ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 31 : ಹೊಸದುರ್ಗ ತಾಲ್ಲೂಕು ಮಾಡದಕೆರೆ ಹೋಬಳಿ ಸಣ್ಣಕಿಟ್ಟದಹಳ್ಳಿ ಗ್ರಾಮದ 75 ವರ್ಷದ ವೃದ್ದ ಓಬಣ್ಣನಿಗೆ ಕಳೆದ ತಿಂಗಳು ಏಳನೆ ತಾರೀಖಿನಂದು ಕಾರು ಡಿಕ್ಕಿ ಹೊಡೆಸಿದ ಇದೇ ಗ್ರಾಮದ ತಿಪ್ಪೇಸ್ವಾಮಿ ಎಂಬುವನನ್ನು ಇದುವರೆವಿಗೂ ಬಂಧಿಸದೆ ಕರ್ತವ್ಯ ಲೋಪವೆಸಗಿರುವ ಹೊಸದುರ್ಗ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಮೇಶ್ ಕೆ.ಟಿ. ಇವರನ್ನು ಸೇವೆಯಿಂದ ಅಮಾನತ್ತುಗೊಳಿಸುವಂತೆ ನವ ಪ್ರಜಾ ರಕ್ಷಣಾ ವೇದಿಕೆಯಿಂದ ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಬಡಾವಣೆ ಠಾಣೆ ಸಬ್‍ಇನ್ಸ್‍ಪೆಕ್ಟರ್‍ಗೆ ಮನವಿ ಸಲ್ಲಿಸಲಾಯಿತು.
ಆ.7 ರಂದು ರಾತ್ರಿ 8-30 ರ ಸಮಯದಲ್ಲಿ ಓಬಣ್ಣ ಹೊಲದಿಂದ ಮನೆಗೆ ಹೋಗುತ್ತಿದಾಗ ತಿಪ್ಪೇಸ್ವಾಮಿ ಕಾರನ್ನು ವೇಗವಾಗಿ ಚಲಾಯಿಸಿ ಡಿಕ್ಕಿ ಹೊಡೆಸಿದ್ದಲ್ಲದೆ ಅಮಾನವೀಯವಾಗಿ ವರ್ತಿಸಿದ್ದಾನೆ. ಇಸ್ಪಿಟ್ ದಂಧೆ ನಡೆಸುತ್ತಿರುವ ಈತ ರಾಜಾರೋಷವಾಗಿ ಸುತ್ತಾಡಿಕೊಂಡಿದ್ದರು ಹೊಸದುರ್ಗ ಠಾಣೆ ಪೊಲೀಸರು ಬಂಧಿಸಿಲ್ಲವೇಕೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು ಓಬಣ್ಣನ ಕುಟುಂಬದವರು ಹಲವಾರು ಬಾರಿ ಹೊಸದುರ್ಗ ಪೊಲೀಸರನ್ನು ವಿಚಾರಿಸಿದರು ಉಡಾಫೆ ಉತ್ತರ ಕೊಡುತ್ತಿದ್ದಾರೆ. ಕೂಡಲೆ ತಿಪ್ಪೇಸ್ವಾಮಿಯನ್ನು ಬಂಧಿಸಿ ವೃತ್ತ ನಿರೀಕ್ಷಕ ರಮೇಶ್ ಕೆ.ಟಿ.ಇವರನ್ನು ಸೇವೆಯಿಂದ ಅಮಾನತ್ತುಗೊಳಿಸುವಂತೆ ಒತ್ತಾಯಿಸಿದರು.
ನವ ಪ್ರಜಾ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೆಚ್.ಏಕಾಂತಪ್ಪ, ಭ್ರಷ್ಠಾಚಾರ ವಿರೋಧಿ ಆಂದೋಲನ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗ, ಹೆಚ್.ಶಿವಮೂರ್ತಿ
ಜಯರಾಮ್, ಅಜ್ಜಪ್ಪ, ವಿಶ್ವನಾರಾಯಣಮೂರ್ತಿ, ಓ.ಕರಿಬಸಪ್ಪ ಇವರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.















