ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 31 : ಚಿತ್ರದುರ್ಗಕ್ಕೆ ಗೊಬ್ಬರದ ರೇಕ್ ಪಾಯಿಂಟ್ ಮಂಜೂರು ಮಾಡುವಂತೆ ಯುವ ಕರ್ನಾಟಕ ವೇದಿಕೆಯಿಂದ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಮಂತ್ರಿ ವಿ.ಸೋಮಣ್ಣನವರಿಗೆ ಭಾನುವಾರ ಮನವಿ ಸಲ್ಲಿಸಲಾಯಿತು.
ಫರ್ಟಿಲೈಸರ್ ರೇಕ್ ಪಾಯಿಂಟ್ ಚಿತ್ರದುರ್ಗಕ್ಕೆ ಅತ್ಯವಶ್ಯಕವಾಗಿದ್ದು, ದಾವಣಗೆರೆ, ಹಾಸನದಲ್ಲಿ ಗೊಬ್ಬರದ ರೇಕ್ ಪಾಯಿಂಟ್ ಇದೆ. ಹಾಗಾಗಿ ಚಿತ್ರದುರ್ಗದಲ್ಲಿಯೂ ಗೊಬ್ಬರದ ರೇಕ್ ಪಾಯಿಂಟ್ ಆರಂಭಗೊಂಡರೆ ರೈತರಿಗೆ ಅನುಕೂಲವಾಗಲಿದೆ. ರೈಲು ಸಂಪರ್ಕ ಹಾಗೂ ರೇಕ್ ಇಳಿಸುವ ವ್ಯವಸ್ಥೆ, ಗೊಬ್ಬರ ಸಂಗ್ರಹಿಸಲು ಸೂಕ್ತವಾದ ಗೋದಾಮುಗಳ ನಿರ್ಮಾಣ, ಲೋಡಿಂಗ್ ಮತ್ತು ಅನ್‍ಲೋಡಿಂಗ್‍ಗೆ ಅಗತ್ಯ ಯಂತ್ರೋಪಕರಣಗಳ ಅಳವಡಿಕೆ, ಲಾರಿ ಹಾಗೂ ಇತರೆ ಸರಕು ವಾಹನಗಳ ಸಂಚಾರಕ್ಕೆ ಸೂಕ್ತ ರಸ್ತೆ ಸಂಪರ್ಕ. ಕುಡಿಯುವ ನೀರು, ವಿದ್ಯುತ್, ಬೆಳಕಿನ ವ್ಯವಸ್ಥೆ, ಮಳೆ ಮತ್ತು ಹವಾಮಾನದಿಂದ ಗೊಬ್ಬರ ಹಾಳಾಗದಂತೆ ಸುರಕ್ಷಿತ ಸಂಗ್ರಹಣೆ, ರೈತರ ಹಾಗೂ ಗೊಬ್ಬರ ವಿತರಕರ ಅನುಕೂಲಕ್ಕಾಗಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ರೈತರಿಗೆ ಸಮಯಕ್ಕೆ ಸರಿಯಾಗಿ ಗೊಬ್ಬರವನ್ನು ಸಮಾನವಾಗಿ ಹಂಚಿಕೆ ಮಾಡುವಂತೆ ಯುವ ಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ರವಿಕುಮಾರ್ ನಾಯ್ಕ ಸಚಿವ ವಿ.ಸೋಮಣ್ಣನವರಲ್ಲಿ ಒತ್ತಾಯಿಸಿದರು.
ಕಾರ್ಯದರ್ಶಿ ಓಬಣ್ಣ, ತಾಲ್ಲೂಕು ಅಧ್ಯಕ್ಷ ಸಚಿನ್, ಸಿದ್ದೇಶ್, ಅಣ್ಣಪ್ಪ, ಮಣಿಕಂಠ, ಮಂಜುನಾಥ್, ರೇಣುಕೇಶ್, ಪ್ರಕಾಶ್, ಲಕ್ಷ್ಮಿಪತಿ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.















