Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾಸನ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ : ದರ್ಶನ್ ಗೆ ಜಾಮೀನು ನೀಡಲು ನಿರಾಕರಣೆ..!

---Advertisement---

ಬೆಂಗಳೂರು: ಈಗಷ್ಟೇ ನವರಾತ್ರಿ ಕಳೆದಿದೆ. ತಾಯಿ ಚಾಮುಂಡೇಶ್ಚರಿ ಆಶೀರ್ವಾದ ನಮ್ಮ ಬಾಸ್ ಮೇಲಿದೆ. ಖಂಡಿತ ಇಂದು ಜಾಮೀನು ಸಿಕ್ಕೆ ಸಿಗುತ್ತದೆ ಎಂದು ಇಡೀ ದರ್ಶನ್ ಅಭಿಮಾನಿ ಸಮೂಹ ಕಾಯುತ್ತಿತ್ತು. ಈ ದಿನವನ್ನು ಸೆಲೆಬ್ರೇಟ್ ಮಾಡುವುದಕ್ಕೂ ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಆದರೆ ಅವರ ಆಸೆ-ಕನಸಿಗೆ ತಣ್ಣೀರು ಬಿದ್ದಿದೆ. ದರ್ಶನ್ ಜಾಮೀನು ನೀಡಲು ನಿರಾಕರಿಸಲಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿರುವ ಆಅರೋಪದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್, ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ನಡೆದಿದೆ. ದರ್ಶನ್ ಪರ ವಕೀಲರಾದ ನಾಗೇಶ್ ಹಾಗೂ SPP ಪ್ರಸನ್ನ ಕುಮಾರ್ ನಡುವೆ ವಾದ ಪ್ರತಿವಾದ ಜೋರಾಗಿತ್ತು. ಕೋರ್ಟ್ ಇಬ್ಬರ ವಾದ ಪ್ರತಿವಾದ ಆಲಿಸಿ, ಇಂದಿಗೆ ತೀರ್ಪನ್ನು ಕಾದಿರಿಸಿತ್ತು. ಹೀಗಾಗಿ ದರ್ಶನ್ ಅಭಿಮಾನಿಗಳು ಇಂದು ಜಾಮೀನು ಸಿಕ್ಕಿಯೇ ಸಿಗುತ್ತದೆ ಎಂದುಕೊಂಡಿದ್ದರು. ಸ್ವತಃ ದರ್ಸದನ್ ಕೂಡ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.

ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ರೇಣುಕಾಸ್ವಾಮಿಯನ್ನು ದರ್ಶನ್ ಅಂಡ್ ಗ್ಯಾಂಗ್ ಚಿತ್ರಹಿಂಸೆ ಕೊಟ್ಟು ಸಾಯಿಸಿದ್ದರು. ದರ್ಶನ್ ಎ2 ಆರೋಪಿಯಾಗಿದ್ದಾರೆ. ಸಿಸಿಹೆಚ್ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ದರ್ಶನ್ ಪರ ವಕಿಲರು ಹೈಕೋರ್ಟ್ ಮೊರೆ ಹೋಗಲಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಕೂಡ ದೇವಸ್ಥಾನಗಳಿಗೆಲ್ಲ ಓಡಾಡುತ್ತಿದ್ದು, ದರ್ಶನ್ ಅವರು ಬೇಗ ಹೊರಗೆ ಬರಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಇಂದು ಬಳ್ಳಾರಿ ಜೈಲಿಗೆ ಬರಬೇಕಿದ್ದ ವಿಜಯಲಕ್ಷ್ಮೀ ಕಡೆ ಗಳಿಗೆಯಲ್ಲಿ ಭೇಟಿ ರದ್ದು ಮಾಡಿಕೊಂಡಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...