Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿವಿಧ ನಿಗಮಗಳ ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಅ. 15 ವರೆಗೆ ಅವಧಿ ವಿಸ್ತರಣೆ

---Advertisement---

ಬೆಂಗಳೂರು :  ಡಿ.ದೇವರಾಜ ಅರಸು, ಲಿಂಗಾಯತ, ಮರಾಠ, ಒಕ್ಕಲಿಗ, ಉಪ್ಪಾರ, ಅಂಬಿಗ, ವಿಶ್ವಕರ್ಮ, ಮಡಿವಾಳ, ಅಲೇಮಾರಿ, ಸವಿತಾ ಸಮಾಜ, ಕಾಡುಗೊಲ್ಲ, ಆರ್ಯವೈಶ್ಯ ಅಭಿವೃದ್ದಿ ನಿಗಮಗಳ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30, 2026 ರವರೆಗೆ ನಿಗದಿಪಡಿಸಲಾಗಿತ್ತು. ಆದರೆ ಹಿಂದುಳಿದ ವರ್ಗಗಳ ಜನರ ಅನುಕೂಲಕ್ಕಾಗಿ ಅರ್ಜಿ ಸಲ್ಲಿಸಲು ಅಕ್ಟೋಬರ್ 15, 2026 ರವರೆಗೆ ಅವಧಿ ವಿಸ್ತರಿಸಲಾಗಿದೆ.

ಸ್ವಯಂ ಉದ್ಯೋಗ /ಕಾಯಕ ಕಿರಣ/ಸಹಜೀರಾಜೇ ಸಮೃಧ್ದಿ ಯೋಜನೆ, ಗಂಗಾ ಕಲ್ಯಾಣ, ಜೀವಜಲ, ಜೀಜಾವು ಜಲಭಾಗ್ಯ, ಶ್ರೀ ಭಗಿರಥ ಯೋಜನೆ, ಅರಿವು-ಶೈಕ್ಷಣಿಕ, ಬಸವ ಬೆಳಗು  ಯೋಜನೆ, ವಿದೇಶಿ ವಿದ್ಯಾ ವಿಕಾಸ /ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಹೊಲಿಗೆ ಯಂತ್ರ ವಿತರಣೆ ಯೋಜನೆ, (ಡಿ.ದೇವರಾಜ ಅರಸು ಮತ್ತು ಮರಾಠ, ವಿಶ್ವಕರ್ಮ, ಕಾಡುಗೊಲ್ಲ, ನಿಗಮಗಳಿಗೆ ಮಾತ್ರ)

ಸ್ವಾತಂತ್ರ್ಯ ಮಹೋತ್ಸವದ ಅಮೃತ ಮುನ್ನಡೆ ಯೋಜನೆಯ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ (ಲಿಂಗಾಯತ, ಮರಾಠ , ವಿಶ್ವಕರ್ಮ, ಒಕ್ಕಲಿಗ, ಕಾಡುಗೊಲ್ಲ, ನಿಗಮಗಳಿಗೆ ಮಾತ್ರ)

ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿಸಲ್ಲಿಸಲು ಅರ್ಹರಿರುವುದಿಲ್ಲ. 2023-24 ಮತ್ತು 2024-25 ಹಾಗೂ 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯದೇ ಇರುವ ಫಲಾಪೇಕ್ಷಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

ಅರ್ಜಿದಾರರು ಅರ್ಜಿಗಳನ್ನು ಸೇವಾಸಿಂಧು  http://sevasindhu.karnataka.gov.in ಮುಖಾಂತರ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.

Join WhatsApp

Join Now

Join Telegram

Join Now