ದೆಹಲಿ: ಸಿಎಂ ಬದಲಾವಣೆಯ ಚರ್ಚೆ ಅಂತು ಈಗ ಇನ್ನಷ್ಟು ಜಾಸ್ತಿಯಾಗಿದೆ. ಡಿಕೆ ಬ್ರದರ್ಸ್ ಅದಕ್ಕಾಗಿ ಪಟ್ಟು ಹಿಡಿದು ಬೆಂಗಳೂರು ಟು ದೆಹಲಿ ಓಡಾಟ ನಡೆಸ್ತಾ ಇದ್ದಾರೆ. ಇದೀಗ ದೆಹಲಿಗೆ ಭೇಟಿ ನೀಡಿರುವ ಸತೀಶ್ ಜಾರಕಿಹೊಳಿ ಈ ಬಗ್ಗೆ ಮಾತನ್ನಾಡಿದ್ದಾರೆ.
ವರಿಷ್ಠರನ್ನ ಭೇಟಿ ಮಾಡಿದ ಬಳಿಕ, ದೆಹಲಿಗೆ ಬಂದಾಗ ಎಲ್ಲರನ್ನು ಭೇಟಿ ಮಾಡಬೇಕು. ಅದು ವಾಡಿಕೆ. ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಹ ಭೇಟಿಯಾಗ್ತೇನೆ. ಸಂಪುಟ ಪುನರ್ ರಚನೆ ವಿಚಾರ, ಸಿಎಂ ಬದಲಾವಣೆ ವಿಚಾರವೆಲ್ಲಾ ಹೈಕಮಾಂಡ್ ಮಾಡಬೇಕು. ಹೈಕಮಾಂಡ್ ಗಮನಕ್ಕೆ ಸುಮಾರು ಸಲ ತಂದಿದ್ದೇವೆ. ಅಂತಿಮವಾಗಿ ಅವರು ನಿರ್ಧಾರ ಮಾಡಬೇಕು. ನಿನ್ನೆ ಕೂಡ ಹೇಳಿದ್ದೇವೆ. ಇದು ಬೇಗ ಇತ್ಯರ್ಥ ಆಗಬೇಕು ಅಂತ. ಗೊಂದಲ ನಿಲ್ಲಬೇಕು ಅಂತ. ಮತ್ತೆ ಅದನ್ನೇ ಹೇಳುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.
ಬೆಂಗಳೂರಲ್ಲಿ ನಿರ್ಧಾರ ಮಾಡುವಂತದ್ದು ಅಲ್ಲ. ದೆಹಲಿಯಲ್ಲಿಯೇ ನಿರ್ಧಾರ ಮಾಡಬೇಕು. ಬಹುಶಃ ಈ ಚುನಾವಣೆಯ ಫಲಿತಾಂಶ ಬಂದ ನಂತರ ಮಾಡಬಹುದು. ಪರಿಹಾರ ಅಂತು ಹೇಳಲೇಬೇಕು. ಮಂತ್ರಿಗಳದ್ದು ಶಾಸಕರದ್ದು ಗೊಂದಲಗಳು ಮೊದಲು ಬಗೆಹರಿಯಬೇಕು ಎಂಬ ಮಾತನ್ನ ಹೇಳಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















