ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲಿ ಈಗ ರಿಯಲ್ ಆಟ ಶುರುವಾಗಿದೆ. ಬಿಗ್ ಬಾಸ್ ಪ್ರತಿದಿನ ಹೊಸ ಹೊಸ ಟಾಸ್ಕ್ ಗಳನ್ನ ನೀಡುತ್ತಿದೆ. ಆ ಟಾಸ್ಕ್ ಗಳನ್ನು ಆಡುವುದರ ಜೊತೆಗೆ, ಮನೆಯಲ್ಲಿ ಜಗಳ ಹೆಚ್ಚಾಗುತ್ತಿದೆ. ಆರಂಭದಲ್ಲಿ ಪ್ರತಾಪ್ ಟಾರ್ಗೆಟ್ ಆಗಿದ್ದರು. ಹೀಗಾಗಿ ಕುಂತ್ರು, ನಿಂತ್ರು ಅವರದ್ದೇ ಟಾಪಿಕ್ ಆಗಿತ್ತು. ಈಗ ಮಾತಿಗೆ ಮುಂಚೆ ಜಗಳ ಆಗ್ತಾ ಇರುವುದು, ವಿನಯ್ ಹಾಗೂ ಸಂಗೀತಾ ನಡುವೆ. ಆದರೆ ಜಗಳದ ನಡುವೆ ಸಿಕ್ಕಿರುವುದು ಕಾರ್ತೀಕ್.
ಹೌದು ಬಿಗ್ ಬಾಸ್ ಮನೆಯಲ್ಲಿ ಕಾರ್ತೀಕ್ ಮತ್ತು ಸಂಗೀತಾ ನಡುವೆ ಎಷ್ಟು ಒಳ್ಳೆಯ ಬಾಂಧವ್ಯ ಬೆರೆತಿದೆಯೋ, ಸಂಗೀತಾ, ವಿನಯ್ ನಡುವೆ ಅಷ್ಟೇ ಜಗಳ ಮುಂದುವರೆದಿದೆ. ಜೊತೆಗೆ ಕಾರ್ತೀಕ್ ಹಾಗೂ ವಿನಯ್ ನಡುವೆಯೂ ಒಳ್ಳೆ ಒಡನಾಟವಿದೆ. ಈಗ ಕಾರ್ತಿಕ್ ಗೆ ಯಾರ ಪರ ಮಾತನಾಡಬೇಕು ಎಂಬುದೇ ದೊಡ್ಡ ಗೊಂದಲದ ಗೂಡಾಗಿದೆ.
ಕಾರ್ತಿಕ್ ಬಳಿ ಬಂದ ವಿನಯ್, ಎಲ್ಲರೂ ಒಂದು ಕಡೆ ಇದ್ದರೆ ನೀನು ಮಾತ್ರ ಇನ್ನೊಂದು ಕಡೆ ಇದ್ದೀಯಾ. ಏನೋ ಮಾಡಿದ್ದೀನಿ ನಾನು ನಿನಗೆ. ನನ್ನ ಹತ್ತಿರ ಯಾಕೆ ಈ ರೀತಿ ಮಾಡುತ್ತಿದ್ದೀಯಾ ಎಂದೇ ಕೇಳಿದ್ದಾರೆ. ಅತ್ತ ಸಂಗೀತಾ ಕೂಡ ಕಾರ್ತೀಕ್ ಬಳಿ ಬಂದು, ನೀನು ಇಲ್ಲದೆ ಇದ್ದರು ನಾನು ನನ್ನ ಪರವಾಗಿ ನಿಂತುಕೊಳ್ಳುತ್ತೇನೆ. ನನ್ನ ಆಟ ನಾನೇ ಆಡುತ್ತೇನೆ ಎಂದಿದ್ದಾರೆ. ಇದು ಕಾರ್ತಿಕ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಗೆಳೆಯನ ಜೊತೆಗೆ ನಿಲ್ಲುವುದಾ, ಸಂಗೀತಾ ಪರ ವಹಿಸುವುದಾ ತಿಳಿಯದೆ ಕಂಗಲಾಗಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















