ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಆಗಸ್ಟ್. 31 : ಸುಮಾರು 45 ವರ್ಷಗಳ ಹಳೆಯ ಕೋನಿಗರಹಳ್ಳಿ ಸೇತುವೆ ಬಿರುಕು ಬಿಟ್ಟು ಅಪಾಯಕ್ಕೆ ಸ್ಥಿತಿಯಲ್ಲಿದ್ದು ಈ ಸೇತುವೆ ಕುಸಿದಿರುವುದರಿಂದ ಸುಮಾರು ಹದಿನೈದು ಹಳ್ಳಿಗೆ ಸಂಚಾರ ವ್ಯಥ್ಯವಾಗಲಿದೆ. ಶಾಲಾ ಕಾಲೇಜುಗಳಿಗೆ ಸಂಚರಿಸುವ ವಿದ್ಯಾರ್ಥಿಗಳು ಸಹ ತೊಂದರೆ ಅನುಭವಿಸಲಿದ್ದಾರೆ. ಗುಂಡಿಗಳು, ಮುರಿದು ಬಿದ್ದ ತಡೆಗೋಡೆ, ಜೀವದ ಹಂಗು ತೊರೆದು ಸಂಚಾರ ಮಾಡುತ್ತಿರುವ ವಾಹನ ಸವಾರರು, ಶಾಲಾ ಮಕ್ಕಳು ಈ ಅಪಾಯದ ದೃಶ್ಯಗಳು ಕಂಡು ಬಂದಿದ್ದು ತಾಲೂಕಿನ ಕೋನಿಗರಹಳ್ಳಿ ಸೇತುವೆ .
ಈ ಸೇತುವೆಯನ್ನು 1982ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ದಿ. ಗುಂಡೂರಾವ್ ಸುಮಾರು 15 ಹಳ್ಳಿಗಳ ಸಂಪರ್ಕಕ್ಕೆ ಹಾಗೂ ಜನರ ಓಡಾಡಕ್ಕೆ ಉಪಯೋಗವಾಗಲಿ ಎಂದು ವೇದಾವತಿ ನದಿಗೆ ಅಡ್ಡಲಾಗಿ ಸೇತುವೆ ಕಟ್ಟಿಸಿ ಉದ್ಘಾಟನೆ ಮಾಡಿದ್ದರು. ಆದರೆ 45 ವರ್ಷಗಳ ಬಳಿಕ ಸೇತುವೆ ಸಂಪೂರ್ಣ ಬಿರುಕು ಬಿಟ್ಟು ಸಂಚಾರಕ್ಕೆ ಅಡಚಣೆಯಾಗಿದೆ.
45 ವರ್ಷಗಳ ಹಳೇ ಸೇತುವೆ :
ಪರುಶುರಾಂಪುರ ಸೇರಿದಂತೆ ಸುಮಾರು 15 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಎರಡ್ಮೂರು ವರ್ಷಗಳಿಂದ ಬಿರುಕು ಬಿಡುತ್ತಲೇ ಬರುತ್ತಿದೆ. ಈ ಸೇತುವೆ ಮೇಲೆ ದಿನನಿತ್ಯ ನೂರಾರು ಮಂದಿ ವಾಹನ ಸವಾರರು ಸೇರಿದಂತೆ ಶಾಲಾ ವಾಹನಗಳು ಓಡಾಡುತ್ತಿವೆ. ಭಾರೀ ಗಾತ್ರದ ವಾಹನಗಳು ಸಂಚಾರ ಮಾಡಿದಾಗ ಸೇತುವೆಯೇ ನಡುಗುತ್ತದೆ.
ಇಂದು ಸೇತುವೆ ಕೆಳಗೆ ಬಿರುಕು ಬಿಟ್ಟು ಸೇತುವೆ ಕೂಸಿದು ಹೋಗಿದ್ದು ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ..
ಕುಸಿದಿರುವ ಸೇತುವೆಯಲು ಸಹ ಜೀವದ ಹಂಗು ತೊರೆದು ವಿದ್ಯಾರ್ಥಿಗಳು ಇಂದು ಸಂಚರಿಸುವಂತಹ ದೃಶ್ಯ ಕಂಡು ಬಂದಿದೆ.















