
ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಇದೀಗ ಬಿಜೆಪಿ ನಾಯಕರು ವರ್ಸಸ್ ರಾಹುಲ್ ಗಾಂಧಿ ವಿಚಾರ ಜೋರಾಗಿದೆ. ಬಿಜೆಪಿ ಸಚಿವರುಗಳು ರಾಹುಲ್ ಗಾಂಧಿ ವಿರುದ್ದ ಆರೋಪಗಳನ್ನು ಮಾಡುತ್ತಿದ್ದು, ಈಗ ಕಾಂಗ್ರೆಸ್ ನಾಯಕರು ಕೂಡ ರೊಚ್ಚಿಗೆದ್ದಿದ್ದಾರೆ.

ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು, ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧವೇ ಹಕ್ಕು ಚ್ಯುಉತಿ ಮಂಡಿಸಲು ನಿರ್ಧರಿಸಿದ್ದಾರೆ. ರಾಜ್ಯಸಭಾ ಸದಸ್ಯ ಕೆಸಿ ವೇಣುಗೋಪಾಲ್ ಅವರು, ರಾಜ್ಯಸಭಾ ಅಧ್ಯಕ್ಷರಿಗೆ ಮೋಷನ್ ಮೂವ್ ಮಾಡಿದ್ದಾರೆ. ಹಕ್ಕು ಚ್ಯುತ ಮಂಡಿಸಲು ಅವಕಾಶ ನೀಡಬೇಕೆಂದು ಕೇಳಿದ್ದಾರೆ.
ಪ್ರಧಾನಿ ಮೋದಿಯವರು ನಮ್ಮ ನಾಯಕ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ನಿಂದಿಸಿ ಹಕ್ಕು ಚ್ಯುತಿ ಮಾಡಿದ್ದಾರೆ. ನೆಹರು ಸರ್ ನೇಮ್ ಅನ್ನು ನೆಹರು ಪರಿವಾರದವರು ಯಾಕೆ ಇಟ್ಟುಕೊಂಡಿಲ್ಲ..? ಬದಲಿಗೆ ಗಾಂಧಿ ನೇಮನ್ನು ಯಾಕೆ ಇಟ್ಟುಕೊಂಡಿದ್ದಾರೆ ಎಂದು ಪ್ರಶ್ನಿಸಿ ನಮ್ಮ ನಾಯಕರಿಗೆ ಅವಮಾನ ಮಾಡಿದ್ದಾರೆ ಎಂದು ಮನವಿಯಲ್ಲಿ ಕಳುಹಿಸಿರುವ ಪತ್ರದಲ್ಲಿ ಸೇರಿಸಿದ್ದಾರೆ.
GIPHY App Key not set. Please check settings