ಕಲಬುರಗಿ: ರಾಜ್ಯದಲ್ಲಿ ಚುನಾವಣೆಯ ಸಂದರ್ಭದಲ್ಲಿ ಇವಿಎಂ ಮಷಿನ್ ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆ ಜಾರಿಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈ ಸಂಬಂಧ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ, ಯಾಕೆ ಕಾಂಗ್ರೆಸ್ ಪಕ್ಷಕ್ಕೆ ಇವಿಎಂ ಮಷಿನ್ ಮೇಲೆ ನಂಬಿಕೆ ಇಲ್ವಾ ಅಂತ ಕೇಳಿದಾಗ ನಿಮಗೆ ಏನು ಅನ್ನಿಸುತ್ತೆ ಎಂದು ರಿಪೀಟ್ ಪ್ರಶ್ನೆ ಕೇಳಿದ್ದಾರೆ.
ಬಳಿಕ ಉತ್ತರಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಕಳೆದ ಕೆಲವು ವರ್ಷಗಳಿಂದ ಈ ಸಂಬಂಧ ಚಳುವಳಿ ಮಾಡಿದೆ. ಇವಿಎಂನಲ್ಲಿ ಮೋಸ ಆಗ್ತಿದೆ ಅಂತ. ನಾವ್ಯಾರು ಹೇಳಿದಾಗ ಸರಿ ಇರಲ್ಲ. ಈಗ ಅವರೇಳ್ತಾರೆ ಇವಿಎಂ ಸರಿ ಇದೆ ಅಂತ. ಮತ್ತೆ ಬ್ಯಾಲೆಟ್ ಪೇಪರ್ ತಂದದ್ದು ಒಳ್ಳೆಯ ಕೆಲಸ. ಮಾಡ್ತಾ ಇದಾರೆ ಮಾಡ್ಲಿ ಎಂದಿದ್ದಾರೆ.
ಜಿಎಸ್ಟಿಯಲ್ಲಿ ಕೇಂದ್ರ ಸರ್ಕಾರ ಬದಲಾವಣೆ ತಂದಿದ್ದು, ದರ ಕಡಿಮೆಯಾಗಿರುವುದರ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಎಂಟು ವರ್ಷದ ಹಿಂದೆಯೇ ಈ ಬಗ್ಗೆ ಹೇಳಿದೆವು, ಅವರು ಕೇಳಲಿಲ್ಲ. ಈಗ ದಿಢೀರನೇ ಯಾವ ಕಾರಣಕ್ಕಾಗಿ ಮಾಡ್ತಾ ಇದ್ದಾರೆ ಎಂಬುದು ಮೋದಿಯವರಿಗೇನೆ ಗೊತ್ತು. ಇದರಿಂದ ಬಡವರಿಗೆ ಅನುಕೂಲವಾಗಿದೆ, ಇದಕ್ಕೂ ನಾನೂ ಟೀಕೆ ಮಾಡುವುದಕ್ಕೆ ಹೋಗುವುದಿಲ್ಲ. ಆದರೆ ನಾವೂ ಯಾವಾಗಲೂ ಜನಪರ ಇರುವಂತ ಸಮಸ್ಯೆಗಳನ್ನ ಎತ್ತಿ ಹಿಡಿದು ಹೇಳ್ತೇವೆ. ಅವರು ಯಾವಾಗಲೂ ಅದನ್ನ ನಿರ್ಲಕ್ಷ್ಯ ಮಾಡುತ್ತಲೇ ಬರುತ್ತಾರೆ. ನಾನೀಗ ಹೇಳಿದ್ರೆ, ನೀವೆಲ್ಲಾ ತಪ್ಪಾಗಿ ಭಾವಿಸ್ತೀರಿ. ಅವರಿಗೆ ಅಹಂಕಾರ ಏನಂದ್ರೆ ನಾವೂ ಏನೇ ಮಾಡಿದ್ರು ನಡೆಯುತ್ತೆ ಎಂಬುದು. ಇವತ್ತು ಅವರ ಅಹಂಕಾರವೇ ಅವರನ್ನ ತಿನ್ನುತ್ತಾ ಇದೆ ಎಂದಿದ್ದಾರೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.












