ಅವಕಾಶ ಸಿಗದೆ ಅಲ್ಲು ಅರ್ಜುನ್ ಕೂಡ ನೊಂದಿದ್ದರು.. ಇಂದು ಪ್ಯಾನ್ ಇಂಡಿಯಾ ನಟ..!

ಇಂದು ಸ್ಟಾರ್ ನಟರಾಗಿರುವ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಳ್ಳುವ ನಟ-ನಟಿಯರ ಹಿಂದೆಯೂ ಸಾಕಷ್ಟು ಪರಿಶ್ರಮ ಅಡಗಿದೆ. ಆರಂಭದಲ್ಲಿ ಅವಕಾಶಕ್ಕಾಗಿ ಪರಿತಪಿಸಿದ್ದಾರೆ. ಅವಕಾಶ ಸಿಗದೆ ಅವಮಾನ ಎದುರಿಸಿದ್ದಾರೆ. ಅದರಲ್ಲಿ ಇಂದು ತೆಲುಗು ಇಂಡಸ್ಟ್ರಿಯ ಟಾಪ್ ಒನ್ ನಟ ಅಲ್ಲು ಅರ್ಜುನ್ ಕೂಡ ಹೊರತಾಗಿಲ್ಲ. ಅವಮಾನಗಳಾಗದೆ ಇದ್ದರೂ, ಅವಕಾಶಗಳ ಬಾಗಿಲು ತೆರೆದಿದ್ದು ಸುಲಭವಾಗಿರಲಿಲ್ಲ. ಆ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅಲ್ಲು ಅರ್ಜುನ್ ಗೆ ಆರ್ಯ ಸಿನಿಮಾದ ಬಳಿಕ ಅವಕಾಶದ ಬಾಗಿಲು ತೆರೆಯಿತು. ಸುಕುಮಾರನ್ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಅಂದು ಜೊತೆಯಾದ ಈ ಜೋಡಿ ಇಂದು ಪುಷ್ಪವರೆಗೂ ಬಂದು ನಿಂತಿದೆ. ಅಲ್ಲು ಅರ್ಜುನ್ ಆರ್ಯ ಸಿನಿಮಾ ಮಾಡುವುದಕ್ಕೂ ಮುನ್ನ ಗಂಗೋತ್ರಿ ಸಿನಿಮಾ ಮಾಡಿದ್ದರು. ಸಿನಿಮಾ ಸಕ್ಸಸ್ ಆಯ್ತು, ಆದರೆ ಅವಕಾಶಗಳು ಸಿಕ್ಕಿರಲಿಲ್ಲ. ಆರ್ಯ ರಿಲೀಸ್ ಆಗಿ ಇಂದಿಗೆ 20 ವರ್ಷ‌. ಆ ಸಂಭ್ರಮದ ಕ್ಷಣದಲ್ಲಿ ಅಲ್ಲು ಅರ್ಜುನ್ ಹಳೆಯ ಕಹಿ ಘಟನೆಯನ್ನು ನೆನೆದಿದ್ದಾರ.

‘ನಾನು ನಟಿಸಿದ ಗಂಗೋತ್ರಿ ಸಿನಿಮಾ ಹಿಟ್ ಆಯಿತು. ಆದರೆ ಆ ಸಮಯದಲ್ಲಿ ನಾನು ನೋಡೋಕೆ ಅಷ್ಟೇನು ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಅವಕಾಶಗಳು ಬರಲಿಲ್ಲ‌. ಗಂಗೋತ್ರಿ ಸಿನಿಮಾ ಯಶಸ್ವಿಯಾಯ್ತು. ಆದರೆ ಹೀರೋ ಆಗಿ ಗುರುತಿಸಿಕೊಳ್ಳುವಲ್ಲಿ ನಾನು ಸೋತೆ. ನಿತಿನ್ ನಟನೆಯ ದಿಲ್ ಸಿನಿಮಾವನ್ನು ನೋಡಲು ಹೋಗಿದ್ದಾಗ, ಅಲ್ಲಿ ನನಗೆ ಸುಕುಮಾರ್ ಪರಿಚಯವಾಯಿತು. ಆರ್ಯ ಚಿತ್ರಕ್ಕಾಗಿ ಅವರು ನನ್ನನ್ನು ಆಯ್ಕೆ ಮಾಡಿದರು. ಅವರು ಆಗ ಹೊಸ ನಿರ್ದೇಶಕರಾಗಿದ್ದರು. ಆದರೆ ಅವರು ಸ್ಕ್ರಿಪ್ಟ್ ಬರೆದ ರೀತಿ ನನಗೆ ತುಂಬಾ ಇಷ್ಟವಾಗಿತ್ತು’ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *