Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಿ ಬಾಸ್ ಸಫಾರಿಗೆ ಭೇಟಿ ಕೊಟ್ಟ ಪವಿತ್ರಾ ಗೌಡ..!

---Advertisement---

ಪವಿತ್ರಾ ಗೌಡ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಎಲ್ಲಾ ವಿಚಾರಗಳು ತಣ್ಣಗಾಗುತ್ತಿವೆ, ಲೈಫ್ ಅವರವರದ್ದು ಅವರ ಪಾಡಿಗೆ ಹೋಗ್ತಾ ಇದೆ ಎನ್ನವಾಗಲೇ ಎಲ್ಲರು ತಿರುಗಿ ನೋಡುವಂತ ವಿಡಿಯೋವೊಂದನ್ನ ಶೇರ್ ಮಾಡಿಕೊಂಡಿದ್ದಾರೆ. ಅದುವೇ ಡಿ ಬಾಸ್ ಸಫಾರಿಗೆ ಭೇಟಿ ನೀಡಿರುವುದು. ಕಳೆದ ವರ್ಷ ವಿಜಯಲಕ್ಷ್ಮೀ ಹಾಗೂ ಪವಿತ್ರಾ ಗೌಡ ನಡುವೆ ಅದೆಷ್ಟು ದೊಡ್ಡ ಜಗಳ ಆಯ್ತು ಅನ್ನೋದು ಎಲ್ಲರಿಗೂ ನೆನೆಪು ಇದೆ.

ಇದೇ ಡಿ ಬಾಸ್ ಸಫಾರಿಗೆ ಹೋಗಿ ಪವಿತ್ರಾ ಅಂಡ್ ಫ್ರೆಂಡ್ಸ್ ಹುಟ್ಟುಹಬ್ಬವನ್ನ ಆಚರಣೆ ಮಾಡಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಫೋಟೋಗಳು ಬಂದ ಮೇಲೆ ವಿಜಯಲಕ್ಷ್ಮೀ ಅವರು ಒಂದಷ್ಟು ಜನರಿಗೆ ಎಚ್ಚರಿಕೆಯನ್ನು ನೀಡಿದ್ದರು. ಅದರ ಬೆನ್ನಲ್ಲೇ ಪವಿತ್ರಾ ಗೌಡ ತಮ್ಮ ಹಾಗೂ ದರ್ಶನ್ ನಡುವಿನ 10 ವರ್ಷದ ಬಾಂಧವ್ಯದ ಬಗ್ಗೆ ವಿಡಿಯೋ ಹರಿಬಿಟ್ರು. ಅಲ್ಲಿಂದ ಶುರುವಾಯ್ತು ನೋಡಿ ಜೋರು ವಾರ್. ವಿಜಯಲಕ್ಷ್ಮೀ ಕೂಡ ಸುಮ್ಮನೆ ಇರಲಿಲ್ಲ. ಪವಿತ್ರಾ ಗೌಡರ ಹಳೆ ಸಂಬಂಧವನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ರು. ಹಾದಿ ರಂಪ ಬೀದಿ ರಂಪದಂತೆ ಆಗೋಯ್ತು ಈ ಕಿತ್ತಾಟ. ಬಳಿಕ ಅಶ್ಲೀಲ ಮೆಸೇಜ್, ಕೊಲೆ ಕೇಸ್, ಜೈಲುವಾಸ ಎಲ್ಲವೂ ಮುಗಿದು ಈಗ ತಾನಾಯ್ತು ತನ್ನ ಪಾಡಾಯ್ತು ಅಂತಿದ್ದಾರೆ ದರ್ಶನ್. ಅದರಲ್ಲೂ ಹೆಂಡತಿ, ಮಗ, ಮನೆ, ದೇವಸ್ಥಾನ, ಶುಟಿಂಗ್ ಅಂತ ಸಮಯ ಕಳೆಯುತ್ತಿದ್ದಾರೆ ದರ್ಶನ್.

ಇತ್ತ ಪವಿತ್ರಾ ಗೌಡ ಕೂಡ ತಾವಾಯ್ತು ತಮ್ಮ ಬಿಸಿನೆಸ್ ಆಯ್ತು ಅಂತ ಇದ್ದವರು. ಈಗ ನೋಡಿದ್ರೆ ದಿಢೀರನೇ ಡಿ ಬಾಸ್ ಸಫಾರಿಗೆ ಭೇಟಿ ನೀಡಿದ್ದಾರೆ. ಇದು ಮತ್ತೊಂದು ಜಗಳಕ್ಕೆ ನಾಂದಿ ಆಡುತ್ತಾ ಎಂಬ ಪ್ರಶ್ನೆ ನೋಡುಗರಿಗೆ ಕಾಡಿದೆ. ಆ ವಿಡಿಯೋವನ್ನು ಪವಿತ್ರಾ ಗೌಡ ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಬರ್ತಿರೋ ಕಮೆಂಟ್ ಗಳನ್ನೊಮ್ಮೆ ನೋಡಬೇಕು ನೀವೂ. ಇದೆಲ್ಲಾ ಈಗ ಬೇಕಿತ್ತಾ ಅನ್ನೋ ಪ್ರಶ್ನೆಯನ್ನೇ ಹೆಚ್ಚು ಜನ ಕೇಳಿದ್ದಾರೆ.

ಅದರಲ್ಲೂ ಈ ಡಿ ಬಾಸ್ ಸಫಾರಿಗೆ ಹೋಗಿರುವ ಪವಿತ್ರಾ ತಮ್ಮ ಲುಕ್ ಅನ್ನು ಕಂಪ್ಲೀಟ್ ಚೇಂಜ್ ಮಾಡಿಕೊಂಡಿದ್ದಾರೆ. ಹೂ ಮುಡಿದು, ತಾಳಿ ಹಾಕಿ, ಕಾಟನ್ ಸೀರೆಯುಟ್ಟು, ಬಳೆ ಹಾಕಿ, ಹಣೆಗೆ ಬೊಟ್ಟು ಇಟ್ಟು ಪಕ್ಕಾ ಗೃಹಿಣಿಯ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಹಲವರು ಇದಕ್ಕೆ ಜೈಕಾರ ಹಾಕಿದ್ರೆ ಇನ್ನು ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ದರ್ಶನ್ ಅವರ ಡೆವಿಲ್ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಾ ಇದ್ದಾರೆ. ದರ್ಶನ್ ಕೂಡ ಈ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment