Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಲವು ನಟಿಯರ ವಿರುದ್ಧ ರೇಣುಕಾಸ್ವಾಮಿ ತಂದೆ ಆಕ್ರೋಶ : ಯಾಕೆ ಗೊತ್ತಾ..?

---Advertisement---

ಸುದ್ದಿಒನ್, ಚಿತ್ರದುರ್ಗ, ಜುಲೈ. 03 : ಪವಿತ್ರಾಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸುತ್ತಿದ್ದ ಎಂದು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಎಚ್ಚರಿಕೆ ಕೊಡಲು ಹೋಗಿ ಆ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಕೊಲೆ ಆರೋಪದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಜೈಲಿನಲ್ಲಿದ್ದಾರೆ. ದರ್ಶನ್ ಜೈಲಿಗೆ ಹೋದ ಮೇಲೆ ಅವರೇ ಮೇಲೆ ಹೆಚ್ಚು ಫೋಕಸ್ ಆಗಿದ್ದು. ರೇಣುಕಾಸ್ವಾಮಿ ಮಾಡಿದ ಮೆಸೇಜ್ ಮರೆತು ಹೋಗಿತ್ತು. ಬಳಿಕ ಒಬ್ಬೊಬ್ಬರಾಗಿಯೇ ನಟಿಯರು ಈ ವಿಚಾರದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ನಮಗೂ ಅದೇ ಅಕೌಂಟ್ ನಿಂದ ಮೆಸೇಜ್ ಬಂದಿತ್ತು ಎನ್ನುತ್ತಿದ್ದಾರೆ. ಇದರ ಬಗ್ಗೆ ರೇಣುಕಾಸ್ವಾಮಿ ತಂದೆ ಆಕ್ರೋಶ ಹೊರ ಹಾಕಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಾ’ ಮೆಸೇಜ್ ಹಾಕಿದ್ದಾರೆ ಹಾಕಿದ್ದಾರೆ ಅಂತ ಹೇಳುವವರು ಈ ಮೊದಲೇ ಯಾಕೆ ಪೊಲೀಸರಿಗೆ ದೂರು ನೀಡಲಿಲ್ಲ. ಆಯ್ತು ಹಾಕಿದ್ದಾರೆ ಎಂದರು ಕೂಡ ಈ ರೀತಿ ಚಿತ್ರ ಹಿಂಸೆ ಕೊಡುವುದು ಸರಿಯೇ. ಅದಕ್ಕೆ ಉತ್ತರ ಕೊಡುವುದಕ್ಕೆ ಬೇರೆ ರೀತಿ ಕಾನೂನುಗಳು ಇತ್ತು ಅಲ್ವಾ. ಪೊಲೀಸ್ ದೂರು ಕೊಟ್ಟಿದ್ದರೆ ಅವರೇ ನೋಡಿಕೊಳ್ಳುತ್ತಿದ್ದರು. ಆದರೆ ನೀವೇ ಕಾನೂನನ್ನು ಕೈಗೆ ತೆಗೆದುಕೊಂಡು, ಈ ರೀತಿ ಚಿತ್ರ ಹಿಂಸೆ ಕೊಟ್ಟು ಸಾಯಿಸಿ, ಒಂದು ಹೆಣ್ಣಿನ ಜೀವನ ಹಾಳು ಮಾಡುವಂತದ್ದು ಏನಿತ್ತು.

ಆ ರೀತಿ ಮೆಸೇಜ್ ಹಾಕಿದ್ದಾನೆ ಈ ರೀತಿ ಮೆಸೇಜ್ ಹಾಕಿದ್ದಾನೆ ಅಂತ ಈಗ ಎಲ್ಲಾ ಹೇಳ್ತಾ ಇದಾರೆ ಇದರ ಬಗ್ಗೆ ನಮಗೇನು ಗೊತ್ತಿಲ್ಲ. ಈಗ ನಮ್ಮ ಮನೆ, ಮನೆತನ ಪೂರ್ತಿ ಹಾಳಾಗಿ ಹೋಗಿದೆ. ಇದ್ದ ಮಗ ಇನ್ನಿಲ್ಲ. ಆಸರೆ ಯಾರು ಇಲ್ಲ. ವಯಸ್ಸಾದ ತಂದೆ ತಾಯಿ ಇದ್ದೀವಿ. ಅಜ್ಜಿ ಇದ್ದಾರೆ. ನೋಡಿಕೊಳ್ಳುವವರು ಯಾರು ? ಈಗ ನಿಮ್ಮ ವಯಸ್ಸಿನ ಮಗಳೇ ನಮ್ಮ‌ಮನೆಯಲ್ಲಿದ್ದಾಳೆ. ಈಗ ಗರ್ಭಿಣಿ ಬೇರೆ. ಆಕೆಯನ್ನು ನೋಡಿಕೊಳ್ಳುವುದು ಯಾರು. ಚಿತ್ರನಟಿಯರು ಈ ಕಡೆ ಇದ್ದು ಸ್ವಲ್ಪ ಯೋಚನೆ ಮಾಡಿ ಹೇಳಿ’ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment