ಮೈಸೂರು: ತಂದೆ-ತಾಯಿ, ಇಬ್ಬರು ಮುದ್ದಾದ ಹಡಣ್ಣು ಮಕ್ಕಳು. ಇಸ್ತ್ರಿ ಪೆಟ್ಟಿಗೆಯ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಆಡಂಬರದ ಜೀವನವಲ್ಲದೆ ಹೋದರು ಅವರದು ಸುಖ ಸಂಸಾರ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ, ಒಂದೊಳ್ಳೆ ಉದ್ಯೋಗಕ್ಕೆ ಹೋಗುವಂತೆ ಮಾಡಬೇಕು, ಅವರ ಭವಿಷ್ಯ ಉಜ್ವಲವಾಗಬೇಕು ಎಂದು ಕನಸು ಕಂಡವರು ಆ ಪೋಷಕರು. ಆದರೆ ವಿಧಿ ತಂದೆ-ತಾಯಿ ಜೊತೆಗೆ ಮಕ್ಕಳನ್ನು ಕರೆದುಕೊಂಡು ಬಿಟ್ಟಿದೆ. ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಮೃತ ಪಟ್ಟಿದ್ದಾರೆ.
![](https://suddione.com/content/uploads/2024/10/gifmaker_me-5-1.gif)
ಮೈಸೂರಿನ ಯರಗನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪ್ರತಿದಿನದಂತೆ ರಾತ್ರಿ ಊಟ ಮಾಡಿ ನಾಲ್ವರು ಮಲಗಿದ್ದಾರೆ. ಪತಿ, ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಮಲಗಿದ್ದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. 45 ವರ್ಷದ ಕುಮಾರಸ್ವಾಮಿ, 39 ವರ್ಷದ ಪತ್ನಿ ಮಂಜುಳಾ, 19 ವರ್ಷದ ಅರ್ಚನಾ, 17 ವರ್ಷದ ಸ್ವಾತಿ ಮೃತ ದುರ್ದೈವಿಗಳಾಗಿದ್ದಾರೆ.
ಕುಮಾರಸ್ವಾಮಿ ಅವರ ಕುಟುಂಬ ಅನಿಲ ಸೋರಿಕೆಯಿಂದ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅದರ ವಾಸನೆಗೆ ನಿಧನರಾಗಿರಬಹುದು ಎನ್ನಲಾಗಿದೆ. ಈ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಕಮಿಷನರ್ ರಮೇಶ್ ಬಾನೋತಾ ಭೇಟಿ ನೀಡಿದ್ದರು. ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಎಫ್ಎಸ್ಎಲ್ ಅಧಿಕಾರಿಗಳು ಕೂಡ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆಯ ನಂತರ ಹಾಗೂ ಎಫ್ಎಸ್ಎಲ್ ವರದಿ ಬಂದ ಬಳಿಕವಷ್ಟೇ ಕುಟುಂಬಸ್ಥರ ಸಾವಿಗೆ ಏನು ಕಾರಣ ಎಂಬ ಸ್ಪಷ್ಟ ಮಾಹಿತಿ ಸಿಗಲಿದೆ. ಆದರೆ ಮಕ್ಕಳ ಭವಿಷ್ಯಕ್ಕಾಗಿ ಕಷ್ಟ ಪಡುತ್ತಿದ್ದ ಇಡೀ ಕುಟುಂಬ ಹೀಗೆ ಸಾವನ್ನಪ್ಪಿದ್ದು, ಮೈಸೂರು ಜನತೆಗೆ ಶಾಕ್ ಆಗಿದೆ.
![](https://suddione.com/content/uploads/2025/01/shivasagar.webp)
![](https://suddione.com/content/uploads/2025/01/studio-11-2.webp)