Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

SBI ಹೊಸ ಅಪ್‌ ಡೇಟ್: ಸಂಬಳ, ಪಿಂಚಣಿ ಪಡೆಯುವ ಗ್ರಾಹಕರು ಸೆಪ್ಟೆಂಬರ್ 25 ರೊಳಗೆ ಇದನ್ನು ಮಾಡಲೇಬೇಕು

---Advertisement---

ದೆಹಲಿ.ಸೆಪ್ಟೆಂಬರ್. 22: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಮಹತ್ವದ ಮುನ್ಸೂಚನೆಯೊಂದನ್ನು ನೀಡಿದ್ದು, ಬ್ಯಾಂಕ್ ಶಾಖೆಗೆ ತೆರಳಿ ಮಾಡಬೇಕಾದ ತುರ್ತು ಕೆಲಸಗಳನ್ನು ಸೆಪ್ಟೆಂಬರ್ 25ರ ಒಳಗಾಗಿ ಪೂರ್ಣಗೊಳಿಸುವಂತೆ ಸಲಹೆ ನೀಡಿದೆ.

ಸೆಪ್ಟೆಂಬರ್ 28 ರಿಂದ 30 ರವರೆಗೆ ದೇಶವ್ಯಾಪಿ ಮೂರು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಅದಕ್ಕೂ ಮುನ್ನ ಸೆಪ್ಟೆಂಬರ್ 26 ಮತ್ತು 27 ರಂದು ಕ್ರಮವಾಗಿ ನಾಲ್ಕನೇ ಶನಿವಾರ ಮತ್ತು ಭಾನುವಾರ ಇರುವುದರಿಂದ ಸತತ ಐದು ದಿನಗಳ ಕಾಲ ಬ್ಯಾಂಕ್ ಶಾಖೆಗಳ ನಿಯಮಿತ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

ವಿಶೇಷವಾಗಿ ಬ್ಯಾಂಕ್ ಮೂಲಕ ವೇತನ ಹಾಗೂ ಪಿಂಚಣಿ ಪಡೆಯುವ ಖಾತೆದಾರರು ಈ ದಿನಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಳ್ಳುವುದು ಉತ್ತಮ. ಚೆಕ್ ಜಮೆ ಮಾಡುವುದು, ನಗದು ವಹಿವಾಟು, ದಾಖಲೆಗಳ ಸಲ್ಲಿಕೆ, ಕೆವೈಸಿ ನವೀಕರಣ ಹಾಗೂ ವಿವಿಧ ಫಾರ್ಮ್‌ಗಳನ್ನು ಸಲ್ಲಿಸುವಂತಹ ಬ್ಯಾಂಕ್ ಸಿಬ್ಬಂದಿಯ ನೆರವು ಅಗತ್ಯವಿರುವ ಪ್ರಮುಖ ಕೆಲಸಗಳನ್ನು ಸೆಪ್ಟೆಂಬರ್ 25ರೊಳಗೆ ಮುಗಿಸಿಕೊಳ್ಳುವಂತೆ ಬ್ಯಾಂಕ್ ವಿನಂತಿಸಿದೆ.

ತಿಂಗಳಾಂತ್ಯ ಸಮೀಪಿಸುತ್ತಿರುವುದರಿಂದ ನಗದು ಅಗತ್ಯವಿರುವವರು ಕೊನೆಯ ಕ್ಷಣದ ಗೊಂದಲವನ್ನು ತಪ್ಪಿಸಲು ಮೊದಲೇ ಹಣವನ್ನು ಡ್ರಾ ಮಾಡಿಕೊಳ್ಳುವುದು ಸೂಕ್ತ. ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ ಸಹ ಎಟಿಎಂ, ಯುಪಿಐ, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯೋನೋ ಆ್ಯಪ್ ಹಾಗೂ ಗ್ರಾಹಕ ಸೇವಾ ಕೇಂದ್ರಗಳ (ಸಿಎಸ್‌ಪಿ) ಡಿಜಿಟಲ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದ್ದರಿಂದ ಶಾಖೆಗೆ ಭೇಟಿ ನೀಡುವ ಅಗತ್ಯವಿರುವ ಪ್ರಮುಖ ವ್ಯವಹಾರಗಳನ್ನು ಕೂಡಲೇ ಮುಗಿಸಿ, ದೈನಂದಿನ ವಹಿವಾಟುಗಳಿಗೆ ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಬಳಸಿಕೊಳ್ಳುವಂತೆ ಬ್ಯಾಂಕ್ ತಿಳಿಸಿದೆ.

Join WhatsApp

Join Now

Join Telegram

Join Now