ಚಿಕ್ಕಮಗಳೂರು : ಹಣ ದುರ್ಬಳಕೆ ಆರೋಪ ಎದುರಿಸುತ್ತಿದ್ದ ಮಹಿಳೆಯೊಬ್ಬರು ಇಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಅದುವೆ ವಿಡಿಯೋ ಮಾಡಿಟ್ಟು ಸೂಸೈಡ್ ಮಾಡಿಕೊಂಡಿದ್ದಾರೆ. 45 ವರ್ಷದ ಉಷಾ ಆತ್ಮಹತ್ಯೆಗೆ ಶರಣಾದಮಹಿಳೆ. ಹಾಲು ಉತ್ಪಾದಕರ ಸಂಘದಲ್ಲಿ ಹಣ ದುರ್ಬಳಕೆ ಆರೋಪ ಕೇಳಿ ಬಂದ ಕಾರಣ ಮಹಿಳಾ ಸಂಘದ ಕಾರ್ಯದರ್ಶಿ ಆಗಿದ್ದ ಉಷಾ, ಸಾವಿಗೀಡಾಗಿದ್ದಾರೆ.
2010ರಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಆರಂಭವಾಗಿತ್ತು. ಅಲ್ಲಿಂದಲೂ ಉಷಾ ಅವರೇ ಸಂಘದ ಕಾರ್ಯದರ್ಶಿಯಾಗಿದ್ದರು. ಕಳೆದ ವರ್ಷ ಅಂದ್ರೆ 2025ರಲ್ಲಿ ಸಂಘಕ್ಕೆ ಹೊಸ ಸದಸ್ಯರು ಸೇರ್ಪಡೆಗೊಂಡರು. ಬಳಿಕ ಎಲ್ಲಾ ಲೆಕ್ಕಪತ್ರ ಕೇಳಲು ಹೊಸ ಸದಸ್ಯರು ಪ್ರಾರಂಭ ಮಾಡಿದ್ದರು. ಲೆಕ್ಕಪತ್ರ ಕಳೆದು ಹೋಗಿದೆ ಎಂಬ ಉತ್ತರವೇ ಬಂದಿತ್ತು. ಹೀಗಾಗಿಯೇ ಅವರ ವಿರುದ್ಧ ಹಣ ದುರ್ಬಳಕೆಯ ಆರೋಪ ಕೇಳಿ ಬಂದಿತ್ತು. ಇದರಿಂದ ನೊಂದ ಉಷಾ, ಈ ಕಿರುಕುಳವನ್ನ ನನ್ನಿಂದ ತಡೆಯಲು ಆಗುತ್ತಿಲ್ಲ. ಲೆಕ್ಕಪತ್ರ ಪುಸ್ತಕ ಕಳೆದು ಹೋಗಿರುವುದು ನನ್ನಿಂದಾದ ತಪ್ಪು ಅಂತ ಹೇಳಿ, ವಿಡಿಯೋ ಮಾಡಿಟ್ಟು ನೇಣಿಗೆ ಶರಣಾಗಿದ್ದಾರೆ.
ಈ ಸಂಬಂಧ ಮೃತ ಉಷಾ ಪತಿ ಪೊಲೀಸರಿಗೆ ಒಂದಷ್ಟು ಜನರ ಮೇಲೆ ದೂರು ನೀಡಿದ್ದಾರೆ. ನನ್ನ ಹೆಂಡತಿ ಸಾವಿಗೆ ಕೆಲವರ ಕಿರುಕುಳವೇ ಕಾರಣ ಎಂದು ದೂರಿದ್ದಾರೆ. ಆಕೆ ಎಲ್ಲಾ ಲೆಕ್ಕಪತ್ರ ನೀಡಿದ್ದರು, ಕಿರುಕುಳ ನೀಡುತ್ತಿದ್ದರು. ಕುಟುಂಬಕ್ಕೂ ಜೀವ ಬೆದರಿಕೆ ಇತ್ತು ಎಂದು ಆರೋಪಿಸಿದ್ದಾರೆ. ತನ್ನ ಪತ್ನಿ ಸಾವಿಗೆ ಕಾರಣರಾದವರು ಯಾರೆಂದು ವಿಡಿಯೋದಲ್ಲಿಯೇ ಹೇಳಿದ್ದಾಳೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















