ದಾವಣಗೆರೆ.ಮೇ.8: 66/11 ಕೆ.ವಿ ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಫೀಡರ್‍ಗಳಲ್ಲಿ ಮಹಾನಗರಪಾಲಿಕೆ ವತಿಯಿಂದ ದೀಪದ ವ್ಯವಸ್ಥೆ ಕಲ್ಪಿಸುವ ಕಾಮಗಾರಿಯ ತುರ್ತು ಕಾರ್ಯವನ್ನು ನಿರ್ವಹಿಸಬೇಕಾಗಿರುವುದರಿಂದ ಮೇ.9 ರಂದು ಬೆಳಿಗ್ಗೆ 10 ರಿದ ಮಧ್ಯಾಹ್ನ 2 ಗಂಟೆಯವರೆಗೆ ಈ ಕೆಳಕಂಡ ಫೀಡರಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಬಸವೇಶ್ವರ ಫೀಡರ್ ವ್ಯಾಪ್ತಿಯ ಎಸ್.ಎಸ್. ಬಡಾವಣೆ, ಎ &ಚಿmಠಿ; ಬಿ ಬ್ಲಾಕ್, ಶಾಂತಿ ನಗರ, ಬಸವೇಶ್ವರ ಬಡಾವಣೆ, ಬಾಪೂಜಿ ನಗರ, ಮಹಾಲಕ್ಷ್ಮೀ ಬಡಾವಣೆ, ಹಾಗೂ ಸುತ್ತಮುತ್ತ
ಪ್ರದೇಶಗಳು.
ಎಮ್.ಸಿ.ಸಿ.ಬಿ ಎಫ್2 ಫೀಡರ್ ವ್ಯಾಪ್ತಿಯ ಎಸ್. ಎಸ್ ಲೇಔಟ್ ಎ ಬ್ಲಾಕ್, ಕುವೆಂಪು ನಗರ, ಸಿದ್ದವೀರಪ್ಪ ಬಡಾವಣೆ, ಎಂ.ಸಿ.ಸಿ ಬಿ ಬ್ಲಾಕ್, ಬಿ.ಐ.ಇ.ಟಿ ರಸ್ತೆ, ಗ್ಲಾಸ್‍ಹೌಸ್ ಏರಿಯಾ ಲಕ್ಷ್ಮೀ ಪ್ಲೋರ್ ಮಿಲ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು ಎಸ್. ನಿಜಲಿಂಗಪ್ಪ ಫೀಡರ್ ವ್ಯಾಪ್ತಿಯ ನಿಜಲಿಂಗಪ್ಪ ಬಡಾವಣೆ, ಯಲ್ಲಮ್ಮ ನಗರ, ವಿನೋಬನಗರ 4ನೇ ಮೇನ್, 3ನೇ ಮೇನ್, ದೇವರಾಜ್ ಅರಸ ಲೇಔಟ್ ಎ ಬ್ಲಾಕ್, ವಿನಾಯಕ ನಗರ, ಸಂಗೊಳ್ಳಿ ರಾಯಣ್ಣ ನಗರ ಹಾಗೂ ಸುತ್ತ ಮುತ್ತಲ ಪ್ರದೇಶಗಳು.
ಎಫ್-21 ಸಾಯಿ ಫೀಡರ್ ವ್ಯಾಪ್ತಿಯ ಶಾಮೂನುರ್ ರಸ್ತೆ, ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪ
ಮತ್ತು ಸುತ್ತ ಮುತ್ತಲ ಪ್ರದೇಶಗಳು ಎಫ್-15 ಸ್ವಿಮ್ಮಿಂಗ್ ಪೂಲ್ ಫೀಡರ್ ಬಾಪೂಜಿ ಆಸ್ಪತ್ರೆ, ಡೆಂಟಲ್ ಕಾಲೇಜ್ ರೋಡ್. ಬಾಪೂಜಿ ಆಸ್ಪತ್ರೆ ರಸ್ತೆ, ಬಾಪೂಜಿ ಬ್ಯಾಂಕ್ ಹದಡಿ ರೋಡ್ ಮತ್ತು ಸುತ್ತ
ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











