Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

75 ವರ್ಷದಿಂದ ಮೇಲ್ಜಾತಿಗೆ ಜೈ ಅಂದಿದ್ದೇ ಆಯ್ತು, ದಲಿತರ ಪರವಾಗಿ ಯಾರೂ ಕೈ ಎತ್ತಿಲ್ಲ : ರಮೇಶ್ ಜಿಗಜಣಗಿ ಬೇಸರ

---Advertisement---

ವಿಜಯಪುರ: ದಲಿತರ ಪರವಾಗಿ ಯಾರೂ ಸಹ ಮಾತನಾಡಲ್ಲ ಎಂದು ಸಂಸದ ಜಿಗಜಣಗಿ ಬೇಸರ ಹೊರ ಹಾಕಿದ್ದಾರೆ. ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲೂ ನೋಡಿದ್ದೇವೆ. ಅಸೆಂಬ್ಲಿಯಲ್ಲಿ ದೊಡ್ಡ ದೊಡ್ಡ ಗೌಡರು, ಸಾಹುಕಾರುಗಳು ಬಂದರು. ಅವರ ಪರವಾಗಿ ನಾವೂಗಳು ಕೈಎತ್ತುತ್ತಲೇ ಇದ್ದೇವೆ. ಆದರೆ ನಮ್ಮ ಪರವಾಗಿ ಯಾರೂ ಕೈ ಎತ್ತುವುದಿಲ್ಲ. ನಾವೂ ದಲಿತರು. ನಮ್ಮ ಪರವಾಗಿ ಯಾರೂ ಕೈ ಎತ್ತಲ್ಲ ಎಂದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರನ್ನು ನಾವಂತು ನೇಮಕ ಮಾಡಿಲ್ಲ. ಪಕ್ಷದ ಹಿರಿಯರು ಯಾವುದ್ಯಾವುದೋ ಕಾರಣಕ್ಕೆ ನೇಮಕ ಮಾಡಿದ್ದಾರೆ. ಬಹಳ ಯೋಚಿಸಿ ಯಡಿಯೂರಪ್ಪ ಅವರ ಮಗನೇ ಆಗಬೇಕೆಂದು ನೇಮಕ ಮಾಡಿದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷನಾಗಿರುವುದು ನಮಗೇನು ಹೊಟ್ಟೆ ಉರಿ ಇಲ್ಲ. ನಾನೇ ಬಿಜೆಪಿ ರಾಜ್ಯಾಧ್ಯಕ್ಷರಾಗಬೇಕೆಂದು ನಾನಂತು ಅಂದುಕೊಂಡಿಲ್ಲ. ಆದರೆ ದಲಿತರಿಗೆ ಕೊಡಬೇಕು ಎಂಬುದು ನನ್ನ ಆಶಯ. ಆದರೆ ದಲಿತರ ಪರವಾಗಿ ಯಾರೂ ಕೈ ಎತ್ತುವುದಿಲ್ಲ. ಇದು ಬಹಳ ದುಃಖದ ಸಂಗತಿ ಎಂದಿದ್ದಾರೆ.

 

ಬಿಜೆಪಿಯಲ್ಲಿ ಸದ್ಯ ಅಸಮಧಾನ ಹಿಗೆ ಜೋರಾಗಿಯೇ ಆಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿ ಹಲವು ಹಿರಿಯ ನಾಯಕರೆ ಇದ್ದರು. ಆದರೆ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಯಡಿಯೂರಪ್ಪ ಅವರಿಗೆ ಬಿಜೆಪಿ ಮಣೆ ಹಾಕಿದೆ. ಹೀಗಾಗಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೇ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದೆ. ಇದರಿಂದ ಈಶ್ವರಪ್ಪ ಸೇರಿದಂತೆ ಹಲವರಿಗೆ ಬೇಸರವಾಗಿದೆ. ಇದೀಗ ಸಂಸದ ಜಿಗಜಣಗಿ ಕೂಡ ಬೇಸರ ಹೊರ ಹಾಕಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment