ಐಚಿ-ನಗೋಯಾ: ಜಪಾನ್ನಲ್ಲಿ ನಡೆಯುತ್ತಿರುವ 2026ರ ಐಚಿ-ನಗೋಯಾ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಶೂಟರ್ಗಳು ಪದಕ ಬೇಟೆ ಮುಂದುವರಿಸಿದ್ದಾರೆ.
ಪುರುಷರ 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲಿ ಭಾರತದ ರುದ್ರಾಂಕ್ಷ್ ಬಾಲಾಸಾಹೇಬ್ ಪಾಟೀಲ್, ಪಾರ್ಥ್ ರಾಕೇಶ್ ಮಾನೆ ಮತ್ತು ಹಿಮಾಂಶು ಧಿಲ್ಲೋನ್ ಅವರನ್ನೊಳಗೊಂಡ ತ್ರಿವಳಿ ತಂಡ ಅದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದೆ.
Aichi-Nagoya Asian Games 2026: Rudrankksh Balasaheb Patil, Parth Rakesh Mane and Himanshu Dhillon win a silver medal in the Men’s 10m Air Rifle Team event.
This is the third medal for India at the Asian Games 2026. pic.twitter.com/goRnavv02p
— ANI (@ANI) September 21, 2026
ಈ ಗೆಲುವಿನೊಂದಿಗೆ 2026ರ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಪದಕಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ನಿಖರ ಗುರಿಯೊಂದಿಗೆ ಪೈಪೋಟಿ ನೀಡಿದ ಭಾರತೀಯ ಶೂಟರ್ಗಳು ಜಂಟಿ ಪ್ರದರ್ಶನದ ಮೂಲಕ ದೇಶಕ್ಕೆ ಗೌರವ ತಂದಿತ್ತಿದ್ದಾರೆ.











