ಬೆಂಗಳೂರು: ನಿನ್ನೆಯಿಂದ ರಾಜ್ಯಾದ್ಯಂತ ಮಳೆರಾಯನ ದರ್ಶನವಾಗಿದೆ. ಎಲ್ಲೆಲ್ಲೂ ಉತ್ತಮ ಮಳೆ ಬಂದಿದೆ. ಇನ್ನು ಮೂರು ದಿನಗಳ ಮಳೆಯಾಗಲಿದೆ ಎಂಬ ಮಾಹಿತಿಯನ್ನು ಹವಮಾನ ಇಲಾಖೆ ನೀಡಿದೆ. ಹೀಗಾಗಿ ಇದು ಕ್ರಿಕೆಟ್ ಪ್ರಿಯರಿಗೆ ಮ್ಯಾಚ್ ಬಗ್ಗೆ ಚಿಂತೆ ಹೆಚ್ಚಿಸಿದೆ.
ಇಂದು ಗುಜರಾತ್ ಟೈಮ್ಸ್ ಎದುರು ಆರ್ಸಿಬಿ ಮ್ಯಾಚ್ ನಡೆಯಬೇಕಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್ಸಿಬಿ ತಂಡ ಇತ್ತಿಚೆಗೆ ಎರಡು ಮ್ಯಾಚ್ ಗಳಲ್ಲಿ ಭರ್ಜರಿಯಾಗಿ ಗೆಲುವು ಕಂಡಿತ್ತು. ಹತ್ತು ಪಂದ್ಯಗಳಲ್ಲಿ ಆರು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಹತ್ತನೇ ಸ್ಥಾನ ಪಡೆದಿತ್ತು. ಸದ್ಯ ನೆಟ್ ರನ್ ರೇಟ್ ಕೂಡ ಸುಧಾರಿಸಿದೆ. ಆದರೆ ಈಗಿರುವಾಗಲೇ ಪಂದ್ಯಗಳು ಕ್ಯಾನ್ಸಲ್ ಆಗುವ ಸಾಧ್ಯತೆ ಆರ್ಸಿಬಿ ಫ್ಯಾನ್ಸ್ ಗೆ ಬೇಸರ ತರಿಸಿದೆ.
ಈಗಂತೂ ವಿರಾಟ್, ದಿನೇಶ್ ಕಾರ್ತಿಕ್, ಫಾಫ್, ರಜತ್ ಪಾಟಿದಾರ್, ವಿಲ್ ಜಾಕ್ಸ್ ಎಲ್ಲರು ತಮ್ಮ ತಮ್ಮ ಫಾರ್ಮ್ ಗೆ ಮರಳಿದ್ದಾರೆ ಈಗ ಗುಜರಾತ್ ಟೈಟನ್ಸ್ ನ ಕಡೆಗಣಿಸುವಂತೆ ಇಲ್ಲ. ಆದರೆ ಇಂದು ಕೂಡ ಬೆಂಗಳೂರಿನಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ರಾತ್ರಿ ಮಳೆ ಬರುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚನೆ ಕೊಟ್ಟಿದೆ. ವಾತಾವರಣ ಕೂಡ ಕೊಂಚ ಕೂಲಾಗಿದೆ. ಹೀಗಾಗಿ ಪಂದ್ಯ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆರಂಭದಲ್ಲಿ ಸತತ ಸೋಲು ಕಾಣುತ್ತಿದ್ದರು, ಆರ್ಸಿಬಿ ಮುಂದೆ ಗೆದ್ದೆ ಗೆಲ್ಲುತ್ತದೆ ಎಂಬ ದಿಡ್ಡ ಕನಸು ಅಭಿಮಾನಿಗಳದ್ದು. ಅದರಲ್ಲೂ ಇತ್ತಿಚೆಗೆ ಎರಡು ಮ್ಯಾಚ್ ಗೆದ್ದ ಮೇಲಂತು ಕಪ್ ಗೆದ್ದಷ್ಟೇ ಖುಷಿಯಾಗಿದ್ದಾರೆ. ಹೀಗಿರುವಾಗ ಮಳೆಯಿಂದಾಗಿಪಂದ್ಯ ರದ್ದಾದರೆ ಅಭಿಮಾನಿಗಳ ಎದೆ ಹೊಡದೆ ಹೋಗುತ್ತದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










