
ಬೆಂಗಳೂರು: ಬಿಜೆಪಿ ಸರ್ಕಾರದ ಈ ವರ್ಷದ ಬಜೆಟ್ ಅನ್ನು ಕಾಂಗ್ರೆಸ್ ನಾಯಕರು ವಿರೋಧಿಸಿದ್ದಾರೆ. ಕಿವಿ ಮೇಲೆ ಚಂಡು ಹೂವಿಟ್ಟುಕೊಂಡು ಬಂದು ವ್ಯಂಗ್ಯವಾಡಿದ್ದಾರೆ. ಈಗ ಬೀದಿಗಿಳಿದು ಬಿಜೆಪಿ ಸರ್ಕಾರದ ಬಜೆಟ್ ಅನ್ನು ವಿರೋಧಿಸಿದ್ದಾರೆ. ಬೆಂಗಳೂರು, ಮಂಗಳೂರು ಸೇರಿದಂತೆ ಹಲವೆಡೆ ಗೋಡೆಗಳ ಮೇಲೆ ಪೇಂಟಿಂಗ್ ಮಾಡುವ ಮೂಲಕ ಹೊಸ ಅಭಿಯಾನವನ್ನೇ ಶುರು ಮಾಡಿದ್ದಾರೆ.

ʻಕಿವಿ ಮೇಲೆ ಹೂವʼ ಎಂಬ ಪೇಂಟಿಂಗ್ ಮಾಡುವ ಮೂಲಕ ಬಜೆಟ್ ಅನ್ನು ವಿರೋದಿಸಿದ್ದಾರೆ. ಸದನದಲ್ಲಿಯೂ ನಿನ್ನೆ ಬಜೆಟ್ ಮುಗಿದ ಮೇಲೆ ಕಿವಿ ಮೇಲೆ ಚೆಂಡು ಹೂ ಇಟ್ಟುಕೊಂಡು ಬಂದು ವಿರೋಧಿಸಿದ್ದರು. ನಗರದ ಭಾಗಗಳಲ್ಲಿ ಬಿಜೆಪಿ ಸಾಧನೆಯ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. ಆ ಪೋಸ್ಟರ್ ಗಳ ಮೇಲೆ ʻಸಾಕಪ್ಪ ಸಾಕು ಕಿವಿ ಮೇಲೆ ಹೂʼ ಎಂದು ಬರೆದಿದ್ದಾರೆ.
ಕಳೆದ ಬಜೆಟ್ ನಲ್ಲಿ ಕೊಟ್ಟ ಬಜೆಟ್ ಅನ್ನು ಈಡೇರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಕಳೆದ ಬಜೆಟ್ 50% ಕೂಡ ದಾಟಿಲ್ಲ. ಈ ಬಜೆಟ್ ಕೇವಲ ಭಾಷಣದ ಬಜೆಟ್ ಆಗಿದೆ ಎಂದು ಕಾಂಗ್ರೆಸ್ ನಾಯಕರು ವ್ಯಂಗ್ಯವಾಡಿದ್ದಾರೆ.
GIPHY App Key not set. Please check settings