Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಾವೇರಿಗಾಗಿ ಪಿಎಂ ಮೋದಿಗೆ ರಕ್ತದಲ್ಲಿ ಪತ್ರ ಬರೆದ ನೆನಪಿರಲಿ ಪ್ರೇಮ್

---Advertisement---

ಕಾವೇರಿ ನೀರು ಉಳಿಸಿಕೊಳ್ಳುವುದಕ್ಕೆ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಮಂಡ್ಯ ಭಾಗದಲ್ಲಂತು ರೈತರ ಹೋರಾಟ ಇನ್ನು ನಿಂತಿಲ್ಲ. ರಾಜ್ಯದಲ್ಲಿ ಮಳೆ ಇಲ್ಲದೆ ಕಾವೇರಿ ಕೊಳ್ಳದಲ್ಲಿ ನೀರು ಖಾಲಿಯಾಗುತ್ತಾ ಇದೆ. ಇದರ ಮಧ್ಯೆ ಪ್ರತಿ ಸಲ ತಮಿಳುನಾಡಿನ ಪರವೇ ತೀರ್ಪು ಬರುತ್ತಿದೆ.

ಕಾವೇರಿಗಾಗಿ ಮೊನ್ನೆ (ಶುಕ್ರವಾರ) ನಡೆದ ಕರ್ನಾಟಕ ಬಂದ್ ನಲ್ಲೂ ಸ್ಯಾಂಡಲ್ ವುಡ್ ನಟ-ನಟಿಯರು ಕೂಡ ಕೈಜೋಡಿಸಿದ್ದರು. ಈ ವೇಳೆ ಶಿವಣ್ಣ ಕೂಡ ಕಾವೇರಿ ವಿವಾದ ಬಗೆಹರಿಸಬೇಕಾದವರು ಯಾರು ಎಂದು ಹೇಳಿದರು. ಸುಮ್ಮನೆ ಬಂದು, ಕೂತು ಹೋದಾಗ ಏನು ಪ್ರಯೋಜನವಾಗುವುದಿಲ್ಲ. ಎರಡು ರಾಜ್ಯದಲ್ಲಿ ಜನಗಳು ಆರಿಸಿದವರು ಇದ್ದಾರೆ. ಕುಳಿತು ಬಗೆಹರಿಸಿ ಎಂದೇ ಸಲಹೆ ನೀಡಿದ್ದರು.

ಇದೀಗ ಲವ್ಲಿ ಸ್ಟಾರ್ ಪ್ರೇಮ್ ಪ್ರಧಾನಿ ಮೋದಿಗೆ ಪತ್ರದ ಮೂಲಕ ಕಾವೇರಿ ನಮ್ಮದು ಎಂಬ ಮನವರಿಕೆ ಮಾಡುವುದಕ್ಕೆ ಹೊರಟಿದ್ದಾರೆ. ನಟ ಪ್ರೇಮ್ ತಮ್ಮ ರಕ್ತದ ಮೂಲಕ ಪತ್ರ ಬರೆದಿದ್ದಾರೆ. ಕಾವೇರಿ ನಮ್ಮದು. ಕಾವೇರಿ ವಿಚಾರಕ್ಕೆ ನಮಗೆ ನ್ಯಾಯ ಕೊಡಿಸಿ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment