ಹಣ ಉಳಿತಾಯಕ್ಕೆ RD ಅಥವಾ FD.. ಯಾವುದು ಬೆಟರ್..?

ಮನುಷ್ಯನ ಈಗಿನ ಜೀವನಶೈಲಿಯಿಂದ ಹಣದ ಅವಶ್ಯಕತೆ ಬಹಳ ಇದೆ. ಬೆಲೆ ಏರಿಕೆಯ ನಡುವೆ ಮುಂದಿನ ಜೀವನಕ್ಕಾಗಿ ಹಣ ಉಳಿಸಲೇಬೇಕಾಗಿದೆ‌. ಆದರೆ ಹಣ ಉಳಿಕೆಗೆ ಅಥವಾ ಇರುವ ಹಣಕ್ಕೆ ಬ್ಯಾಂಕ್ ನಲ್ಲಿ ಯಾವ ಮಾರ್ಗವನ್ನು ಬಳಸಬೇಕೆಂಬುದು ಬಹಳ ಮುಖ್ಯ. ಕೆಲವರು ಎಫ್ಡಿ ಇಡುತ್ತಾರೆ. ಇನ್ನು ಕೆಲವರು ಆರ್ಡಿ ಮಾಡಿಸುತ್ತಾರೆ. ಮಾಡಿಸಿದ ಮೇಲೆ ಗೊಂದಲಕ್ಕೆ ಈಡಾಗುತ್ತಾರೆ. ಹೀಗಾಗಿ ಯಾವ ರೀತಿಯ ಹಣಕ್ಕೆ ಯಾವ ರೀತಿಯ ಯೋಜನೆ ಉತ್ತಮ ಎಂಬುದನ್ನು ತಜ್ಞರಿಂದ ತಿಳಿಯುವುದು ಉತ್ತಮ.

ಫಿಕ್ಸೆಡ್ ಡೆಪಾಸಿಟ್:

ನಿಶ್ಚುತ ಠೇವಣಿ ಬಂದು ಒಮ್ಮೆ ಕಟ್ಟುವ ಹಣವಾಗಿರುತ್ತದೆ. ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಎಫ್ಡಿ ತೆರೆಯಬಹುದು. ಎಷ್ಟು ಮೊತ್ತಕ್ಕಾದರೂ ಎಫ್ಡಿ ಹಾಕಬಹುದು. ಮೂರು ತಿಂಗಳಿನಿಂದ ಹಿಡಿದು ಹತ್ತು ವರ್ಷದವರೆಗೂ ಠೇವಣಿ ಇರಿಸುವ ಅವಕಾಶ ಇರುತ್ತದೆ. ಬಡ್ಡಿದರ ಕೂಡ ನಿಶ್ಚಿತವಾಗಿರುತ್ತದೆ. ಎಫ್ಡಿ ತೆರೆಯುವಾಗಲೇ ಬಡ್ಡಿ ದರ ನಿಶ್ಚಿತವಾಗಿರುತ್ತದೆ. ಕಡೆಯವರೆಗೂ ಅದೇ ಬಡ್ಡಿ ಅನ್ವಯವಾಗುತ್ತದೆ. ಮೆಚ್ಯೂರಿಟಿಗಿಂತ ಮುಂಚೆ ಹಣ ಪಡೆಯಬೇಕಾದರೆ ಅದಕ್ಕೆ ನಿರ್ದಿಷ್ಟ ದಂಡ ಕಟ್ಟಬೇಕಾಗುತ್ತದೆ.

ಆರ್‌ಡಿ ಎಂದರೆ:
ಇದು ಆವರ್ತಿತ ನಿಧಿಯಾಗಿರುತ್ತದೆ. ನಿಯಮಿತವಾಗಿ ನೀವೂ ನಿಗದಿತ ಹಣವನ್ನು ಜಮೆ ಮಾಡುತ್ತಿರಬೇಕು. ಸಾಮಾನ್ಯವಾಗಿ ಪ್ರತಿ ತಿಂಗಳು ಪೂರ್ವನಿಗದಿತವಾದ ಹಣವನ್ನು ಆವರ್ತಿತ ನಿಧೊಗೆ ಡೆಪಾಸಿಟ್ ಮಾಡಬೇಕು. ಇಲ್ಲಿಯೂ ಬಡ್ಡಿದರ ಎಫ್ಡಿ ದರದಷ್ಟೇ ಇರುತ್ತದೆ. ಆರ್‌ಡಿಯನ್ನು ಮಧ್ಯದಲ್ಲು ನಿಲ್ಲಿಸಿದರೆ ಒಂದಷ್ಟು ದಂಡ ಕಟ್ಟಬೇಕಾದ ಪರಿಸ್ಥಿತಿ ಬರುತ್ತದೆ. ನಿಮ್ಮಲ್ಲಿ ಲಂಪ್ಸಮ್ ಅಮೌಂಟ್ ಇದ್ದರೆ ಅದನ್ನು ಫಿಕ್ಸೆಡ್ ಮಾಡುವುದು ಉತ್ತಮ. ನೀವೂ ಪ್ರತಿ ತಿಂಗಳು ನಿರ್ದಿಷ್ಟ ಹಣವನ್ನು ಉಳಿಸುತ್ತಿದ್ದರೆ ಆ ಮೊತ್ತಕ್ಕೆ ಬೇಕಾದರೆ ಆರ್ಡಿ ತೆರೆಯಬಹುದು. ನಿಮ್ಮಲ್ಲಿರುವ ಹಣದ ಪ್ರಮಾಣ, ಉಳಿಕೆಯ ಪ್ರಮಾಣವನ್ನು ನೋಡಿಕೊಂಡು ಪ್ಲ್ಯಾನ್ ಮಾಡಿದರೆ ಉತ್ತಮ.

Share This Article
Leave a Comment

Leave a Reply

Your email address will not be published. Required fields are marked *