

04-03-2027 (ಗುರುವಾರ): ಸಮಾಜಶಾಸ್ತ್ರ, ಭೌತಶಾಸ್ತ್ರ

05-03-2027 (ಶುಕ್ರವಾರ): ಲೆಕ್ಕಶಾಸ್ತ್ರ

08-03-2027 (ಸೋಮವಾರ): ರಸಾಯನ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲ ಗಣಿತ

09-03-2027 (ಮಂಗಳವಾರ): ಅರ್ಥಶಾಸ್ತ್ರ, ಭೂಗರ್ಭ ಶಾಸ್ತ್ರ

11-03-2027 (ಗುರುವಾರ): ಹಿಂದೂಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ, ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಅಂಡ್ ವೆಲ್ನೆಸ್ (ಸಮಯ: ಬೆಳಗ್ಗೆ 10:00 ರಿಂದ ಮಧ್ಯಾಹ್ನ 12:15)

12-03-2027 (ಶುಕ್ರವಾರ): ವ್ಯವಹಾರ ಅಧ್ಯಯನ, ಗಣಿತ

13-03-2027 (ಶನಿವಾರ): ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನ

15-03-2027 (ಸೋಮವಾರ): ರಾಜ್ಯಶಾಸ್ತ್ರ, ಜೀವಶಾಸ್ತ್ರ, ಗಣಕಶಾಸ್ತ್ರ

16-03-2027 (ಮಂಗಳವಾರ): ಇತಿಹಾಸ, ಸಂಖ್ಯಾಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ

17-03-2027 (ಬುಧವಾರ): ಹಿಂದಿ

ದ್ವಿತೀಯ ಪಿಯುಸಿ ಪರೀಕ್ಷೆ-2ರ ತಾತ್ಕಾಲಿಕ ವೇಳಾಪಟ್ಟಿ (2027)

(ಪರೀಕ್ಷಾ ಸಮಯ: ಬಹುತೇಕ ವಿಷಯಗಳಿಗೆ ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ)

  03-05-2027 (ಸೋಮವಾರ): ಕನ್ನಡ, ಅರೇಬಿಕ್

04-05-2027 (ಮಂಗಳವಾರ): ಲೆಕ್ಕಶಾಸ್ತ್ರ, ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ

05-05-2027 (ಬುಧವಾರ): ರಾಜ್ಯಶಾಸ್ತ್ರ, ಗಣಕಶಾಸ್ತ್ರ

06-05-2027 (ಗುರುವಾರ): ಇತಿಹಾಸ, ರಸಾಯನ ಶಾಸ್ತ್ರ

07-05-2027 (ಶುಕ್ರವಾರ): ವ್ಯವಹಾರ ಅಧ್ಯಯನ, ಮನಃಶಾಸ್ತ್ರ, ಶಿಕ್ಷಣ ಶಾಸ್ತ್ರ

08-05-2027 (ಶನಿವಾರ): ಐಚ್ಛಿಕ ಕನ್ನಡ, ಭೌತಶಾಸ್ತ್ರ, ಮೂಲ ಗಣಿತ

10-05-2027 (ಸೋಮವಾರ): ಅರ್ಥಶಾಸ್ತ್ರ, ಗಣಿತ

11-05-2027 (ಮಂಗಳವಾರ): ಹಿಂದಿ

12-05-2027 (ಬುಧವಾರ): ಇಂಗ್ಲಿಷ್

13-05-2027 (ಗುರುವಾರ): ಸಮಾಜಶಾಸ್ತ್ರ, ಸಂಖ್ಯಾ ಶಾಸ್ತ್ರ

14-05-2027 (ಶುಕ್ರವಾರ): ತರ್ಕಶಾಸ್ತ್ರ, ಭೂಗೋಳ ಶಾಸ್ತ್ರ, ಗೃಹವಿಜ್ಞಾನ

15-05-2027 (ಶನಿವಾರ): ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ (ಬೆಳಗ್ಗೆ 10:00 ರಿಂದ 1:00); ಹಾಗೂ ಹಿಂದೂಸ್ತಾನಿ ಸಂಗೀತ, ಎನ್.ಎಸ್.ಕ್ಯೂ.ಎಫ್ ವೃತ್ತಿಪರ ವಿಷಯಗಳು (ಮಧ್ಯಾಹ್ನ 2:00 ರಿಂದ ಸಂಜೆ 4:15)

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ (ಮಾರ್ಚ್/ಏಪ್ರಿಲ್ 2027)

