Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಕ್ಕಳ ಕೈಯಿಂದ ಮೊಬೈಲ್ ಬಿಡಿಸಬೇಕಾ? ಪೋಷಕರೇ ಈ 7 ಟಿಪ್ಸ್ ಫಾಲೋ ಮಾಡಿ

---Advertisement---

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್, ಟಿವಿ ಮತ್ತು ಟ್ಯಾಬ್‌ಗಳಂತಹ ಡಿಜಿಟಲ್ ಸಾಧನಗಳ ಬಳಕೆಯು (ಸ್ಕ್ರೀನ್ ಟೈಮ್) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಮಕ್ಕಳ ದೃಷ್ಟಿ ದೋಷ ಹಾಗೂ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಮಕ್ಕಳ ಈ ಅಭ್ಯಾಸವನ್ನು ತಪ್ಪಿಸಲು ಮತ್ತು ಸ್ಕ್ರೀನ್ ಟೈಮ್ ಕಡಿಮೆ ಮಾಡಲು ಪೋಷಕರು ಅನುಸರಿಸಬೇಕಾದ 7 ಮುಖ್ಯ ಸಲಹೆಗಳು ಇಲ್ಲಿವೆ.

ಹೊರಾಂಗಣ ಆಟಗಳಿಗೆ ಪ್ರೋತ್ಸಾಹ ಕೊಡಿ:

ಮಕ್ಕಳು ದಿನದ ಸ್ವಲ್ಪ ಸಮಯವನ್ನು ಮನೆಯಿಂದ ಹೊರಗೆ ಕಳೆಯುವಂತೆ ನೋಡಿಕೊಳ್ಳಿ. ನೆರೆಹೊರೆಯ ಮಕ್ಕಳೊಂದಿಗೆ ಕೂಡಿ ಆಟವಾಡುವುದರಿಂದ ಅವರ ಗಮನ ಫೋನ್‌ನಿಂದ ಬೇರೆಡೆಗೆ ಹರಿಯುತ್ತದೆ.

ನಿರ್ದಿಷ್ಟ ಸಮಯ ನಿಗದಿಪಡಿಸಿ:

ಮಕ್ಕಳಿಗೆ ಫೋನ್ ಅಥವಾ ಟಿವಿ ನೋಡಲು ಪ್ರತಿದಿನ ನಿರ್ದಿಷ್ಟವಾದ ಸಮಯವನ್ನು ಮಾತ್ರ ನಿಗದಿಪಡಿಸಿ, ಅದನ್ನೇ ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿ.

ಪುಸ್ತಕ ಓದುವ ಅಭ್ಯಾಸ ಬೆಳೆಸಿ:

ಫೋನ್ ಹಿಡಿಯುವ ಬದಲಿಗೆ ಮಕ್ಕಳಿಗೆ ಕಥೆ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿ. ಇದರ ಜೊತೆಗೆ ಚಿತ್ರಕಲೆ (ಆರ್ಟ್), ಕರಕುಶಲ ವಸ್ತುಗಳ ತಯಾರಿ (ಕ್ರಾಫ್ಟಿಂಗ್) ಮತ್ತು ಗಿಡಗಳನ್ನು ಬೆಳೆಸುವ (ಗಾರ್ಡನಿಂಗ್) ಹವ್ಯಾಸಗಳನ್ನು ರೂಢಿಸಿ.

ಪಝಲ್ ಮತ್ತು ಮೆದುಳಿನ ಆಟಗಳು:

ಸ್ಕ್ರೀನ್ ಬಳಕೆಯನ್ನು ತಗ್ಗಿಸಲು ಮಕ್ಕಳಿಗೆ ಬ್ರೈನ್ ಗೇಮ್ಸ್, ಪಝಲ್ (Puzzle) ಬಿಡಿಸುವುದು ಮುಂತಾದ ಆಟಗಳನ್ನು ಅಭ್ಯಾಸ ಮಾಡಿಸಿ. ಇದರಿಂದ ಅವರ ಮಾನಸಿಕ ಬೆಳವಣಿಗೆಯೂ ಉತ್ತಮಗೊಳ್ಳುತ್ತದೆ.

ಕುಟುಂಬದೊಂದಿಗೆ ಸಮಯ ಕಳೆಯಿರಿ:

ಪೋಷಕರು ತಮ್ಮ ದಿನಚರಿಯಲ್ಲಿ ಮಕ್ಕಳಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಬೇಕು. ಮಕ್ಕಳೊಂದಿಗೆ ಚಾಟ್ ಮಾಡುವುದು, ಜೊತೆಗೆ ಬೆರೆಯುವುದು ಅತ್ಯಗತ್ಯ.

ಮನೆಯೊಳಗಿನ ಸಾಂಪ್ರದಾಯಿಕ ಆಟಗಳು:

ಚೆಸ್, ಕ್ಯಾರಮ್, ಶಟಲ್, ರಿಂಗ್ ಥ್ರೋ, ಕಣ್ಣಾಮುಚ್ಚಾಲೆ ಅಥವಾ ಮ್ಯೂಸಿಕಲ್ ಚೇರ್‌ನಂತಹ ಆಟಗಳನ್ನು ಮಕ್ಕಳೊಂದಿಗೆ ಆಡುವುದರಿಂದ ಮಕ್ಕಳು ಮೊಬೈಲ್ ಫೋನ್ ಮರೆಯುತ್ತಾರೆ.

ಪೋಷಕರೇ ಮಾದರಿಯಾಗಿರಿ:

ಮಕ್ಕಳು ಪೋಷಕರನ್ನು ನೋಡಿಯೇ ಕಲಿಯುವುದರಿಂದ, ಪೋಷಕರು ಕೂಡ ಮಕ್ಕಳ ಎದುರು ಮೊಬೈಲ್ ಫೋನ್ ಬಳಕೆಯನ್ನು ಕಡಿಮೆ ಮಾಡಿ ಅವರಿಗೆ ಉತ್ತಮ ಮಾದರಿಯಾಗಬೇಕು.

Join WhatsApp

Join Now

Join Telegram

Join Now