ಮಂತ್ರೋಚ್ಚಾರಣೆಯಿಂದ ಉಂಟಾಗುವ ಶಬ್ದ ತರಂಗಗಳು ದೇಹ ಮತ್ತು ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ. ಶಿವಭಕ್ತರು ನಿತ್ಯ ಜಪಿಸುವ ಅತ್ಯಂತ ಪವಿತ್ರ ಮತ್ತು ಶಕ್ತಿಶಾಲಿ ಮಂತ್ರಗಳಲ್ಲಿ ‘ಓಂ ನಮಃ ಶಿವಾಯ’ ಪ್ರಮುಖ ಸ್ಥಾನ ಪಡೆದಿದೆ.ಸಾಮಾನ್ಯವಾಗಿ ಅನೇಕ ಮಂತ್ರಗಳ ಜಪಕ್ಕೆ ನಿರ್ದಿಷ್ಟ ತಿಥಿ, ನಕ್ಷತ್ರ, ಶುಭ ಮುಹೂರ್ತ ಹಾಗೂ ಕಟ್ಟುನಿಟ್ಟಿನ ನಿಯಮಗಳು ಅಗತ್ಯವಾಗಿರುತ್ತವೆ. ಆದರೆ ‘ಓಂ ನಮಃ ಶಿವಾಯ’ ಮಂತ್ರದ ವಿಶೇಷತೆ ಎಂದರೆ ಇದನ್ನು ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಲ್ಲಿ ಭಕ್ತಿಯಿಂದ ಜಪಿಸಬಹುದಾಗಿದೆ. ಇದೇ ಕಾರಣಕ್ಕೆ ಈ ಮಂತ್ರವು ಶತಮಾನಗಳಿಂದ ಕೋಟ್ಯಂತರ ಭಕ್ತರ ಜೀವನದ ಅವಿಭಾಜ್ಯ ಅಂಗವಾಗಿದೆ.
ಏಕೆ ವಿಶೇಷ ಈ ಪಂಚಾಕ್ಷರಿ ಮಂತ್ರ?
‘ನ-ಮ-ಶಿ-ವಾ-ಯ’ ಎಂಬ ಐದು ಅಕ್ಷರಗಳು ಸೃಷ್ಟಿಯ ಮೂಲವಾದ ಪಂಚಭೂತಗಳಾದ ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶವನ್ನು ಪ್ರತಿನಿಧಿಸುತ್ತವೆ ಎಂದು ಆಧ್ಯಾತ್ಮಿಕ ಗ್ರಂಥಗಳು ವಿವರಿಸುತ್ತವೆ. ಇದರೊಂದಿಗೆ ‘ಓಂ’ ಎಂಬ ಪ್ರಣವ ನಾದ ಸೇರ್ಪಡೆಯಾಗುವುದರಿಂದ ಇದು ಷಡಕ್ಷರಿ ಮಂತ್ರವಾಗಿ ಪರಿಗಣಿಸಲಾಗುತ್ತದೆ.
ಮಂತ್ರ ಸಿದ್ಧಿಯ ನಿಜವಾದ ಅರ್ಥ
ಮಂತ್ರ ಸಿದ್ಧಿ ಎಂದರೆ ಪವಾಡಗಳು ನಡೆಯುವುದು ಅಥವಾ ತಕ್ಷಣದ ಫಲ ಸಿಗುವುದು ಎಂಬುದಲ್ಲ. ಆಧ್ಯಾತ್ಮಿಕ ದೃಷ್ಟಿಯಿಂದ ಮಂತ್ರದಲ್ಲಿ ಮನಸ್ಸು ಸಂಪೂರ್ಣವಾಗಿ ಲೀನವಾಗಿ ಏಕಾಗ್ರತೆಯನ್ನು ಸಾಧಿಸುವುದೇ ನಿಜವಾದ ಮಂತ್ರ ಸಿದ್ಧಿ ಎಂದು ಹೇಳಲಾಗುತ್ತದೆ. ನಿರಂತರ ಜಪ ಮತ್ತು ಸಾಧನೆಯ ಮೂಲಕ ಈ ಸ್ಥಿತಿಯನ್ನು ತಲುಪಬಹುದು.
ಜಪದಿಂದ ಸಿಗುವ ಲಾಭಗಳೇನು?
ಧಾರ್ಮಿಕ ನಂಬಿಕೆಗಳ ಪ್ರಕಾರ, ‘ಓಂ ನಮಃ ಶಿವಾಯ’ ಮಂತ್ರದ ನಿರಂತರ ಜಪವು ಮನಸ್ಸಿಗೆ ಶಾಂತಿ ನೀಡುತ್ತದೆ. ಮಾನಸಿಕ ಒತ್ತಡ, ಆತಂಕ ಮತ್ತು ಗೊಂದಲಗಳನ್ನು ಕಡಿಮೆ ಮಾಡಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಜೊತೆಗೆ ಜೀವನದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯವಾದ ಮನೋಸ್ಥೈರ್ಯ ಮತ್ತು ಏಕಾಗ್ರತೆಯನ್ನು ಬೆಳೆಸುತ್ತದೆ ಎಂದು ಭಕ್ತರು ನಂಬುತ್ತಾರೆ.
ಸರಳತೆ, ಸಾರ್ವತ್ರಿಕತೆ ಮತ್ತು ಆಧ್ಯಾತ್ಮಿಕ ಶಕ್ತಿಯಿಂದ ಕೂಡಿರುವ ‘ಓಂ ನಮಃ ಶಿವಾಯ’ ಮಂತ್ರವು ಇಂದಿಗೂ ಶಿವಭಕ್ತರ ಆರಾಧನೆಯ ಪ್ರಮುಖ ಭಾಗವಾಗಿ ಉಳಿದಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