 (ಪ್ರಥಮ ಭಾಷೆ ಮತ್ತು ಕೋರ್ ವಿಷಯಗಳು: ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:15 ರವರೆಗೆ; ದ್ವಿತೀಯ ಮತ್ತು ತೃತೀಯ ಭಾಷೆಗಳು: ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ)

22-03-2027 (ಸೋಮವಾರ): ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್-NCERT, ಸಂಸ್ಕೃತ)

25-03-2027 (ಗುರುವಾರ): ಕೋರ್ ಸಬ್ಜೆಕ್ಟ್ – ವಿಜ್ಞಾನ, ರಾಜ್ಯಶಾಸ್ತ್ರ (ಬೆಳಗ್ಗೆ 10:00 ರಿಂದ 1:15); ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ (ಮಧ್ಯಾಹ್ನ 2:00 ರಿಂದ ಸಂಜೆ 5:15)

27-03-2027 (ಶನಿವಾರ): ದ್ವಿತೀಯ ಭಾಷೆ – ಇಂಗ್ಲಿಷ್, ಕನ್ನಡ

30-03-2027 (ಮಂಗಳವಾರ): ಕೋರ್ ಸಬ್ಜೆಕ್ಟ್ – ಗಣಿತ, ಸಮಾಜಶಾಸ್ತ್ರ

02-04-2027 (ಶುಕ್ರವಾರ): ತೃತೀಯ ಭಾಷೆ (ಹಿಂದಿ, ಹಿಂದಿ-NCERT, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ); ಎನ್.ಎಸ್.ಕ್ಯೂ.ಎಫ್. ವಿಷಯಗಳು (ಬೆಳಗ್ಗೆ 10:00 ರಿಂದ 12:15)

03-04-2027 (ಶನಿವಾರ): ಜೆ.ಟಿ.ಎಸ್. ವಿಷಯಗಳು (ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಪ್ರೋಗ್ರಾಮಿಂಗ್ ಇನ್ ANSI ‘C’), ಅರ್ಥಶಾಸ್ತ್ರ

05-04-2027 (ಸೋಮವಾರ): ಕೋರ್ ಸಬ್ಜೆಕ್ಟ್ – ಸಮಾಜ ವಿಜ್ಞಾನ

ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ತಾತ್ಕಾಲಿಕ ವೇಳಾಪಟ್ಟಿ (ಮೇ 2027)

24-05-2027 (ಸೋಮವಾರ): ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್-NCERT, ಸಂಸ್ಕೃತ)

25-05-2027 (ಮಂಗಳವಾರ): ಕೋರ್ ಸಬ್ಜೆಕ್ಟ್ – ವಿಜ್ಞಾನ, ರಾಜ್ಯಶಾಸ್ತ್ರ (ಬೆಳಗ್ಗೆ 10:00 ರಿಂದ 1:15); ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ (ಮಧ್ಯಾಹ್ನ 2:00 ರಿಂದ ಸಂಜೆ 5:15)

26-05-2027 (ಬುಧವಾರ): ದ್ವಿತೀಯ ಭಾಷೆ – ಇಂಗ್ಲಿಷ್, ಕನ್ನಡ

27-05-2027 (ಗುರುವಾರ): ಕೋರ್ ಸಬ್ಜೆಕ್ಟ್ – ಗಣಿತ, ಸಮಾಜಶಾಸ್ತ್ರ

28-05-2027 (ಶುಕ್ರವಾರ): ತೃತೀಯ ಭಾಷೆ (ಹಿಂದಿ, ಹಿಂದಿ-NCERT, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ); ಎನ್.ಎಸ್.ಕ್ಯೂ.ಎಫ್. ವಿಷಯಗಳು (ಬೆಳಗ್ಗೆ 10:00 ರಿಂದ 12:15)

29-05-2027 (ಶನಿವಾರ): ಕೋರ್ ಸಬ್ಜೆಕ್ಟ್ – ಸಮಾಜ ವಿಜ್ಞಾನ

31-05-2027 (ಸೋಮವಾರ): ಜೆ.ಟಿ.ಎಸ್. ವಿಷಯಗಳು (ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಪ್ರೋಗ್ರಾಮಿಂಗ್ ಇನ್ ANSI ‘C’), ಅರ್ಥಶಾಸ್ತ್ರ

ಮಂಡಳಿಯು ನಿಗದಿಪಡಿಸಿರುವ ಅಂತಿಮ ದಿನಾಂಕದ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Join WhatsApp

Join Now

Join Telegram

Join Now