ಬೆಂಗಳೂರು: ಇನ್ನು ಮಳೆಗಾಲ ಶುರುವಾಯ್ತು. ಈ ಮಳೆಗಾಲ ಬಂತು ಅಂದ್ರೆ ಸಾಕು ಎಲ್ಲೆಡೆ ಮರಗಿಡಗಳು ಬೀಳುತ್ತವೆ, ಪವರ್ ಕಟ್ ಸಮಸ್ಯೆಗಳು ಕೂಡ ಕಾಡುತ್ತವೆ. ಈ ವೇಳೆ ಬೆಸ್ಕಾಂನವರು ಜನರ ಕೈಗೆ ಸಿಗುವುದು ಕಷ್ಟವಾಗಿದೆ. ಆದರೆ ಜನರ ಸಮಸ್ಯೆಯನ್ನು ತ್ವರಿತವಾಗಿ ಸರಿ ಮಾಡುವುದಕ್ಕೆ ಇದೀಗ ಬೆಸ್ಕಾಂ ವಾಟ್ಸಾಪ್ ನಂಬರ್ ಸೌಲಭ್ಯ ಶುರು ಮಾಡಿದೆ. ಎಲ್ಲಿ, ಏನೇ ಸಮಸ್ಯೆ ಆಗಿ ಪವರ್ ಕಟ್ ಆದರೂ, ತಕ್ಷಣ ಒಂದು ವಾಟ್ಸಾಪ್ ಮಾಡಿದರೆ ಸಾಕು ಬೆಸ್ಕಾಂನವರು ಅಲ್ಲಿಗೆ ಬಂದು ಸಮಸ್ಯೆಯನ್ನು ಬಗೆಹರಿಸುತ್ತಾರೆ.
ಬೆಸ್ಕಾಂ ಸೂಚಿಸಿದ ನಂಬರ್ ಗೆ ಹಾನಿಯಾದ ವಿದ್ಯುತ್ ಕಂಬದ ಫೋಟೋ ಹಾಗೂ ವಿಳಾಸವನ್ನು ಮೆಸೇಜ್ ಮಾಡಬೇಕಿದೆ. ಈ ಮೆಸೇಜ್ ಬಂದ ಕೂಡಲೇ ಬೆಸ್ಕಾಂ ತನ್ನ ಸಿಬ್ಬಂದಿಯನ್ನು ಕಳುಹಿಸಿ ಕೊಡಲಿದೆ. ಸಮಸ್ಯೆಗೆ ತಕ್ಷಣವೇ ಪರಿಹಾರ ಸಿಗಲಿದೆ. ನಿಮ್ಮ ನಿಮ್ಮ ಪ್ರದೇಶಗಳಿಗೆ ಬೇರೆ ಬೇರೆ ನಂಬರ್ ಇದೆ. ಸೇವ್ ಮಾಡಿಕೊಂಡು ಪರಿಹಾರ ಕಂಡುಕೊಳ್ಳಬಹುದು.
ಬೆಂಗಳೂರು ಪೂರ್ವ- 8277884013
ಬೆಂಗಳೂರು ಪಶ್ಚಿಮ- 8277884012
ಬೆಂಗಳೂರು ಉತ್ತರ- 8277884014
ಬೆಂಗಳೂರು ದಕ್ಷಿಣ- 8277884011
ಕೋಲಾರ- 8277884015
ಚಿಕ್ಕಬಳ್ಳಾಪುರ- 8277884016
ಬೆಂಗಳೂರು ಗ್ರಾಮಾಂತರ- 827788401
ರಾಮನಗರ-8277884018
ತುಮಕೂರು- 8277884019
ಚಿತ್ರದುರ್ಗ- 8277884020
ದಾವಣಗೆರೆ- 8277884021 ಈ ನಂಬರ್ ಗೆ ಕರೆ ಮಾಡುವ ಮೂಲಕ ಮಳೆಗಾಲದಲ್ಲಿ ಎದುರಾಗುವ ಕರೆಂಟ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















