ಸುದ್ದಿಒನ್, ಚಿತ್ರದುರ್ಗ,ಆ. 25 : ಶರಣ ಸಂಸ್ಕೃತಿ ಉತ್ಸವ-2024ರ ಅಂಗವಾಗಿ ನಡೆಯುವ ಕ್ರೀಡಾಕೂಟಕ್ಕೆ ಶ್ರೀ ಜಯದೇವ ಕಪ್-2024 ಎಂದು ಹೆಸರಿಡಲಾಗಿದ್ದು, ರಾಜ್ಯಮಟ್ಟದ ಹೊನಲುಬೆಳಕಿನ ಮಹಿಳೆಯರ ಮತ್ತು ಪುರುಷರ ಕಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಕ್ರೀಡಾ ಸಮಿತಿಯ ಅಧ್ಯಕ್ಷ ಮಾಜಿ ನಗರಸಭಾ ಸದಸ್ಯ ಶ್ರೀರಾಮ್ ಅವರು ತಿಳಿಸಿದ್ದಾರೆ.
ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ ಈ ಕ್ರೀಡಾಕೂಟವು ಮೂರುದಿನಗಳ ಕಾಲ ನಡೆಯಲಿದ್ದು, ಕ್ರೀಡಾಕೂಟ ಸಮಿತಿಯ ಗೌರವಾಧ್ಯಕ್ಷರಾಗಿ ಭೀಮಸಮುದ್ರದ ಉದ್ಯಮಿ ಶಂಕರಮೂರ್ತಿ, ಉಪಾಧ್ಯಕ್ಷರುಗಳಾಗಿ ಸಿ.ಟಿ. ಕಷ್ಣಮೂರ್ತಿ ಮತ್ತು ಸಿದ್ದವ್ವನಹಳ್ಳಿ ಪರಮೇಶ್, ಕಾರ್ಯದರ್ಶಿಯಾಗಿ ಅನಿಸ್, ಸಂಘಟನಾ ಕಾರ್ಯದರ್ಶಿಯಾಗಿ ರವಿ ಮಲ್ಲಾಪುರ, ಸಹಕಾರ್ಯದರ್ಶಿಗಳಾಗಿ ಹೆಚ್.ಎಂ. ಮಂಜುನಾಥ್, ಮೆದೇಹಳ್ಳಿ ವಿಜಯಕುಮಾರ್, ಸಂಘಟಕರಾಗಿ ಮಹೇಶ್, ನಾಗರಾಜ್ ನಂದಿಪುರ, ಸಿರಾಜ್, ರಾಮನಾಯ್ಕ್ ಅವರುಗಳನ್ನು ನೇಮಿಸಲಾಗಿದೆ.
ಮಹಿಳಾ ಕ್ರೀಡಾಕೂಟದ ಅಧ್ಯಕ್ಷರಾಗಿ ಶ್ರೀಮತಿ ರುದ್ರಾಣಿ ಗಂಗಾಧರ್, ಉಪಾಧ್ಯಕ್ಷರಾಗಿ ಶ್ರೀಮತಿ ಮೋಕ್ಷರುದ್ರಸ್ವಾಮಿ, ಕಾರ್ಯದರ್ಶಿಯಾಗಿ ಶ್ರೀಮತಿ ಆರತಿ ಶಿವಮೂರ್ತಿಯಾಗಿ, ಖಜಾಂಚಿಯಾಗಿ ಶ್ರೀಮತಿ ಲತಾ ರಮೇಶ್ ಟಿ.ಕೆ. ಅವರನ್ನು ನೇಮಕ ಮಾಡಲಾಗಿದೆ ಎಂದು ಕ್ರೀಡಾಕೂಟದ ಅಧ್ಯಕ್ಷರಾದ ಶ್ರೀರಾಮ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











