Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿರೋಧ ಪಕ್ಷದ ಆರೋಪಗಳಿಗೆ ಜನರಿಂದ ಸ್ಪಷ್ಟ ಉತ್ತರ ಸಿಕ್ಕಿದೆ : ಡಿಕೆ ಸುರೇಶ್

---Advertisement---

ಚನ್ನಪಟ್ಟಣ: ಇಂದು ಚನ್ನಪಟ್ಟಣ ಕ್ಷೇತ್ರದ ಫಲಿತಾಂಶ ಆಲ್ಮೋಸ್ಟ್ ಸಿಪಿ ಯೋಗೀಶ್ವರ್ ಅವರಿಗೆ ಗೆಲುವು ಖಚಿತವಾಗಿದೆ. ಭಾರೀ ಅಂತರದಿಂದ ಮುನ್ನಡೆ ಸಾಧಿಸಿದ್ದು, ಇನ್ನು ಕೆಲವೇ ಕೆಲವು ಸುತ್ತುಗಳು ಬಾಕಿ ಉಳಿದಿವೆ. ಈಗಾಗಲೇ ಚನ್ನಪಟ್ಟಣದಲ್ಲಿ ಗೆಲುವಿನ ಸಂಭ್ರಮಾಚರಣೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಶುರಿ ಮಾಡಿದ್ದಾರೆ. ಗೆಲುವಿನ ಸನಿಹಕ್ಕೆ ಕಾಂಗ್ರೆಸ್ ಬಂದಿದ್ದು, ಮಾಜಿ ಸಂಸದ ಡಿಕೆ ಸುರೇಶ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ವಿರೋಧ ಪಕ್ಷಗಳಿಗೆ ಉತ್ತರ ನೀಡಿದ್ದಾರೆ.

ಡಿಕೆ ಸುರೇಶ್ ಮಾತನಾಡಿ, ಇವತ್ತು ರಾಜ್ಯದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವು ಆಗಿದೆ. ವಿರೋಧ ಪಕ್ಷಗಳು ಗ್ಯಾರಂಟಿಗಳ ವಿರುದ್ಧ ಪ್ರಹಾರ ಹಾಗೂ ನಮ್ಮ ಮುಖ್ಯಮಂತ್ರಿಗಳ ವಿರುದ್ಧ ಆರೋಪ ಮಾಡುದ್ದಕ್ಕೆ ಮೂರು ಭಾಗದಿಂದ ನಮ್ಮ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಕೊಡುವ ಮೂಲಕ ವಿರೋಧ ಪಕ್ಷಕ್ಕೆ, ನೀವೂ ಮಾಡುತ್ತಿರುವ ಆರೋಪಗಳು ಸರಿಯಿಲ್ಲ ಎಂಬುದನ್ನು ತೀರ್ಮಾನ ಕೊಟ್ಟಿದ್ದಾರೆ.

ಅದರಲ್ಲೂ ವಿಶೇಷವಾಗಿ ಎನ್ಡಿಎ ಹಾಗೂ ಚನ್ನಪಟ್ಟಣ. ಇಲ್ಲಿನ ಜನ ಸ್ಪಷ್ಟವಾದ ಉತ್ತರವನ್ನು ಎನ್ಡಿಎ ಹಾಗೂ ಕುಮಾರಸ್ವಾಮಿ ಅವರ ಪುತ್ರನಿಗೂ ಕೊಟ್ಟಿದ್ದಾರೆ. ಆರೋಪಗಳಿಗೆ ನೀವೂ ಕಡಿವಾಣ ಹಾಕಬೇಕು, ಅಭಿವೃದ್ಧಿ ಕಡೆಗೆ ಗಮನ ಕೊಡಬೇಕು ಎಂಬ ಸ್ಪಷ್ಟ ಉತ್ತರ ನೀಡಿದ್ದಾರೆ. ಇನ್ಮೇಲಾದ್ರೂ ನಮ್ಮ ಪಕ್ಷದ ಮೇಲೆ, ಸಿಎಂ ವಿರುದ್ಧ ಆರೋಪಗಳನ್ನು ಬಿಡಬೇಕು, ಅಭಿವೃದ್ಧಿ ಕಡೆಗೆ ಗಮನ ಕೊಡಬೇಕು ಎಂಬುದು ಅರ್ಥವಾಗಿರುತ್ತದೆ. ಚುನಾವಣೆಯ ಸಮಯದಲ್ಲಿ ಜಮೀರ್ ಹೇಳಿಕೆಯಿಂದ ರಾಜಕೀಯ‌ ಮಾಡುವುದಕ್ಕೆ ಪ್ರಯತ್ನ ಪಟ್ಟರು. ಆದರೆ ಅದನ್ನು ಜನ ಒಪ್ಪಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment