Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಕ್ಟೋಬರ್ 4 ರಂದು ಮಾಜಿ ಸೈನಿಕರ ಮೇಳ ಹಾಗೂ ಉದ್ಯೋಗ ಮೇಳ ಆಯೋಜನೆ

---Advertisement---

ಸುದ್ದಿಒನ್.ಸೆಪ್ಟೆಂಬರ್. 22 : ಮರಾಠಾ ಲೈಟ್ ಇನ್‌ಫಂಟ್ರಿ ರೆಜಿಮೆಂಟ್ ಸೆಂಟರ್, ಬೆಳಗಾವಿಯ ಶಿವಾಜಿ ಸ್ಟೇಡಿಯಂನಲ್ಲಿ ದಕ್ಷಿಣ ಭಾರತ ಏರಿಯಾ ವತಿಯಿಂದ ಅಕ್ಟೋಬರ್ 04 ರಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ‘ಮಾಜಿ ಸೈನಿಕರ ಮೇಳ’ ಹಾಗೂ ‘ಉದ್ಯೋಗ ಮೇಳ’ವನ್ನು ಬೃಹತ್ ಮಟ್ಟದಲ್ಲಿ ಆಯೋಜಿಸಲಾಗಿದೆ.

ಕುಂದುಕೊರತೆ ನಿವಾರಣೆ ಮತ್ತು ಆರೋಗ್ಯ ತಪಾಸಣೆ

ಈ ಮೇಳದಲ್ಲಿ ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ನಿವಾರಿಸಲು ಸಂಬAಧಪಟ್ಟ ಸಕ್ಷಮ ಪ್ರಾಧಿಕಾರಗಳ ಕೌಂಟರ್‌ಗಳನ್ನು ಸ್ಥಾಪಿಸಲಾಗುವುದು. ಇದರ ಜೊತೆಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಆರೋಗ್ಯ ಸೇವೆಗಳು ದೊರೆಯಲಿವೆ.

ಸ್ಪರ್ಶ್, ಇಸಿಹೆಚ್‌ಎಸ್, ಆಧಾರ್ ಕಾರ್ಡ್ ನವೀಕರಣ ಹಾಗೂ ಬ್ಯಾಂಕಿAಗ್‌ಗೆ ಸಂಬAಧಿಸಿದ ಸೇವೆಗಳಿಗೆ ಪ್ರತ್ಯೇಕ ಕೌಂಟರ್‌ಗಳು ಲಭ್ಯವಿರುತ್ತವೆ.

ಉದ್ಯೋಗ ಮೇಳ

ಮಾಜಿ ಸೈನಿಕರು, ವೀರ ನಾರಿಯರು ಮತ್ತು ಅವರ ಅವಲಂಬಿತರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಬಹುರಾಷ್ಟಿçÃಯ ಕಂಪನಿಗಳು ಭಾಗವಹಿಸುತ್ತಿದ್ದು, ನೇರ ಸಂದರ್ಶನಗಳನ್ನು ನಡೆಸಲಿವೆ.

ನೋಂದಣಿ ಪ್ರಕ್ರಿಯೆ

ಆಸಕ್ತರು https://forms.gle/nTYugwJoYc3mPgMk6 ಲಿಂಕ್ ಬಳಸಿ ಮುಂಚಿತವಾಗಿಯೇ ಇ-ನೋಂದಣಿ ಮಾಡಿಕೊಳ್ಳಲು ಹಾಗೂ ತಮ್ಮ ಬಯೋಡೇಟಾವನ್ನು ಸಲ್ಲಿಸಲು ಕೋರಲಾಗಿದೆ.

ಭಾಗವಹಿಸುವ ಬಹುರಾಷ್ಟ್ರೀಯ ಕಂಪನಿಗಳ ವಿವರಗಳು ಮತ್ತು ಲಭ್ಯವಿರುವ ಉದ್ಯೋಗಾವಕಾಶಗಳ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಎಂಎಲ್‌ಐರ‍್ಸಿ ಯ ಮುಖ್ಯ ಅಭಿಲೇಖಾಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಅರ್ಹ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಧಾರವಾಡ (ದೂ: 0836-2440176) ಅಥವಾ ತಮ್ಮ ಹತ್ತಿರದ ಅಭಿವೃದ್ಧಿ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Join WhatsApp

Join Now

Join Telegram

Join Now