Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭರಂಪುರದಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ: ನೀಲಿ ಬಾವುಟಗಳ ನಡುವೆ ಭೀಮರಾಯನಿಗೆ ಭವ್ಯ ಗೌರವ

---Advertisement---

ವರದಿ ಮತ್ತು ಫೋಟೋ ಕೃಪೆ :
ಕೋಡಿಹಳ್ಳಿ ಟಿ.ಶಿವಮೂರ್ತಿ
ಚಳ್ಳಕೆರೆ,  ಮೊ : 97427 56304

ಸುದ್ದಿಒನ್, ಹಿರಿಯೂರು, ಏಪ್ರಿಲ್. 27 : ತಾಲ್ಲೂಕಿನ ಐಮಂಗಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭರಂಪುರ ಗ್ರಾಮದ ಎ ಕೆ ಕಾಲೋನಿಯಲ್ಲಿ ಜ್ಞಾನ ಸಂಕೇತ ಬಹುಜನ ನಾಯಕ ಜಯಭೀಮಾ ರವರ 135 ನೆಯ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಗ್ರಾಮದ ಮುಖ್ಯ ವೃತ್ತಗಳಲ್ಲಿ ನೀಲಿ ಬಾವುಟಗಳ ಹಾರಾಟ ಯುವಕರ ಉತ್ಸಾಹ ಹೆಚ್ಚು ಮಾಡಿತು. ಪುಷ್ಪಾಲಂಕಾರ ಗಳೊಂದಿಗೆ ರಥವೇರಿದ ಮಹಾನಾಯಕನಿಗೆ ಜಯಕಾರದ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು ರಾಷ್ಟ್ರ ಸಂವಿಧಾನಕ್ಕೆ ಶಿಲ್ಪಿಯಾದ ಸಮಾನತೆ ಹರಿಕಾರ ಬರೀ ಲೇಖನಿಯ ಮೂಲಕವೇ ಭೀಮ ಘರ್ಜನೆ ಮಾಡಿ ವಿಶ್ವವೆ ಮೆಚ್ಚಿ ಪೂಜಿಸುವ ಮಹಾನಾಯಕನ್ನನ್ನು ಎಲ್ಲಾ ಮಹಿಳಾ ಮಣಿ ಗಳು ಪೂಜಿಸಿ ಡಿ.ಜೆ ಶಬ್ದಕ್ಕೆ ಹೆಜ್ಜೆ ಹಾಕಿ ಎಲ್ಲರ ಕಣ್ಮನ ಸೆಳೆದರು.

ಯುವಕರ ಕೇಕೆ ಚಪ್ಪಾಳೆ ಘೋಷಣೆಗಳು ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು,ಎಲ್ಲಾರೂ ಭಕ್ತಿಪೂರ್ವಕವಾಗಿ ಅನ್ನ ಸಂತರ್ಪಣೆಯನ್ನು ಸ್ವೀಕರಿಸಿದರು. ಸ್ನೇಹಜೀವಿ ಗೆಳೆಯರ ಬಳಗ ಹಾಗೂ ಎಲ್ಲಾ ಭೀಮ ಬಂಧುಗಳು ಅಚ್ಚುಕಟ್ಟಾಗಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಿ ಭೀಮರಾಯನ ಭಕ್ತಿಗೆ ಪಾತ್ರರಾದರು.

ಈ ಕಾರ್ಯಕ್ರಮದಲ್ಲಿ ಹಟ್ಟಿಯ ಎಲ್ಲಾ ಹಿರಿಯ ಯಜಮಾನರು , ನಿವೃತ್ತ ಸೈನಿಕರು, ನೌಕರರು. ಹಾಲಿ ಮಾಜಿ ಜನ ಪ್ರತಿನಿಧಿಗಳು, ಅಂಬೇಡ್ಕರ್ ಯುವಕ ಸಂಘದ ಎಲ್ಲಾ ಪದಾಧಿಕಾರಿಗಳು, ಯುವಕ ಮಿತ್ರರು ಪುಟಾಣಿ ಭೀಮ ಸೇನಾನಿಗಳು ಮಹಿಳಾ ಮಣಿಗಳು ಎಲ್ಲಾ ಸಮಸ್ತ ಭೀಮ ಬಂಧುಗಳು ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತರಾಗಿ ಖುದ್ದು ಹಾಜರಿದ್ದು ಕಾರ್ಯಕ್ರಮದ ಯಶಸ್ವಿಗೆ ಸರ್ವರೂ ಪಾತ್ರರಾದರು,ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...