ಬೆಂಗಳೂರು: ರಾಜ್ಯದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಸೆಪ್ಟೆಂಬರ್ 3ರವರೆಗೂ ಮಳೆಯ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಹಲವು ಜಿಲ್ಲೆಗಳಿಗೆ ಯೆಲ್ಲೋ ಹಾಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಹಾಗಾದ್ರೆ ಎಲ್ಲೆಲ್ಲಿ ಆರೇಂಜ್ ಅಲರ್ಟ್, ಎಲ್ಲೆಲ್ಲಿ ರೆಡ್ ಅಲರ್ಟ್ ಇದೆ ಎಂಬ ಮಾಹಿತಿ ಇಲ್ಲಿದೆ.
ಇಂದು ಮತ್ತು ನಾಳೆ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ನೀಡಿದ್ದು, ಉತ್ತರ ಕನ್ನಡ ಜಿಲ್ಲೆಗೆ ಆಗಸ್ಟ್ 30ರವರೆಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 3ರವರೆಗೂ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಕಳೆದ ಬಾರಿ ಆಗಸ್ಟ್ ನಲ್ಲಿ 50% ಅಷ್ಟೆ ಮಳೆಯಾಗಲಿದೆ ಎಂಬ ವರದಿಯನ್ನ ಹವಮಾನ ಇಲಾಖೆ ನೀಡಿತ್ತು. ಇದನ್ನ ಕೇಳಿದ ರೈತಾಪಿ ವರ್ಗ ತಲೆ ಮೇಲೆ ಕೈಹೊತ್ತಿ ಕುಳಿತಿತ್ತು. ಯಾಕಂದ್ರೆ ಜೂನ್ ಜುಲೈ ತಿಂಗಳಿನಲ್ಲಿಯೇ ಮಳೆ ಬೆಳೆಯ ಬೀಜಗಳನ್ನ ಬಿತ್ತನೆ ಮಾಡುವುದು. ಹೀಗಿರುವಾಗ ಇದೇ ಸಮಯದಲ್ಲಿ ಮಳೆ ಕೈಕೊಟ್ಟರೆ ಏನು ಮಾಡಬೇಕು ಎಂಬ ಚಿಂತೆ ಅವರಲ್ಲಿ ಕಾಡಿತ್ತು. ಸದ್ಯ ಈಗ ಸೆಪ್ಟೆಂಬರ್ ತನಕವೂ ಮಳೆ ಬರುವುದರ ಬಗ್ಗೆ ಹವಮಾನ ಇಲಾಖೆ ಸೂಚನೆಯನ್ನ ನೀಡಿದೆ. ಸದ್ಯ ಭೂಮಿಗೆ ಚೆಲ್ಲಿರುವ ಬೀಜ ಉತ್ತಮವಾಗಿ ಬೆಳೆಯುವುದಕ್ಕೆ ಮಳೆಯ ಅಗತ್ಯವಿದೆ. ಇನ್ನು ಜಲಾಶಯಗಳಿಗೂ ಒಳ ಹರಿವು ಜಾಸ್ತಿಯಾಗುತ್ತಿದೆ. ಮಳೆ ವಾಡಿಕೆಯಂತೆ ಸರಿಯಾದ ಸಮಯಕ್ಕೆ ಬಂದರೆ ಎಲ್ಲಾ ಜಲಾಶಯಗಳು ಭರ್ತಿಯಾಗುವ ಸಾಧ್ಯತೆಯೂ ಇದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










