Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎಸ್ ಬಿಐ ಕ್ರೆಡಿಟ್ ಕಾರ್ಡ್ ಹೊಸ ನಿಯಮ: ಜುಲೈ 1 ರಿಂದ ರಿವಾರ್ಡ್ ಪಾಯಿಂಟ್ ಕಡಿತ!

---Advertisement---

ಸುದ್ದಿಒನ್,ದೆಹಲಿ,ಜೂನ್.03:ದೇಶದ ಪ್ರಮುಖ ಕ್ರೆಡಿಟ್ ಕಾರ್ಡ್ ಸಂಸ್ಥೆಗಳಲ್ಲಿ ಒಂದಾದ ಎಸ್ಬಿಐ ಕಾರ್ಡ್ (SBI Card) ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಆಯ್ದ ಫೋನ್ಪೇ ಎಸ್ಬಿಐ ಕ್ರೆಡಿಟ್ ಕಾರ್ಡ್ ಗಳ (PhonePe SBI Credit Cards) ರಿವಾರ್ಡ್ ಪಾಯಿಂಟ್ ಪ್ರೋಗ್ರಾಂನಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ.

ಈ ಹೊಸ ನಿಯಮಗಳು 2026ರ ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಇದು ಮುಖ್ಯವಾಗಿ ಫೋನ್ ಪೇ ಎಸ್ ಬಿಐ ಕ್ರೆಡಿಟ್ ಕಾರ್ಡ್ ಪರ್ಪಲ್ ಮತ್ತು ‘ಫೋನ್ ಪೇ ಎಸ್ ಬಿಐ ಕ್ರೆಡಿಟ್ ಕಾರ್ಡ್ ಸೆಲೆಕ್ಟ್ ಬ್ಲಾಕ್ ಕಾರ್ಡ್ ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ. ಹೊಸ ನಿಯಮಗಳ ಪ್ರಕಾರ, ರಿವಾರ್ಡ್ ಪಾಯಿಂಟ್ ಗಳ ಗಳಿಕೆಗೆ ಗರಿಷ್ಠ ಮಿತಿಯನ್ನು ವಿಧಿಸಲಾಗಿದೆ ಮತ್ತು ಕೆಲವು ವಹಿವಾಟುಗಳಿಗೆ ರಿವಾರ್ಡ್ ಪಾಯಿಂಟ್ ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಸಾಮಾನ್ಯವಾಗಿ ಗ್ರಾಹಕರು ಇನ್ಶೂರೆನ್ಸ್, ಯುಟಿಲಿಟಿ ಬಿಲ್, ಶಿಕ್ಷಣ, ಜ್ಯುವೆಲ್ಲರಿ ಖರೀದಿ ಮತ್ತು ಟೋಲ್ ಪೇಮೆಂಟ್ ಗಳಿಗಾಗಿ ಈ ಕಾರ್ಡ್ ಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಜುಲೈ 1 ರಿಂದ ಇವುಗಳ ಮೇಲಿನ ಮಾಸಿಕ ರಿವಾರ್ಡ್ ಪಾಯಿಂಟ್ ಗಳಿಕೆಗೆ ಮಿತಿ ಬರಲಿದೆ.

ರಿವಾರ್ಡ್ ಪಾಯಿಂಟ್ ಗಳ ಮಿತಿ ಕಡಿತ ಹೀಗಿದೆ:

ಫೋನ್ ಪೇ ಎಸ್ ಬಿಐ ಕ್ರೆಡಿಟ್ ಕಾರ್ಡ್ ಪರ್ಪಲ್ (PhonePe SBI Credit Card Purple):

ಹಳೆಯ ನಿಯಮ: ಫೋನ್ ಪೇ ಮೂಲಕ ಮಾಡುವ ಖರ್ಚುಗಳ ಮೇಲೆ ತಿಂಗಳಿಗೆ ಗರಿಷ್ಠ 1,000 ರಿವಾರ್ಡ್ ಪಾಯಿಂಟ್ ಗಳು ಹಾಗೂ ಇತರ ಆನ್ಲೈನ್ ಶಾಪಿಂಗ್ಗಳ ಮೇಲೆ 1,000 ಪಾಯಿಂಟ್ ಗಳು ಸಿಗುತ್ತಿದ್ದವು.

ಹೊಸ ನಿಯಮ: ಫೋನ್ ಪೇ ಖರ್ಚುಗಳನ್ನು ಈಗ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಇನ್ಶೂರೆನ್ಸ್ ಪಾವತಿಗಳಿಗೆ ಗರಿಷ್ಠ 250 ಪಾಯಿಂಟ್ ಗಳು ಮತ್ತು ಇತರ ಫೋನ್ ಪೇ ವಹಿವಾಟುಗಳಿಗೆ ಗರಿಷ್ಠ 750 ಪಾಯಿಂಟ್ ಗಳನ್ನು ಮಾತ್ರ ಪಡೆಯಬಹುದು.

