Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ: ಮಾಜಿ ಸೈನಿಕ ಕನ್ನಡ ಶಾಲೆಗೆ ಇನ್ನರ್ ವ್ಹೀಲ್ ಕ್ಲಬ್‌ನಿಂದ ಫ್ಯಾನ್‌ಗಳ ವಿತರಣೆ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

 

ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 08 :ಸಾಮಾಜಿಕ ಸೇವಾ ಕಾರ್ಯಕ್ಕೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯ ಇದೆ ಎಂದು ಇನ್ನರ್ ವಿಲ್ ಕ್ಲಬ್ ಅಧ್ಯಕ್ಷೆ ಎಚ್. ಅಪರ್ಣಾ ದೇವೇಂದ್ರಪ್ಪ ಹೇಳಿದರು.

ನಗರದ ಗಾಂಧಿನಗರದ ಸೋಮಗುದ್ದು ಮಾರ್ಗದ ಸರ್ಕಾರಿ ಅನುದಾನಿತ ಮಾಜಿ ಸೈನಿಕ ಕನ್ನಡ ಮಾಧ್ಯಮ ಶಾಲೆಗೆ ಇನ್ನರ್ ವಿಲ್ ವತಿಯಿಂದ ಸುಮಾರು ಮೂವತ್ತು ಸಾವಿರ ಮೌಲ್ಯದ ಹನ್ನೊಂದು ಗಾಳಿ ಪ್ಯಾನ್ ವಿತರಣೆಯ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿ ಮಾಜಿ ಸೈನಿಕ ಕನ್ನಡ ಮಾಧ್ಯಮ ಶಾಲಾ ಮಕ್ಕಳ ಶಿಕ್ಷಣ ಕಲಿಕೆ ಪರಿಸ್ಥಿತಿ ಗಮನಿಸಿ ಗಾಳಿ ಪ್ಯಾನ್ ವ್ಯವಸ್ಥೆ ಮಾಡಲಾಗಿದೆ. ಇದನ್ನು ಅನುಕೂಲ ಮಾಡಿಕೊಳ್ಳಬೇಕು. ನಮ್ಮ ಸಂಸ್ಥೆಯಿಂದ ಇಗಾಗಲೆ ನನ್ನಿವಾಳ ಸಮೀಪದ ದೇವರ ಎತ್ತುಗಳಿಗೆ ನೆರಳಿನ ಶೆಡ್ ಗಳ‌ ನಿರ್ಮಾಣ ಸೇರಿ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳು, ಪೌರ ಕಾರ್ಮಿಕರಿಗೆ ಮತ್ತು ವೈದ್ಯರಿಗೆ ಪ್ರೋತ್ಸಾಹ ಅಭಿನಂದನೆ ಸೇರಿ ಗಿಡ ನೆಡುವ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ. ಸಾಮಾಜಿಕ ಸೇವಾ ಕಾರ್ಯಕ್ಕೆ ಸಾರ್ವಜನಿಕರ ಸಹಕಾರವೂ ಇರಬೇಕು.ಈ ಪ್ಯಾನ್ ಗಳ ಉಪಯೋಗವಾಗಿ ಮಕ್ಕಳ ಶಿಕ್ಷಣ ಉತ್ತಮವಾಗಿ ಎಂದರು.

ಡಾ.ಕೆ.ಎಂ. ಜಯಕುಮಾರ್ ಮಾತನಾಡಿ.ಶಿಕ್ಷಣ ಮತ್ತು ಆರೋಗ್ಯ ಸುಧಾರಣೆಗೆ ಮಾಡುವ ಸಣ್ಣ ಸಹಕಾರವೂ ಬದುಕಿನ ಸಾರ್ಥಕ ಅನಿಸುತ್ತದೆ.
ಉಳ್ಳವರಿಂದ ಪಡೆದು,ಇಲ್ಲದವರಿಗೆ ನೀಡುವ ನೆರವಿನ ಸೇವಾ ಕಾರ್ಯ ಮಾಡುವುದು ರೋಟರಿ ಕ್ಲಬ್ ಮತ್ತು ಇನ್ನರ್ ವಿಲ್ ಸಂಸ್ಥೆಗಳ ಉದ್ದೇಶವಾಗಿದೆ. ಇಂತಹ ನಿಸ್ವಾರ್ಥ ಸೇವೆಯಲ್ಲಿ ಮಹಿಳಾ ಸಂಘಟಿತ ಇನ್ನರ್ ವಿಲ್ ಸಂಸ್ಥೆ ನಿರಂತರವಾಗಿ ‌ಮಾಡುತ್ತಿದೆ. ಇದನ್ನು ಸದುಪಯೋಗ ‌ಮಾಡಿಕೊಳ್ಳಬೇಕು. ರಾಷ್ಟ್ರ ಮಟ್ಟದ ವಾಣಿಜ್ಯೋದ್ಯಮಿಗಳು ರೋಟರಿ ಮತ್ತು ಇನ್ನರ್ ವಿಲ್ ಸಂಘಗಳ‌ ಮೇಲೆ ನಂಬಿಕೆ ಇರಿಸಿದ್ದಾರೆ. ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕರ ನೆರವು ಅಗತ್ಯ ಎಂದು ಹೇಳಿದರು.
ಮಾಜಿ ಸೈನಿಕ ಕನ್ನಡ ಮಾಧ್ಯಮ ಸಾಲೆ ಮುಖ್ಯ ಶಿಕ್ಷಕ ಬಿಎಸ್ ಸುರೇಶ, ಇನ್ನರ ವಿಲ್ ಕ್ಲಬ್ ನ ಖಜಾಚಿ ಕವಿತ ನಾಗೇಶ,ಇನ್ನರ್ ವಿಲ್ ಕ್ಲಬ್ ನ ಡಾ. ವಿದ್ಯಾ ಐತಾಳ. ಅನ್ನಪೂರ್ಣ ಪ್ರಕಾಶ ,ಮಂಜುಳ ಎಂ.ಯತೀಶ ಮಾತನಾಡಿದರು.

ಈಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ಮಹಮ್ಮದ್ ಖಲೀಂವುಲ್ಲ, ಶಾಲೆಯ ಶಿಕ್ಷಕ ದ್ಯಾಮಣ್ಣ, ಸುರೇಂದ್ರ, ಇನ್ನರ್ ವೀಲ್ ಕ್ಲಬ್ ನ ಪದಾದಿಕಾರಿಗಳಾದ ವಿಶಾಲ, ಜಾನಕಿ, ನಳಿನ ಬಾಬು, ಮೀನಾ, ವಿಶಾಲ ಸೇರಿದಂತೆ ಶಾಲಾ ಶಿಕ್ಷಕರು ಶಿಕ್ಷಕರು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now