Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತುರುವನೂರು ಕಾಲೇಜಿನಲ್ಲಿ ಬಿ.ಸಿ.ಎ., ಬಿ.ಇಡಿ. ಇಂಟಿಗ್ರೇಟೆಡ್ ಕೋರ್ಸ್ ಆರಂಭಕ್ಕೆ ಒತ್ತಾಯ: ಗ್ರಾಮಸ್ಥರಿಂದ ಎಚ್ಚರಿಕೆ

---Advertisement---

ತುರುವನೂರಿನ ಗ್ರಾಮದ ವಿಶ್ವವಿದ್ಯಾನಿಲಯ ಘಟಕ (ಪದವಿ) ಕಾಲೇಜಿನ ಪದವಿ ವಿಷಯಗಳಾದ ಬಿ.ಸಿ.ಎ. ಮತ್ತು ಬ.ಇಡಿ.ಇಂಟೀಗ್ರೇಟೆಡ್ ಕೋರ್ಸ್‌ಗಳನ್ನು ಪ್ರಾರಂಭಿಸಲು ಪೂರ್ವಭಾವಿ ಸಭೆ.

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 27 :
ತುರುವನೂರು ಗ್ರಾಮ ಬಯಲುಸೀಮೆಯ ಅತೀ ಹಿಂದುಳಿದ ಪ್ರದೇಶವಾಗಿದ್ದು ಇಲ್ಲಿನ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಈ ಪದವಿಗಳ ಅವಶ್ಯಕತೆ ಇದೆ. ಒಂದು ಪಕ್ಷ ಈ ಪದವಿಗಳನ್ನು ಪ್ರಾರಂಭಿಸದೇ ಹೋದರೆ ಕ್ಷೇತ್ರದ ಶಾಸಕರ ಮುಖಂಡತ್ವದಲ್ಲಿ ಊರಿನ ಗ್ರಾಮಸ್ಥರು, ಮುಖಂಡರು ಒಗ್ಗೂಡಿ ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದೆಂದು ಎಂದು ಮಾಜಿ ಗ್ರಾ.ಪಂ.ಅಧ್ಯಕ್ಷರಾದ ನಾಗರಾಜಪ್ಪ ಬಿ.ಎನ್. ಹೇಳಿದರು.

ಅವರು ತುರುವನೂರು ಗ್ರಾಮದ ವಿಶ್ವವಿದ್ಯಾನಿಲಯ ಘಟಕ (ಪದವಿ) ಕಾಲೇಜಿನ ಪದವಿ ವಿಷಯಗಳಾದ ಬಿ.ಸಿ.ಎ. ಮತ್ತು ಬ.ಇಡಿ.ಇಂಟೀಗ್ರೇಟೆಡ್ ಕೋರ್ಸ್‌ಗಳನ್ನು ಪ್ರಾರಂಭಿಸಲು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಭೆಯಲ್ಲಿ ಕಾಲೇಜಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ದಾಖಲಾತಿ ಮತ್ತು ಮೂಲ ಸೌಲಭ್ಯಗಳು ಇತರ ಹೊಸ ಪದವಿ ಕೋರ್ಸ್‌ಗಳನ್ನು ಪ್ರಾರಂಭಿಸಲು ಸುಧೀರ್ಘವಾಗಿ ಚರ್ಚಿಸಿಲಾಯಿತು. ಬಹುಮುಖ್ಯವಾಗಿ ಸಭೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಬಿ.ಸಿ.ಎ. ಪದವಿಯನ್ನು ಮತ್ತು ಸಂಯೋಜಿತ ಪದವಿ (ಬಿ.ಇಡಿ.ಇಂಟಿಗ್ರೇಟೆಡ್) ಪ್ರಾರಂಭಿಸಲೇಬೇಕೆಂದು ತೀರ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಾಜಿ ಗ್ರಾ.ಪಂ.ಸದಸ್ಯರಾದ ಮಂಜುನಾಥ ಡಿ.ಆ‌ರ್. ಶಂಕರಮೂರ್ತಿ, ಡಾ.ಸುರೇಶ,ಸಿ ನಿವೃತ್ತ ಪ್ರಾಂಶುಪಾಲರು, ಶೇಷಾದ್ರಿರೆಡ್ಡಿ, ನಿವೃತ್ತ ಕೆ.ಎ.ಎಸ್. ಅಧಿಕಾರಿಗಳು, ವಿವೇಕಾನಂದಪ್ಪ-ನಿವೃತ್ತ ಶಿಕ್ಷಕರು, ಕಾಕಿ ಹನುಮಂತರೆಡ್ಡಿ ಮತ್ತಿತರ ಮುಖಂಡರು ಹಾಗೂ ಪೋಷಕರು, ವಿದ್ಯಾರ್ಥಿಗಳು ಕಾಲೇಜಿನ ಎಲ್ಲಾ ಸಿಬ್ಬಂಧಿ ವರ್ಗದವರು ಭಾಗವಹಿಸಿದ್ದರು.

ಈ ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಸಂಯೋಜನಾಧಿಕಾರಿಗಳಾದ ಡಾ.ರೂಪೇಶ್ ಕುಮಾರ್.ಆರ್. ಕೆ.ಮಹೇಶ್‌ರವರು ನಿರೂಪಿಸಿದರೆ, ಡಾ.ಮಾರುತಿಯವರು ಸ್ವಾಗತಿಸಿ ಮತ್ತು ಡಾ.ವಿಶ್ವನಾಥ ಕೆ.ಎನ್. ವಂದಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...