ಇನ್ನುಳಿದ ಆನ್ ಲೈನ್ ಖರ್ಚುಗಳ ಮೇಲಿನ ಮಾಸಿಕ ಮಿತಿಯನ್ನು 1,000 ರಿಂದ 750 ಪಾಯಿಂಟ್ ಗಳಿಗೆ ಕಡಿತಗೊಳಿಸಲಾಗಿದೆ.

ಫೋನ್ ಪೇ ಎಸ್ ಬಿಐ ಕ್ರೆಡಿಟ್ ಕಾರ್ಡ್ ಸೆಲೆಕ್ಟ್ ಬ್ಲಾಕ್ (PhonePe SBI Credit Card Select Black):

ಹಳೆಯ ನಿಯಮ: ಫೋನ್ಪೇ ವಹಿವಾಟುಗಳ ಮೇಲೆ ತಿಂಗಳಿಗೆ ಗರಿಷ್ಠ 2,000 ರಿವಾರ್ಡ್ ಪಾಯಿಂಟ್ಗಳು ಸಿಗುತ್ತಿದ್ದವು.

ಹೊಸ ನಿಯಮ: ಇದನ್ನು ಸಹ ವಿಂಗಡಿಸಲಾಗಿದ್ದು, ಇನ್ಶೂರೆನ್ಸ್ ಪಾವತಿಗಳಿಗೆ ಗರಿಷ್ಠ 500 ಪಾಯಿಂಟ್ ಗಳು ಮತ್ತು ಇತರ ಫೋನ್ ಪೇ ವಹಿವಾಟುಗಳಿಗೆ ಗರಿಷ್ಠ 1,500 ಪಾಯಿಂಟ್ ಗಳನ್ನು ನಿಗದಿಪಡಿಸಲಾಗಿದೆ.ಇತರ ಆನ್ಲೈನ್ ಖರ್ಚುಗಳ ಮೇಲಿನ ಮಾಸಿಕ ರಿವಾರ್ಡ್ ಪಾಯಿಂಟ್ ಮಿತಿಯನ್ನು 2,000 ದಿಂದ ನೇರವಾಗಿ 1,000 ಪಾಯಿಂಟ್ ಗಳಿಗೆ (ಅರ್ಧದಷ್ಟು) ಕಡಿತಗೊಳಿಸಲಾಗಿದೆ.ನಿಗದಿಪಡಿಸಿದ ಮಿತಿಗಿಂತ ಹೆಚ್ಚು ಖರ್ಚು ಮಾಡಿದರೂ ಸಹ, ಆ ಮಿತಿಯವರೆಗಿನ ರಿವಾರ್ಡ್ ಪಾಯಿಂಟ್ಗಳು ಮಾತ್ರ ಗ್ರಾಹಕರ ಖಾತೆಗೆ ಜಮೆಯಾಗಲಿವೆ.

ಇವುಗಳ ಮೇಲೆ ಇನ್ಮುಂದೆ ‘ನೋ’ ರಿವಾರ್ಡ್ ಪಾಯಿಂಟ್ಸ್!

ಜುಲೈ 1 ರಿಂದ ಕೆಲವು ನಿರ್ದಿಷ್ಟ ಕೆಟಗರಿಗಳ ಅಡಿಯಲ್ಲಿ ಮಾಡುವ ವಹಿವಾಟುಗಳಿಗೆ ಯಾವುದೇ ರಿವಾರ್ಡ್ ಪಾಯಿಂಟ್ ಗಳು ಲಭ್ಯವಿರುವುದಿಲ್ಲ.

ಟೋಲ್ ಮತ್ತು ಬ್ರಿಡ್ಜ್ ಪೇಮೆಂಟ್ಸ್ (Toll and Bridge payments)

ಗಿಫ್ಟ್ ಮತ್ತು ಸಾವೊನಿರ್ಗಳ ಖರೀದಿ (Gifts and Souvenirs)

ಜ್ಯುವೆಲ್ಲರಿ (ಚಿನ್ನಾಭರಣ) ಖರೀದಿ

ಶಿಕ್ಷಣ ಸಂಸ್ಥೆಗಳಿಗೆ ಮಾಡುವ ಫೀಸ್ ಪಾವತಿಗಳು

ಫೋನ್ ಪೇ ಆ್ಯಪ್ ಹೊರತುಪಡಿಸಿ ಹೊರಗೆ ಮಾಡುವ ಯುಟಿಲಿಟಿ ಬಿಲ್ ಪಾವತಿಗಳು

ಫೋನ್ ಪೇ ಆ್ಯಪ್ ಹೊರಗೆ ಮಾಡುವ ಇನ್ಶೂರೆನ್ಸ್ ಪಾವತಿಗಳು

ಫೋನ್ ಪೇ ಆ್ಯಪ್ ಹೊರತುಪಡಿಸಿ ಹೊರಗೆ ಮಾಡುವ ಯುಪಿಐ (UPI) ವಹಿವಾಟುಗಳು

ಹೀಗಾಗಿ, ಎಸ್ ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಜುಲೈ 1 ರಿಂದ ತಮ್ಮ ವಹಿವಾಟುಗಳನ್ನು ನಡೆಸುವಾಗ ಈ ಹೊಸ ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ.

Join WhatsApp

Join Now

Join Telegram

Join Now