
ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ, (ಫೆ.03) : ನಗರದ ಹೊಳಲ್ಕೆರೆ ರಸ್ತೆಯ ಶಾರದಮ್ಮ ಆರ್.ಎಸ್.ರುದ್ರಪ್ಪ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಇದೇ ಫೆಬ್ರವರಿ 5ರಂದು ಬಾರತ ಹುಣ್ಣಿಮೆ ಅಂಗವಾಗಿ 76ನೇ ವರ್ಷದ ಶ್ರೀ ರೇಣುಕಾಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ 5ರಂದು ಭಾನುವಾರ ಶ್ರೀ ರೇಣುಕಾಯಲ್ಲಮ್ಮ ದೇವಿಗೆ (ಜಡೇಯಲ್ಲಮ್ಮ) ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಪುಷ್ಪ ಅಲಂಕಾರದೊಂದಿಗೆ ವಿಶೇಷ ದರ್ಶನ ಇರಲಿದೆ. ಅಂದು ಶ್ರೀದೇವಿಗೆ ಮಡ್ಲಕ್ಕಿ ಮತ್ತು ಪಡ್ಡಲಿಗೆ ತುಂಬಿಸಿಕೊಳ್ಳಲು ಏರ್ಪಡಿಸಿದೆ.
ಅಂದು ಬೆಳಿಗ್ಗೆ 7 ರಿಂದ ರಾತ್ರಿ 10 ರವರೆಗೆ ಪೂಜೆ ನಡೆಯಲಿದೆ. ಸಮಸ್ತ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತೀರ್ಥ, ಪ್ರಸಾದ ಸ್ವೀಕರಿಸಿ, ಶ್ರೀದೇವಿ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ರೇಣುಕಾಯಲ್ಲಮ್ಮ ದೇವಸ್ಥಾನದ ಮುಖ್ಯಾಧಿಕಾರಿ ಎಲ್.ತುಕಾರಾಮ ಚವ್ಹಾಣ್ ತಿಳಿಸಿದ್ದಾರೆ.
GIPHY App Key not set. Please check settings